ಇಂಟರ್ನೆಟ್ ಡೇಟಾ ಖಾಲಿ ಮಾಡಿದ ಸಹೋದರನ ಇರಿದು ಕೊಲೆ

ಸೆಲ್ ಫೋನ್ ಡೇಟಾ ಖಾಲಿ ಮಾಡಿದ ಸಹೋದರನನ್ನು ಇರಿದು ಕೊಲೆ ಮಾಡಿದ ಆಘಾತಕಾರಿ ಘಟನೆ ರಾಜಸ್ಥಾನದಲ್ಲಿ ನಡೆದಿದೆ

ಇಂಟರ್ನೆಟ್ ಡೇಟಾ ಖಾಲಿ ಮಾಡಿದ ಸಹೋದರನ ಇರಿದು ಕೊಲೆ

( Kannada News Today ) : ಜೋಧಪುರ : ಸೆಲ್ ಫೋನ್ ಡೇಟಾ ಖಾಲಿ ಮಾಡಿದ ಸಹೋದರನನ್ನು ಇರಿದು ಕೊಲೆ ಮಾಡಿದ ಆಘಾತಕಾರಿ ಘಟನೆ ರಾಜಸ್ಥಾನದಲ್ಲಿ ನಡೆದಿದೆ.

ಹೌದು ರಾಜಸ್ಥಾನದಲ್ಲಿ ಆಘಾತಕಾರಿ ಘಟನೆ ನಡೆದಿದ್ದು, ಸಹೋದರನೊಬ್ಬ ತನ್ನ ಸೆಲ್ ಫೋನ್‌ನ ಇಂಟರ್ನೆಟ್ ಡೇಟಾ ಖಾಲಿ ಮಾಡಿದ ಕೋಪಕ್ಕೆ ಸಹೋದರನನ್ನು ಇರಿದು ಕೊಂದಿದ್ದಾನೆ.

ಸೆಲ್ ಫೋನ್ ವ್ಯಾಮೋಹದಲ್ಲಿ ಇದರ ಬಳಕೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದರೆ, ಅದನ್ನು ಬಳಸುವಾಗ ಮಾನವ ಸಂಬಂಧಗಳಲ್ಲಿ ಉಂಟಾಗುವ ಸಮಸ್ಯೆಗಳೂ ಹೆಚ್ಚುತ್ತಿವೆ.

ರಾಜಸ್ಥಾನದಲ್ಲಿ ಯುವಕನೊಬ್ಬ ತನ್ನ ಸೆಲ್ ಫೋನ್‌ನಲ್ಲಿ ಡೇಟಾ ಖಾಲಿ ಮಾಡಿದ ಎಂದು ತನ್ನ ಸಹೋದರನನ್ನು ಇರಿದು ಕೊಂದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

“ರಾಯ್ ಎಂಬಾತನೇ ಮೃತ. ರಾಯ್ ಬುಧವಾರ ತನ್ನ ಸಹೋದರ ರಾಮನ್ ಅವರ ಸೆಲ್ ಫೋನ್ ಬಳಸಿದ್ದಾರೆ. ತದನಂತರ ಅದನ್ನು ಹಿಂದಿರುಗಿಸಿದ್ದಾರೆ.

ಅವನ ಸಹೋದರ ರಾಮನ್ ತನ್ನ ಸೆಲ್ ಫೋನ್ ಬಳಸಲು ಪ್ರಯತ್ನಿಸಿದಾಗ ಫೋನ್ನಲ್ಲಿ ಇಂಟರ್ನೆಟ್ ಇಲ್ಲದೇ ಇರುವುದನ್ನ ಗಮನಿಸಿ ಕೋಪಗೊಂಡು ಸಹೋದರ ರಾಯ್ ಇರಿದು ಬಳಿಕ ಪರಾರಿಯಾಗಿದ್ದಾನೆ.

ಮನೆಯ ಮೆಟ್ಟಿಲುಗಳ ಮೇಲೆ ರಾಯ್ ಸಾವು ಬದುಕಿನ ನಡುವೆ ಹೋರಾಡುತ್ತಿರುವುದನ್ನು ಕಂಡು ಮನೆಯವರು ಆಘಾತಕ್ಕೊಳಗಾಗಿ ತಕ್ಷಣ ಆಸ್ಪತ್ರೆಗೆ ಸಾಗಿಸಿದರು. ಆದರೆ ರಾಯ್ ಮಾರ್ಗಮದ್ಯೆಯೇ ಮೃತಪಟ್ಟಿದ್ದಾರೆ ಎಂದು ವೈದ್ಯರು ಹೇಳಿದ್ದಾರೆ.

ಸಹೋದರನಿಗೆ ಇರಿದ ನಂತರ ಪರಾರಿಯಾಗಿದ್ದ ರಾಮನ್‌ನನ್ನು ಶುಕ್ರವಾರ ರೈಲ್ವೆ ನಿಲ್ದಾಣದಲ್ಲಿ ಬಂಧಿಸಲಾಗಿದೆ.

Web title : Brother stabbed to death as cell phone runs out of internet

Scroll Down To More News Today