ರಾಹುಲ್ ಗಾಂಧಿಗೆ ಪ್ರಧಾನಿಯಾಗುವ ಹಗಲುಗನಸು – ಅಮಿತ್ ಶಾ

Daydreaming for Rahul Gandhi, become Prime Minister. Says Amit shah

ರಾಹುಲ್ ಗಾಂಧಿಗೆ ಪ್ರಧಾನಿಯಾಗುವ ಹಗಲುಗನಸು – ಅಮಿತ್ ಶಾ – Daydreaming for Rahul Gandhi, become Prime Minister. Says Amit shah

ರಾಹುಲ್ ಗಾಂಧಿಗೆ ಪ್ರಧಾನಿಯಾಗುವ ಹಗಲುಗನಸು – ಅಮಿತ್ ಶಾ

ದೌಸಾದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅಮಿತ್ ಷಾ, ಭಾರತೀಯ ವಾಯುಪಡೆಯಿಂದ ಪಾಕಿಸ್ತಾನದಲ್ಲಿ ಬಾಲಾಕೋಟ್ನ ದಾಳಿಯ ನಂತರ ರಾಹುಲ್ ಗಾಂಧಿ ಪ್ರಧಾನಿಯಾಗುವ ಕನಸು ಕಾಣುತ್ತಿದ್ದಾರೆ ಎಂದು ಟೀಕಿಸಿದ್ದಾರೆ. ಅಲ್ಲದೆ ಪ್ರಧಾನಿಯಾಗುವ ಅವರ ಕನಸು ಕೇವಲ ಕನಸಾಗೆ ಉಳಿಯುತ್ತದೆ ಎಂದಿದ್ದಾರೆ.Daydreaming for Rahul Gandhi, become Prime Minister. Says Amit shah

ಭಾರತೀಯ ಯೋಧರ ಮೇಲೆ ದಾಳಿ ಮಾಡಿದ ಭಯೋತ್ಪಾದಕರಿಗೆ ಮೋದಿ ಅವರು ಸರಿಯಾದ ಉತ್ತರವನ್ನು ನೀಡಿದ್ದಾರೆ ಮತ್ತು ಕಾಂಗ್ರೆಸ್ ಪಕ್ಷವು ಇದಕ್ಕೆ ಪುರಾವೆಗಳನ್ನು ಕೇಳುವ ಮೂಲಕ  ಕೆಲವು ಮತದಾರರನ್ನು ತನ್ನ ಕಡೆಗೆ ಸೆಳೆಯಲು ಪ್ರಯತ್ನಿಸಿತ್ತು, ಆದರೆ ಅಂಗೈ ಹುಣ್ಣಿಗೆ ಕನ್ನಡಿ ಬೇಕೇ, ನಮ್ಮ ಯೋಧರು ಮೋದಿಯವರ ನಿರ್ದೇಶನದಂತೆ ಉಗ್ರರಿಗೆ ತಕ್ಕ ಉತ್ತರ ನೀಡಿದ್ದಾರೆ ಎಂದು ಅವರು ಹೇಳಿದರು.

ಅಲ್ಲದೆ ಮೋದಿಯವರಂತಹ ನಾಯಕ ಮತ್ತೆ ಯಾರೂ ಆಗಲು ಸಾಧ್ಯವಿಲ್ಲ, ಇಂತಹ ನಾಯಕನನ್ನೇ ನಮ್ಮ ರಾಷ್ಟ್ರ ಹುಡುಕುತ್ತಿದ್ದದ್ದು, ಎಂದು ಪರೋಕ್ಷವಾಗಿ ರಾಹುಲ್ ಗಾಂಧಿಗೆ ಟಾಂಗ್ ನೀಡಿದ್ದಾರೆ. ಹಾಗೂ ಇನ್ನೂ ಎಪ್ಪತ್ತು ವರ್ಷಗಳಾದರೂ ಮೋದಿಯವರಂತಹ ನಾಯಕರನ್ನೇ ಜನರು ಬಯಸುವುದು ಎಂದರು..

Web Title : Daydreaming for Rahul Gandhi, become Prime Minister. Says Amit shah