ಕೇಂದ್ರ ಸರ್ಕಾರ ಯುವಕರ ಧ್ವನಿಯನ್ನು ಆಲಿಸಬೇಕು – ರಾಹುಲ್ ಗಾಂಧಿ

Central government should listen Voice of the youth

ಕನ್ನಡ ನ್ಯೂಸ್ ಟುಡೇ

ನವದೆಹಲಿ : ದೇಶದ ಆರ್ಥಿಕ ಸ್ಥಿತಿ ಕಠಿಣ ಹಂತದಲ್ಲಿದ್ದು, ವಿಶ್ವವಿದ್ಯಾಲಯಗಳಲ್ಲಿ ಹಿಂಸಾಚಾರ ವ್ಯಾಪಕವಾಗಿ ಹರಡಿರುವ ಈ ಸಂದರ್ಭದಲ್ಲಿ, ಇಂತಹ ಸಮಸ್ಯೆಗಳನ್ನು ನಿಭಾಯಿಸುವಲ್ಲಿ ವಿಫಲರಾಗಿದ್ದಾರೆ ಎಂದು ಕೇಂದ್ರ ಸರ್ಕಾರದ ಮೇಲೆ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಸೋಮವಾರ ತೀವ್ರವಾಗಿ ವಾಗ್ದಾಳಿ ನಡೆಸಿದ್ದಾರೆ. ಸರ್ಕಾರ, ವಿಚಲಿತಗೊಳಿಸುವ ಮೂಲಕ ರಾಷ್ಟ್ರಕ್ಕೆ ದೊಡ್ಡ ಅಪಚಾರ ಮಾಡುತ್ತಿದೆ ಎಂದು ಅವರು ಹೇಳಿದ್ದಾರೆ.

ಸಿಎಎ ಮತ್ತು ಎನ್‌ಆರ್‌ಸಿ ಕುರಿತ ಪ್ರತಿಪಕ್ಷಗಳ ಸಭೆಯಲ್ಲಿ ಭಾಗವಹಿಸಿದ ನಂತರ ರಾಹುಲ್ ಗಾಂಧಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ, “ಪಿಎಂ ನರೇಂದ್ರ ಮೋದಿ ಅವರು ದೇಶದ ಜನರನ್ನು ವಿಚಲಿತಗೊಳಿಸುವ ಮತ್ತು ವಿಭಜಿಸುವ ಮೂಲಕ ರಾಷ್ಟ್ರಕ್ಕೆ ದೊಡ್ಡ ಅಪಚಾರ ಮಾಡುತ್ತಿದ್ದಾರೆ, ಎಂದರು.

ದೇಶದ ಆರ್ಥಿಕತೆಯು ಕ್ಷೀಣಿಸುತ್ತಿರುವ ಬಗ್ಗೆ ಮಾತನಾಡಿದ ರಾಹುಲ್, ದೇಶದ ಆರ್ಥಿಕ ಬಿಕ್ಕಟ್ಟು ಮತ್ತು ನಿರುದ್ಯೋಗದ ಬಗ್ಗೆ ಯುವಕರೊಂದಿಗೆ ಮಾತನಾಡುವ ಧೈರ್ಯವನ್ನು ಪ್ರಧಾನಿ ಮೋದಿ ಹೊಂದಿರಬೇಕು, ಆದರೆ “ಪ್ರಧಾನಿ ಮೋದಿ ಅವರಿಗೆ ಅದನ್ನು ಮಾಡಲು ಧೈರ್ಯವಿಲ್ಲ. ಯಾವುದೇ ವಿಶ್ವವಿದ್ಯಾನಿಲಯಕ್ಕೆ ದೈರ್ಯವಾಗಿ ಪೊಲೀಸರು ಇಲ್ಲದೆ ಹೋಗಲಿ ಎಂದು ಸವಾಲು ಹಾಕುತ್ತೇನೆ,   ”ಎಂದು ರಾಹುಲ್ ಹೇಳಿದರು.

ಬಿಜೆಪಿ ಮುಖಂಡರು ಯುವಕರ ಸಮಸ್ಯೆಯನ್ನು ಪರಿಹರಿಸುವ ಬದಲು ರಾಷ್ಟ್ರವನ್ನು ಬೇರೆಡೆಗೆ ತಿರುಗಿಸಲು ಮತ್ತು ಜನರನ್ನು ವಿಭಜಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಅವರು ಕಿಡಿಕಾರಿದರು. “ಯುವಕರ ಧ್ವನಿ ನ್ಯಾಯಸಮ್ಮತವಾಗಿದೆ, ಅದನ್ನು ನಿಗ್ರಹಿಸಬಾರದು, ಕೇಂದ್ರ ಸರ್ಕಾರ ಅದನ್ನು ಕೇಳಬೇಕು” ಎಂದು ಅವರು ಒತ್ತಾಹಿಸಿದ್ದಾರೆ.////