ಎಲ್‌ಪಿಜಿ ಸಿಲಿಂಡರ್ ವಿತರಿಸುವ ವ್ಯಕ್ತಿಗೆ ಗ್ರಾಹಕರು ವಿತರಣಾ ಶುಲ್ಕವನ್ನು ಪಾವತಿಸಬೇಕಾಗಿಲ್ಲ

ಗ್ಯಾಸ್ ಸಿಲಿಂಡರ್ ವಿತರಿಸುವ ವ್ಯಕ್ತಿಗಳಿಗೆ ಗ್ರಾಹಕರು ವಿತರಣಾ ಶುಲ್ಕವನ್ನು ಪಾವತಿಸಬೇಕಾಗಿಲ್ಲ ಎಂದು ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಶನ್ ಲಿಮಿಟೆಡ್ (ಎಚ್‌ಪಿಸಿಎಲ್) ಮಾಹಿತಿ ಹಕ್ಕು (ಆರ್‌ಟಿಐ) ಅರ್ಜಿಗೆ ಉತ್ತರಿಸಿದೆ.

(Kannada News) : ಗ್ಯಾಸ್ ಸಿಲಿಂಡರ್ ವಿತರಿಸುವ ವ್ಯಕ್ತಿಗಳಿಗೆ ಗ್ರಾಹಕರು ವಿತರಣಾ ಶುಲ್ಕವನ್ನು ಪಾವತಿಸಬೇಕಾಗಿಲ್ಲ ಎಂದು ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಶನ್ ಲಿಮಿಟೆಡ್ (ಎಚ್‌ಪಿಸಿಎಲ್) ಮಾಹಿತಿ ಹಕ್ಕು (ಆರ್‌ಟಿಐ) ಅರ್ಜಿಗೆ ಉತ್ತರಿಸಿದೆ.

 “ಮನೆ / ಫ್ಲಾಟ್‌, ನೆಲ ಮಹಡಿ ಸ್ಥಳವನ್ನು ಲೆಕ್ಕಿಸದೆ ಗ್ಯಾಸ್ ಸಿಲಿಂಡರ್ ಅನ್ನು ಗ್ರಾಹಕರ ಮನೆ ಬಾಗಿಲಿಗೆ ತಲುಪಿಸುವುದು ಅನಿಲ ವಿತರಕರ ಜವಾಬ್ದಾರಿ ಎಂದು ಉಲ್ಲೇಖಿಸಿದೆ.

ನಿಗದಿ ಮೊತ್ತವನ್ನು ಹೊರತುಪಡಿಸಿ ಯಾವುದೇ ಹೆಚ್ಚುವರಿ ಶುಲ್ಕವನ್ನು ಸಂಗ್ರಹಿಸುವಂತಿಲ್ಲ” ಎಂದು ಎಚ್‌ಪಿಸಿಎಲ್ ತನ್ನ ಉತ್ತರದಲ್ಲಿ ತಿಳಿಸಿದೆ.

ಗ್ಯಾಸ್ ಸಿಲಿಂಡರ್ ವಿತರಿಸಿದ ನಂತರ ಹೆಚ್ಚುವರಿ ಶುಲ್ಕವನ್ನು ಪಾವತಿಸಲು ಕೇಳಿದಾಗ ಹೈದರಾಬಾದ್ ನಿವಾಸಿ ಕರೀಮ್ ಅನ್ಸಾರಿ ಅವರು ಆರ್‌ಟಿಐ ಸಲ್ಲಿಸಿದ್ದರು.

ಸಿಲಿಂಡರ್ ವಿತರಕರು ಬೇಡಿಕೆಯಿಡುವ ಹೆಚ್ಚುವರಿ ಶುಲ್ಕವನ್ನು ಪಾವತಿಸಲು ಗ್ರಾಹಕರು ನಿರಾಕರಿಸಬಹುದು ಎಂದು ಎಚ್‌ಪಿಸಿಎಲ್ ಹೇಳಿದೆ.

WebTitle : consumers can refuse to pay extra charges to delivering LPG cylinder