ಶಾಕಿಂಗ್ ವಿಡಿಯೋ: ಸ್ಕೂಟಿ ಸಮೇತ ನೀರು ತುಂಬಿದ್ದ ಹಳ್ಳಕ್ಕೆ ಬಿದ್ದ ದಂಪತಿ

ಸ್ಕೂಟಿಯಲ್ಲಿ ಹೋಗುತ್ತಿದ್ದ ದಂಪತಿ ಹಳ್ಳಕ್ಕೆ ಬಿದ್ದಿದ್ದಾರೆ. ತೆರೆದ ಮ್ಯಾನ್‌ಹೋಲ್‌ನಲ್ಲಿ ಸ್ಕೂಟಿ ಬಿದ್ದಿದ್ದು, ದಂಪತಿ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

Online News Today Team

ಲಕ್ನೋ: ಉತ್ತರ ಪ್ರದೇಶದ ದುಸ್ಥಿತಿಗೆ ಈ ವಿಡಿಯೋ ಕನ್ನಡಿ ಹಿಡಿಯುತ್ತಿದೆ. ಸ್ಕೂಟಿಯಲ್ಲಿ ಹೋಗುತ್ತಿದ್ದ ದಂಪತಿ ಹಳ್ಳಕ್ಕೆ ಬಿದ್ದಿದ್ದಾರೆ. ತೆರೆದ ಮ್ಯಾನ್‌ಹೋಲ್‌ನಲ್ಲಿ ಸ್ಕೂಟಿ ಬಿದ್ದಿದ್ದು, ದಂಪತಿ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಅಲಿಘರ್‌ನ ಕಿಶನ್‌ಪುರ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಮಳೆಯಿಂದಾಗಿ ರಸ್ತೆಗಳು, ಚರಂಡಿಗಳು ಜಲಾವೃತಗೊಂಡಿವೆ. ಮಳೆ ನೀರು ಹರಿದು ಹೋಗಲು ಮ್ಯಾನ್‌ಹೋಲ್‌ ತೆರೆದಿತ್ತು. ಆದರೆ, ಅಲ್ಲಿ ಯಾವುದೇ ಎಚ್ಚರಿಕೆ ಫಲಕ ಇರಲಿಲ್ಲ, ಹಾಗೂ ಆ ನೀರಿನ ಮಧ್ಯ ಹಳ್ಳ ಇರಬಹುದಾದ ಯಾವುದೇ ಕುರುಹು ಇರಲಿಲ್ಲ..

ಇದೇ ವೇಳೆ ದಂಪತಿ ತಮ್ಮ ಸ್ಕೂಟಿಯಲ್ಲಿ ರಸ್ತೆ ಬದಿ ವಾಹನ ನಿಲ್ಲಿಸಲು ನೀರಿರುವ ಜಾಗಕ್ಕೆ ತೆರಳಿದ್ದರು. ಆದರೆ ಅವರ ಸ್ಕೂಟಿ ತೆರೆದ ಮ್ಯಾನ್‌ಹೋಲ್‌ಗೆ ಬಿದ್ದಿದೆ. ಮ್ಯಾನ್ ಹೋಲ್ ಪಕ್ಕದ ನೀರಿಗೆ ಬಿದ್ದ ದಂಪತಿಯನ್ನು ಸ್ಥಳೀಯರು ರಕ್ಷಿಸಿದ್ದಾರೆ. ಆದರೆ, ಅವರ ಸ್ಕೂಟಿ ಮ್ಯಾನ್ ಹೋಲ್‌ನಲ್ಲಿ ಪೂರ್ಣ ಮುಳುಗಿ ಹೋಗಿತ್ತು.

ಅದೃಷ್ಟವಶಾತ್ ಬದುಕುಳಿದ ದಂಪತಿಯನ್ನು ಯುಪಿ ಪೊಲೀಸ್ ಅಧಿಕಾರಿ ದಯಾನಂದ್ ಸಿಂಗ್ ಅತ್ರಿ ಮತ್ತು ಅವರ ಪತ್ನಿ ಅಂಜು ಅತ್ರಿ ಎಂದು ಗುರುತಿಸಲಾಗಿದೆ. ವೈದ್ಯರನ್ನು ಭೇಟಿಯಾಗಲು ತೆರಳುತ್ತಿದ್ದಾಗ ಈ ಘಟನೆ ನಡೆದಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

Couple Falls Into Waterlogged Ditch In Up Aligarh As Their Scooty Submerges

Follow Us on : Google News | Facebook | Twitter | YouTube