ಪೊಲೀಸರಿಗೆ ಹೊಸ ಸವಾಲು, ತನ್ನ 2ನೇ ಹೆಂಡತಿಯನ್ನು ಭೇಟಿಯಾಗಲು ಪಾಸ್ ಕೇಳಿದ ಭೂಪ

Can I Leave Home to Meet my 2nd Wife, Dubai Police Solves This Problem

ನವದೆಹಲಿ : ಕರೋನವೈರಸ್ ಮಾರಕದಿಂದ ಅಭೂತಪೂರ್ವ ಪರಿಸ್ಥಿತಿಯ ಮಧ್ಯೆ, ವಿಶ್ವದಾದ್ಯಂತ ಪೊಲೀಸ್ ಸಿಬ್ಬಂದಿ ಪ್ರತಿದಿನ ಹೊಸ ಸವಾಲುಗಳನ್ನು ಎದುರಿಸುತ್ತಿದ್ದಾರೆ. ಅದು ಒಂದೊಂದಲ್ಲ. ಜನರ ವಿಚಿತ್ರ ವಿಚಿತ್ರ ಬೇಡಿಕೆ ಮತ್ತು ಮನವಿಗಳಿಗೆ ನಗಬೇಕೋ ಅಳಬೇಕೊ ಅಥವಾ ಅಸಹಾಯಕತೆ ಅಂದು ಕೊಳ್ಳಬೇಕೋ ಭಗವಂತನೇ ಬಲ್ಲ.

ದುಬೈನ ವ್ಯಕ್ತಿಯೊಬ್ಬರು ಪೊಲೀಸರಿಗೆ ಕರೆ ಮಾಡಿದ್ದಾನೆ, ಅಲ್ಲಿ ದುಬೈ ಪೊಲೀಸರ ಸಂಚಾರ ವಿಭಾಗದ ನಿರ್ದೇಶಕ ಬ್ರಿಗೇಡಿಯರ್ ಸೈಫ್ ಮುಹೈರ್ ಅಲ್ ಮಜ್ರೌಯಿ ಅವರು COVID-19 ಲಾಕ್‌ಡೌನ್‌ಗೆ ಸಂಬಂಧಿಸಿದಂತೆ ಕರೆ ಮಾಡಿದವರ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದರು. ಅಂತೆಯೇ ಈ ವ್ಯಕ್ತಿಯ ಕರೆಯನ್ನೂ ಸ್ವೀಕರಿಸಿ, ಹೇಳಿ ನಿಮಗೆ ಯಾವ ರೀತಿ ಸಹಾಯವಾಗಬೇಕು ? ಎಂದಿದ್ದಾರೆ.

ಅಷ್ಟೇ, “ಸ್ವಾಮೀ ನಾನು ಇಬ್ಬರು ಮಹಿಳೆಯರನ್ನು ಮದುವೆಯಾಗಿದ್ದೇನೆ. ನಾನು ಇಬ್ಬರ ಮನೆಗೂ ಆಗಾಗ ಹೋಗಲು ಪರವಾನಗಿ ಪಡೆಯಬೇಕೇ? ” ಎಂದಿದ್ದಾನೆ. ವ್ಯಕ್ತಿಯ ಈ ಪೀಕಲಾಟ ಕೇಳಿದ ಪೊಲೀಸ್ ಅಧಿಕಾರಿ ನಕ್ಕರು ಮತ್ತು ಅವನ ಪ್ರಶ್ನೆಗೆ ಉತ್ತರ ನೀಡುತ್ತಾ, ನಿಮ್ಮ ಹೆಂಡಿತಿಯರನ್ನು ಕೇಳಿ, ನಿಮ್ಮನ್ನು ನೋಡಲು ಯಾರಿಗೆ ಇಷ್ಟವಿಲ್ಲವೆಂದು, ಮತ್ತು ಯಾರಿಗೆ ಇಷ್ಟವಿದೆ ಎಂದು, ಆಗ ಅವರ ಮನೇಲೆ ಉಳಿದುಕೊಳ್ಳಿ ಎಂದಿದ್ದಾರೆ, ತಲೆನೋವಿನ ಪ್ರಶ್ನೆಗೆ ಸಲೀಸಾಗೆ ಸಲಹೆ ನೀಡಿದರು ಎಂದು ಗಲ್ಫ್ ನ್ಯೂಸ್ ವರದಿ ಮಾಡಿದೆ.