ಕಾಲಿವುಡ್ ನಲ್ಲಿ ಶಾಕ್, ಖ್ಯಾತ ನಟನ ಮನೆಗೆ ಸೀಲ್..!

ನಟ ಮನ್ಸೂರ್ ಅಲಿ ಖಾನ್ ಮನೆಗೆ ಚೆನ್ನೈ ಮಹಾನಗರ ಪಾಲಿಕೆ ಅಧಿಕಾರಿಗಳು ಸೀಲ್ ಮಾಡಿದ್ದಾರೆ.  ನಟ, ನಿರ್ಮಾಪಕ ಮತ್ತು ರಾಜಕಾರಣಿ ಮನ್ಸೂರ್ ಅಲಿ ಖಾನ್ ಸ್ಥಳೀಯ ಚೂಲೈಮೇಡುನಲ್ಲಿ ಮನೆ ಹೊಂದಿದ್ದಾರೆ. ಅದರಲ್ಲಿ ಅವರು ತಮ್ಮ ಕುಟುಂಬ ಸದಸ್ಯರೊಂದಿಗೆ ವಾಸಿಸುತ್ತಿದ್ದಾರೆ.

ನಟ ಮನ್ಸೂರ್ ಅಲಿ ಖಾನ್ ಮನೆಗೆ ಚೆನ್ನೈ ಮಹಾನಗರ ಪಾಲಿಕೆ ಅಧಿಕಾರಿಗಳು ಸೀಲ್ ಮಾಡಿದ್ದಾರೆ.  ನಟ, ನಿರ್ಮಾಪಕ ಮತ್ತು ರಾಜಕಾರಣಿ ಮನ್ಸೂರ್ ಅಲಿ ಖಾನ್ ಸ್ಥಳೀಯ ಚೂಲೈಮೇಡುನಲ್ಲಿ ಮನೆ ಹೊಂದಿದ್ದಾರೆ. ಅದರಲ್ಲಿ ಅವರು ತಮ್ಮ ಕುಟುಂಬ ಸದಸ್ಯರೊಂದಿಗೆ ವಾಸಿಸುತ್ತಿದ್ದಾರೆ. ಸರ್ಕಾರಿ ಸ್ವಾಮ್ಯದ ಭೂಮಿಯನ್ನು 2,400 ಗಜಗಳಷ್ಟು ಒತ್ತುವರಿ ಮಾಡಿಕೊಂಡು ಮನೆ ನಿರ್ಮಿಸಿದ ಆರೋಪ ಅವರ ಮೇಲಿದೆ.

ಈ ಸಂಬಂಧ ಚೆನ್ನೈ ನಗರ ನಿಗಮದ ಅಧಿಕಾರಿಗಳು ಅವರಿಗೆ ನೋಟಿಸ್ ನೀಡಿದ್ದಾರೆ. ಮನ್ಸೂರ್ ಅಲಿ ಖಾನ್ ಅವರು 2019 ರಲ್ಲಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದು, ಈ ಸಂಬಂಧ ತನಗೆ ವಂಚನೆ ಮಾಡಿ ಭೂಮಿಯನ್ನು ಮಾರಾಟ ಮಾಡಿದವರ ವಿರುದ್ಧ ಕ್ರಮ ಜರುಗಿಸುವಂತೆ ಕೋರಿದ್ದರು.

ಆದರೆ, ನ್ಯಾಯಾಲಯ ಇತ್ತೀಚೆಗೆ ಅರ್ಜಿಯನ್ನು ವಜಾಗೊಳಿಸಿತ್ತು. ಅಧಿಕಾರಿಗಳು ಶನಿವಾರ ಮನ್ಸೂರ್ ಅಲಿ ಖಾನ್ ಮನೆಗೆ ಸೀಲ್ ಮಾಡಿದ್ದಾರೆ. ಈ ಸಂಬಂಧ ಈಗ ಕಾಲಿವುಡ್ ನಲ್ಲಿ ಸಂಚಲನ ಮೂಡಿಸುತ್ತಿದೆ.