ಭಾರತದಲ್ಲಿ ಮತ್ತೆ ಹೆಚ್ಚಾದ ಕೊರೊನಾ ಪ್ರಕರಣಗಳು ಮತ್ತು ಸಾವುಗಳು

ಭಾರತದಲ್ಲಿ ಕೊರೊನಾ ಪ್ರಕರಣಗಳು ಮತ್ತು ಸಾವುಗಳು ಮತ್ತೆ ಹೆಚ್ಚುತ್ತಿವೆ

ಭಾರತದಲ್ಲಿ ಮತ್ತೆ ಹೆಚ್ಚಾದ ಕೊರೊನಾ ಪ್ರಕರಣಗಳು ಮತ್ತು ಸಾವುಗಳು

( Kannada News Today ) : ನವದೆಹಲಿ: ಭಾರತದಲ್ಲಿ ಕೊರೊನಾ ಪರಿಣಾಮ ಸ್ವಲ್ಪ ಕಡಿಮೆಯಾಯ್ತು ಅಂತ ನಿಟ್ಟುಸಿರುವ ಬಿಡೋ ವೇಳೆಗೆ ಇತ್ತೀಚಿನ ಪ್ರಕರಣಗಳ ಏರಿಕೆ ಆತಂಕಕಾರಿಯಾಗಿದೆ.

ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ 45,882 ಕೊರೊನಾ ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

ಇದರೊಂದಿಗೆ .. ಭಾರತದಲ್ಲಿ ಒಟ್ಟು ಕೊರೊನಾ ಪಾಸಿಟಿವ್ ಪ್ರಕರಣಗಳ ಸಂಖ್ಯೆ 90,04,366 ತಲುಪಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 4,43,794.

ಭಾರತದಲ್ಲಿ ಕೊರೊನಾ ಸಾವಿನ ಸಂಖ್ಯೆಯೂ ಆತಂಕಕಾರಿ. ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 584 ಜನರು ಕೊರೊನಾದಿಂದ ಸಾವನ್ನಪ್ಪಿದ್ದಾರೆ ಎಂದು ಕೇಂದ್ರ ತಿಳಿಸಿದೆ. ಭಾರತದಲ್ಲಿ ಈವರೆಗೆ 1,32,162 ಜನರು ಕೊರೊನಾದಿಂದ ಸಾವನ್ನಪ್ಪಿದ್ದಾರೆ.

Web Title : Corona cases and deaths rise again in India