ಭಾರತದಲ್ಲಿ 69 ಲಕ್ಷ ಮೀರಿದ ಕರೋನಾ ಪ್ರಕರಣಗಳು

( Kannada News ) : ನವದೆಹಲಿ : ಭಾರತದಲ್ಲಿ ಕರೋನಾ ಅಟ್ಟಹಾಸ ಮುಂದುವರೆದಿದೆ. ದೇಶದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 69 ಲಕ್ಷ ದಾಟಿದೆ. ಕಳೆದ 24 ಗಂಟೆಗಳಲ್ಲಿ 70,496 ಕರೋನಾ ಪ್ರಕರಣಗಳು ವರದಿಯಾಗಿದ್ದು, 964 ಜನರು ಸಾವನ್ನಪ್ಪಿದ್ದಾರೆ.

ಇದರೊಂದಿಗೆ ದೇಶಾದ್ಯಂತ ಈವರೆಗೆ 69,06,152 ಪ್ರಕರಣಗಳು ದಾಖಲಾಗಿವೆ. ಸಾವಿನ ಸಂಖ್ಯೆ 1,06,490 ಕ್ಕೆ ತಲುಪಿದೆ. ದೇಶದಲ್ಲಿ ಪ್ರಸ್ತುತ 8,93,592 ಸಕ್ರಿಯ ಪ್ರಕರಣಗಳಿವೆ.

ಇದನ್ನೂ ಓದಿ : ತಮಿಳುನಾಡಿನಲ್ಲಿ ಕೊರೊನಾ ದಿಂದ 10 ಸಾವಿರ ಜನರ ಸಾವು

ಚಿಕಿತ್ಸೆಯಿಂದ ಚೇತರಿಸಿಕೊಂಡ ನಂತರ 59,06,070 ರೋಗಿಗಳನ್ನು ಬಿಡುಗಡೆ ಮಾಡಲಾಗಿದೆ. ದೇಶದಲ್ಲಿ ಕರೋನಾ ಚೇತರಿಕೆ ಶೇಕಡಾ 85.52 ರಷ್ಟಿದ್ದರೆ, ಸಾವಿನ ಪ್ರಮಾಣ ಶೇಕಡಾ 1.54 ರಷ್ಟಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಶುಕ್ರವಾರ ಬೆಳಿಗ್ಗೆ ತಿಳಿಸಿದೆ.

Scroll Down To More News Today