Congress New Rules: ಕಾಂಗ್ರೆಸ್ ಪಕ್ಷದ ಸದಸ್ಯತ್ವ ಬೇಕೇ? ಆಗಾದ್ರೆ, ಈ ನಿಯಮಗಳನ್ನು ಅನುಸರಿಸಬೇಕು!

Congress New Rules (ಕಾಂಗ್ರೆಸ್ ಹೊಸ ನಿಯಮಗಳು): ದೇಶದ ಅತ್ಯಂತ ಹಳೆಯ ಪಕ್ಷವಾದ ಕಾಂಗ್ರೆಸ್ ಸೇರುವುದು ಇನ್ನು ಮುಂದೆ ಸುಲಭವಾದ ಮಾತಲ್ಲ.. ಏಕೆಂದರೆ ಪಕ್ಷಕ್ಕೆ ಸೇರಲು ಬಯಸುವವರಿಗೆ ಪಕ್ಷವು ಹೊಸ ನಿಯಮಗಳನ್ನು ಬಿಡುಗಡೆ ಮಾಡಿದೆ.

Congress New Rules (ಕಾಂಗ್ರೆಸ್ ಹೊಸ ನಿಯಮಗಳು): ದೇಶದ ಅತ್ಯಂತ ಹಳೆಯ ಪಕ್ಷವಾದ ಕಾಂಗ್ರೆಸ್ ಸೇರುವುದು ಇನ್ನು ಮುಂದೆ ಸುಲಭವಾದ ಮಾತಲ್ಲ.. ಏಕೆಂದರೆ ಪಕ್ಷಕ್ಕೆ ಸೇರಲು ಬಯಸುವವರಿಗೆ ಪಕ್ಷವು ಹೊಸ ನಿಯಮಗಳನ್ನು ಬಿಡುಗಡೆ ಮಾಡಿದೆ.

ಹೊಸ ನಿಯಮಗಳ ಪ್ರಕಾರ, ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ಅರ್ಜಿ ಸಲ್ಲಿಸುವವರು ಮದ್ಯ ಮತ್ತು ಮಾದಕ ವಸ್ತುಗಳಿಂದ ದೂರವಿರುತ್ತೇವೆ ಎಂದು ಘೋಷಿಸಬೇಕು.

ಅದರ ಹೊರತಾಗಿ, ಪಕ್ಷದ ನೀತಿಗಳನ್ನು ಬಹಿರಂಗವಾಗಿ ಟೀಕಿಸದಿರಲು ಪ್ರತಿಜ್ಞೆ ಮಾಡಬೇಕು. ಹೊಸ ನಮೂನೆಯ ಪ್ರಕಾರ ಸದಸ್ಯತ್ವವನ್ನು ನೋಂದಾಯಿಸುವ ಮೊದಲು.. ಹೊಸ ಸದಸ್ಯರು ಕೆಲವು ವೈಯಕ್ತಿಕ ಭರವಸೆಗಳನ್ನು ನೀಡಬೇಕಾಗುತ್ತದೆ.

ಸದಸ್ಯತ್ವ ಕಾರ್ಯಕ್ರಮವು ನವೆಂಬರ್ 1 ರಿಂದ ಪ್ರಾರಂಭವಾಗಲಿದೆ. ಇದು ಮುಂದಿನ ವರ್ಷ ಮಾರ್ಚ್ 31ರವರೆಗೆ ಮುಂದುವರಿಯಲಿದೆ. ಮುಂದಿನ ವರ್ಷ ಆಗಸ್ಟ್ 21 ರಿಂದ ಸೆಪ್ಟೆಂಬರ್ 20 ರವರೆಗೆ ನೂತನ ಕಾಂಗ್ರೆಸ್ ಅಧ್ಯಕ್ಷರ ಆಯ್ಕೆ ನಡೆಯಲಿದೆ. ಇತ್ತೀಚಿನ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯಲ್ಲಿ ಈ ನಿರ್ಧಾರಗಳನ್ನು ಅನುಮೋದಿಸಲಾಗಿದೆ.

ಇವೇ ಪ್ರಮುಖ ಮಾನದಂಡ..!

  1. ಹೊಸ ಸದಸ್ಯರು ಆದಾಯಕ್ಕಿಂತ ಹೆಚ್ಚಿನ ಆಸ್ತಿಯನ್ನು ಹೊಂದಿರಬಾರದು.
  2. ಪಕ್ಷದ ನೀತಿಗಳು ಮತ್ತು ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಕು.
  3. ದೈಹಿಕ ಚಟುವಟಿಕೆ ಅಥವಾ ಕಾರ್ಯಗಳನ್ನು ಮಾಡಲು ಹಿಂಜರಿಯಬಾರದು.
  4. ಆಲ್ಕೋಹಾಲ್ ಮತ್ತು ಡ್ರಗ್ಸ್ ನಿಂದ ದೂರವಿರಬೇಕು.
  5. ಪಕ್ಷದ ನೀತಿಗಳನ್ನು ಬಹಿರಂಗವಾಗಿ ಟೀಕಿಸಬಾರದು.
  6. ಖಾದಿ ಧರಿಸುವುದನ್ನು ರೂಢಿಸಿಕೊಳ್ಳಬೇಕು.
  7. ಯಾವುದೇ ಸಾಮಾಜಿಕ ತಾರತಮ್ಯ ಇರಬಾರದು.
  8. ಸಮಾಜದಲ್ಲಿನ ತಾರತಮ್ಯ ಹೋಗಲಾಡಿಸಲು ಶ್ರಮಿಸಬೇಕು.

ಹೊಸ ನಿಯಮಗಳು ಸಂವಿಧಾನದ ಭಾಗವಾಗಿದೆ ಎಂದು ಹಿರಿಯ ಕಾಂಗ್ರೆಸ್ ನಾಯಕ ಮಧುಸೂದನ್ ಮಿಸ್ತ್ರಿ ಹೇಳಿದ್ದಾರೆ. ಇದು ಹಳೆಯ ಅರ್ಜಿ ನಮೂನೆ, ನಮ್ಮ ಪಕ್ಷದ ಸಂವಿಧಾನದ ಭಾಗ ಎಂದು ಅವರು ಹೇಳಿದರು. ಎಲ್ಲಾ ಹೊಸ ಮತ್ತು ಹಳೆಯ ಸದಸ್ಯರು ಎಲ್ಲಾ ನಿಯಮಗಳನ್ನು ಅನುಸರಿಸುತ್ತಾರೆ ಎಂದು ಭಾವಿಸುತ್ತೇವೆ. ಎಂದು ವಿಶ್ವಾಸ ವ್ಯಕ್ತಪಡಿಸಿದರು

Stay updated with us for all News in Kannada at Facebook | Twitter
Scroll Down To More News Today