ಪೊಲೀಸ್ ಠಾಣೆ ಎದುರೇ ದಂಪತಿಗಳ ಆತ್ಮಹತ್ಯೆ ಯತ್ನ

Couple attempt suicide in front of police station

ಪೊಲೀಸರು ತಮಗೆ ಸ್ಪಂದಿಸುತ್ತಿಲ್ಲ ಎಂದು ಜಿಗುಪ್ಸೆ ಗೊಂಡ ದಂಪತಿಗಳು ಪೊಲೀಸ್ ಠಾಣೆಯ ಎದುರೇ ಸೀಮೆಎಣ್ಣೆ ಸುರಿದು ಕೊಂಡು ಆತ್ಮಹತ್ಯೆಗೆ ಯತ್ನಿಸಿ, ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರೆ…

ಕನ್ನಡ ನ್ಯೂಸ್ ಟುಡೇ, ಲಕ್ನೋ

ದಂಪತಿಗಳು ಪೊಲೀಸ್ ಠಾಣೆಯ ಎದುರೇ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿರುವ ಧಾರುಣ ಘಟನೆ ನಡೆದಿದೆ. ಸಧ್ಯ ಗಾಯಾಳುಗಳನ್ನು ದೆಹಲಿಯ ಸಫ್ದರ್ಜಂಗ್ ಆಸ್ಪತ್ರೆಗೆ ಸಾಗಿಸಲಾಗಿದೆ. ಈ ಘಟನೆ ಉತ್ತರ ಪ್ರದೇಶದ ಮಥುರಾದಲ್ಲಿ ನಡೆದಿದೆ.

ಘಟನೆಯ ವಿವರ.. ಮಥುರಾ ಜಿಲ್ಲೆಯ ಜೋಗಿಂದರ್ ಮತ್ತು ಚಂದ್ರಾವತಿ ಎಂಬ ದಂಪತಿಗಳು ಗ್ರಾಮದಲ್ಲಿ ಸ್ವಲ್ಪ ಜಮೀನನ್ನು ಹೊಂದಿದ್ದು, ಅವರ ಜಮೀನಿನ ಮೇಲೆ ಕೆಲವರು ದಬ್ಬಾಳಿಕೆ ನಡೆಸಿ, ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ತಮಗೆ ತೀವ್ರ ಕಿರುಕುಳ ನೀಡುತ್ತಿದ್ದಾರೆ, ಅಲ್ಲದೆ ಜೋಗಿಂದರ್ ತಲೆಗೆ ರಾಡ್ ನಿಂದ ಹೊಡೆದು, ಪತ್ನಿ ಚಂದ್ರವತಿಗೆ ಬೆದರಿಕೆ ಹಾಕಿದ್ದಾಗಿ ದಂಪತಿಗಳು ಪೊಲೀಸರನ್ನು ಆಶ್ರಯಿಸಿದ್ದರು.

ದೂರಿನ ಹಿನ್ನೆಲೆಯಲ್ಲಿ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ. ಮತ್ತೊಂದೆಡೆ, ಗ್ರಾಮದ ಕೆಲವು ಹಿರಿಯರು ಕೂಡ ತಮ್ಮ ಹೆಸರಿನಲ್ಲಿ ಭೂಮಿಯನ್ನು ಬರೆಯುವಂತೆ ಒತ್ತಡ ಹೇರಿದ್ದಾಗಿ, ಬೇಸರಗೊಂಡ ದಂಪತಿಗಳು ಬುಧವಾರ ಬೆಳಿಗ್ಗೆ ಸೀಮೆಎಣ್ಣೆಯೊಂದಿಗೆ ಪೊಲೀಸ್ ಠಾಣೆಗೆ ಬಂದಿದ್ದಾರೆ. ಕಿರುಕುಳ ನೀಡಿದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.

ಆದರೆ, ಪೊಲೀಸರಿಂದ ಯಾವುದೇ ಪ್ರತಿಕ್ರಿಯೆ ಸಿಗದಿದ್ದ ಕಾರಣ, ಪೊಲೀಸ್ ಠಾಣೆಯ ಎದುರೇ ಬೆಂಕಿಯಿಟ್ಟು ಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ.. ಅಲ್ಲಿದ್ದ ಕೆಲವು ಪೊಲೀಸರು ಅವರನ್ನು ರಕ್ಷಿಸಿ, ನಂತರ ಅವರನ್ನು ಹತ್ತಿರದ ಆಸ್ಪತ್ರೆಗೆ ಸಾಗಿಸಿದರು. ಈಗಾಗಲೇ ಶೇಕಡಾ 60 ರಷ್ಟು ಗಾಯಗೊಂಡಿರುವ ದಂಪತಿಗಳನ್ನು ಉತ್ತಮ ಚಿಕಿತ್ಸೆಗಾಗಿ ದೆಹಲಿಗೆ ಸ್ಥಳಾಂತರಿಸಬೇಕೆಂದು ವೈದ್ಯರು ಸಲಹೆ ನೀಡಿದ್ದಾರೆ. ಅಲ್ಲಿ ಅವರಿಗೆ ಪ್ರಸ್ತುತ ಚಿಕಿತ್ಸೆ ನೀಡಲಾಗುತ್ತಿದೆ.

ಸಧ್ಯ ಸೋಷಿಯಲ್ ಮೀಡಿಯಾದಲ್ಲಿ ಈ ಸುದ್ದಿ ವೈರಲ್ ಆಗಿವೆ. ಘಟನೆಗೆ ಸಂಬಂಧಿಸಿದಂತೆ, ನಿರ್ಲಕ್ಷ್ಯದಿಂದ ವರ್ತಿಸಿದ ಪೊಲೀಸ್ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಮತ್ತು ಇಬ್ಬರು ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ.////


Web Title : Couple attempt suicide in front of police station
(Kannada News : Get Live News Alerts Online Today @ kannadanews.today – Read Latest India News / National News Headlines, Breaking News in Kannada )