Welcome To Kannada News Today

ಶಾಕಿಂಗ್, 1 ನೇ ತರಗತಿ ವಿದ್ಯಾರ್ಥಿಯಿಂದ ಅತ್ಯಾಚಾರ ಯತ್ನ

Class 1 student booked for attempt to rape in Haryana

🌐 Kannada News :

ಕನ್ನಡ ನ್ಯೂಸ್ ಟುಡೇ, ಹರಿಯಾಣ

ಅಬ್ಬಾಬ್ಬಾ… ಎಲ್ಲಿಗೆ ಬಂತು ನಮ್ಮ ಸಮಾಜ, ಆಟ ಪಾಠ ಆಡುತ್ತಾ ಕಾಲ ಕಳೆಯ ಬೇಕಿರುವ ಮಕ್ಕಳೇ ಈ ಮಾರ್ಗ ಹಿಡಿದಿದ್ದಾರೆ ಎಂದರೆ.. ಇದು ನಿಜಕ್ಕೂ ಘೋರ ಬೆಳವಣಿಗೆ. ಹೌದು ಒಂದನೇ ತರಗತಿ ವಿದ್ಯಾರ್ಥಿಯೊಬ್ಬ ಐದು ವರ್ಷದ ಬಾಲಕಿ ಮೇಲೆ ಅತ್ಯಾಚಾರ ಯತ್ನ ಮಾಡಿದ್ದಾನೆ.

ಸಂತ್ರಸ್ತೆಯ ತಾಯಿಯ ದೂರಿನ ಮೇರೆಗೆ ಹರಿಯಾಣ ಪೊಲೀಸರು 1 ನೇ ತರಗತಿ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಪ್ರಕರಣ ದಾಖಲಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಸಧ್ಯ ಬಾಲಕನನ್ನು ಗುರುತಿಸಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ.

ಈ ಘಟನೆ ಮೂರು ದಿನಗಳ ಹಿಂದೆ ಸಿರ್ಸಾ ಜಿಲ್ಲೆಯಲ್ಲಿ ನಡೆದಿದೆ ಎಂದು ಉಪ ಪೊಲೀಸ್ ವರಿಷ್ಠಾಧಿಕಾರಿ ರಮೇಶ್ ಕುಮಾರ್ ತಿಳಿಸಿದ್ದಾರೆ. ತನ್ನ ಸೋದರಸಂಬಂಧಿಗಳೊಂದಿಗೆ ಸರ್ಕಾರಿ ಪ್ರಾಥಮಿಕ ಶಾಲೆಗೆ ಹೋದ ಬಾಲಕಿ, ಮನೆಗೆ ಹಿಂದಿರುಗಿದಾಗ ಅಳುತ್ತಿದ್ದಳು, ಹಾಗೂ ವಿಚಾರಿಸಿದಾಗ ವಿಷಯ ತಿಳಿಯಿತು ಎಂದು ಬಾಲಕಿಯ ತಾಯಿ ದೂರಿನಲ್ಲಿ ತಿಳಿಸಿದ್ದಾರೆ..

ದೂರಿನಲ್ಲಿ, ವಿದ್ಯಾರ್ಥಿಯೊಬ್ಬ ತನ್ನ ಮಗಳ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ ಎಂದು ತಾಯಿ ಹೇಳಿಕೊಂಡಿದ್ದಾಳೆ. ದೂರಿನ ಆಧಾರದ ಮೇಲೆ, ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೊಕ್ಸೊ) ಕಾಯ್ದೆಯ ಸಂಬಂಧಿತ ವಿಭಾಗಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಸಧ್ಯ ಬಾಲಕಿಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಹಾಗು “ನಾವು ಹುಡುಗನನ್ನು ಗುರುತಿಸಲು ಪ್ರಯತ್ನಿಸುತ್ತಿದ್ದೇವೆ” ಎಂದು ಡಿಎಸ್ಪಿ ತಿಳಿಸಿದ್ದಾರೆ.

ಬಾಲಕನನ್ನು ಗುರುತಿಸಲು ವಿದ್ಯಾರ್ಥಿಗಳ ಚಿತ್ರಗಳನ್ನು ಸಂತ್ರಸ್ತೆಗೆ ತೋರಿಸುವುದಾಗಿ ಪೊಲೀಸರು ತಿಳಿಸಿದ್ದಾರೆ. ಘಟನೆಯ ವಿರುದ್ಧ ಗ್ರಾಮಸ್ಥರು ಸೋಮವಾರ ಶಾಲೆಯ ಹೊರಗೆ ಪ್ರತಿಭಟನೆ ನಡೆಸಿದ್ದಾರೆ.////


Web Title : Class 1 student booked for attempt to rape in Haryana
(Kannada News : Get Live News Alerts Online Today @ kannadanews.today – Read Latest Crime News / Crime News in Kannada , Breaking News in Kannada )

Web Title :

Get Latest Kannada News an up-to-date news coverage

ಕ್ಷಣ ಕ್ಷಣದ ಕನ್ನಡ ಸುದ್ದಿಗಳಿಗಾಗಿ FacebookTwitterYouTube ಅನುಸರಿಸಿ.