ಹತ್ರಾಸ್ ಅತ್ಯಾಚಾರ ಪ್ರಕರಣ: 4 ಆರೋಪಿಗಳ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಸಿದ ಸಿಬಿಐ

ದೇಶವನ್ನು ಬೆಚ್ಚಿಬೀಳಿಸಿದ ಉತ್ತರ ಪ್ರದೇಶದ ಹತ್ರಾಸ್‌ನ 19 ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ಮತ್ತು ಹತ್ಯೆ ಪ್ರಕರಣದ ನಾಲ್ವರು ಆರೋಪಿಗಳ ವಿರುದ್ಧ ಸಿಬಿಐ ಇಂದು ದೋಷಾರೋಪ (ಚಾರ್ಜ್‌ಶೀಟ್) ದಾಖಲಿಸಿದೆ.

(Kannada News) : ನವದೆಹಲಿ:  ದೇಶವನ್ನು ಬೆಚ್ಚಿಬೀಳಿಸಿದ ಉತ್ತರ ಪ್ರದೇಶದ ಹತ್ರಾಸ್‌ನ 19 ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ಮತ್ತು ಹತ್ಯೆ ಪ್ರಕರಣದ ನಾಲ್ವರು ಆರೋಪಿಗಳ ವಿರುದ್ಧ ಸಿಬಿಐ ಇಂದು ದೋಷಾರೋಪ (ಚಾರ್ಜ್‌ಶೀಟ್) ದಾಖಲಿಸಿದೆ.

ಉತ್ತರ ಪ್ರದೇಶದ ಹತ್ರಾಸ್ ಜಿಲ್ಲೆಯ (Uttar Pradesh’s Hathras district) 19 ವರ್ಷದ ದಲಿತ ಮಹಿಳೆ ಮೇಲೆ ನಾಲ್ವರ ಗ್ಯಾಂಗ್ ಸಾಮೂಹಿಕ ಅತ್ಯಾಚಾರ ಎಸಗಿದ್ದರು. ಚಿಕಿತ್ಸೆಗಾಗಿ ದೆಹಲಿಯ ಸಪ್ತಾರ್ ಜಂಗ್ ಆಸ್ಪತ್ರೆಗೆ ದಾಖಲಾಗಿದ್ದ ಯುವತಿ ಸಾವನ್ನಪ್ಪಿದರು.

Hathras rape case
Hathras rape case

ಇದರ ಬೆನ್ನಲ್ಲೇ ಯುವತಿಯ ಶವವನ್ನು ರಾತ್ರಿ ಬಲವಂತವಾಗಿ ಹತ್ರಾಸ್‌ಗೆ ತಂದು ಪೊಲೀಸರು ಅಂತ್ಯಕ್ರಿಯೆ ನಡೆಸಿದರು.

ಈ ಘಟನೆಯ ಬಗ್ಗೆ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳಾದ ಪ್ರಿಯಾಂಕಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರು ಬಿಜೆಪಿ ಸರ್ಕಾರ ಮತ್ತು ರಾಜ್ಯದ ಕಾನೂನು ಸುವ್ಯವಸ್ಥೆ ವಿರುದ್ಧ ವಾಗ್ದಾಳಿ ನಡೆಸಿದರು.

ಹತ್ರಾಸ್ ಅತ್ಯಾಚಾರ ಪ್ರಕರಣ
ಹತ್ರಾಸ್ ಅತ್ಯಾಚಾರ ಪ್ರಕರಣ

ಸಂತ್ರಸ್ತೆಯ ಕುಟುಂಬಕ್ಕೆ ಸಂತಾಪ ಸೂಚಿಸಿಲು ತೆರಳಿದ್ದ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಅವರನ್ನು ತಡೆಯಲಾಗಿತ್ತು,ಅವರ ಮೇಲೆ ಪೊಲೀಸರು ತಳ್ಳಾಟ ನಡೆಸಿದ ಬಗ್ಗೆ ಗೊಂದಲ ಸೃಷ್ಟಿಯಾಗಿತ್ತು..

ವಿವಿಧ ಭಾಗಗಳಿಂದ ತೀವ್ರ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಪ್ರಕರಣವನ್ನು ಸಿಬಿಐಗೆ ವರ್ಗಾಯಿಸುವಂತೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್ ಶಿಫಾರಸು ಮಾಡಿದರು. ಇದರ ಬೆನ್ನಲ್ಲೇ ಗಾಜಿಯಾಬಾದ್ ಸಿಬಿಐ ತನಿಖೆ ಆರಂಭಿಸಿತು.

ಪ್ರಕರಣದ ತನಿಖೆ ನಡೆಸಲು ಪ್ರಾರಂಭಿಸಿದ ಸಿಬಿಐ, ಸಂದೀಪ್, ಲವಕುಶ್, ರವಿ ಮತ್ತು ರಾಮ್ ಎಂಬ ಆರೋಪಿಗಳನ್ನು ಬಂಧಿಸಿದ್ದರು.

ಸಂತಾಪ ಸೂಚಿಸಿಲು ತೆರಳಿದ್ದ ರಾಹುಲ್ ಗಾಂಧಿ
ಸಂತಾಪ ಸೂಚಿಸಿಲು ತೆರಳಿದ್ದ ರಾಹುಲ್ ಗಾಂಧಿ

ಅವರ ಮೇಲೆ ಸಿಬಿಐ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಆರೋಪ ಪ್ರಕರಣದ ತನಿಖೆ ಪೂರ್ಣಗೊಳಿಸಿರುವ ಸಿಬಿಐ ಇಂದು ಮೊದಲ ಹಂತದ ಚಾರ್ಜ್‌ಶೀಟ್ ಅನ್ನು ಹತ್ರಾಸ್ ನ್ಯಾಯಾಲಯದಲ್ಲಿ ಸಲ್ಲಿಸಿದೆ .

ಈ ವೇಳೆ “ಸಂದೀಪ್, ಲವಕುಶ್, ರವಿ ಮತ್ತು ರಾಮು ವಿರುದ್ಧ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಆರೋಪ ಹೊರಿಸಲಾಗಿದೆ” ಎಂದು ಆರೋಪಿ ವಕೀಲರು ಹೇಳಿದ್ದಾರೆ.

Web Title : CBI files chargesheet against 4 accused in Hathras rape case