ಶಾಕಿಂಗ್.. ಮಗು ಹೊಟ್ಟೆಯಲ್ಲಿ ಇತ್ತು ಇನ್ನೊಂದು ಮಗು !

ಉತ್ತರ ಪ್ರದೇಶದ ಕುಶಿನಗರ ಜಿಲ್ಲೆಯ ಹಳ್ಳಿಯೊಂದರ 9 ವರ್ಷದ ಬಾಲಕಿ ರೋಶ್ನಿ ಹುಟ್ಟಿನಿಂದಲೇ ಹೊಟ್ಟೆ ನೋವಿನಿಂದ ಬಳಲುತ್ತಿದ್ದಳು. ಇತ್ತೀಚೆಗಷ್ಟೇ ಆಕೆಗೆ ಸೋನೋಗ್ರಫಿ ಪರೀಕ್ಷೆ ನಡೆಸಿದ ಮುಂಬೈ ವೈದ್ಯರು ನೋವಿನ ಕಾರಣವನ್ನು ತಿಳಿಸಿದ್ದು, ಆಕೆಯ ಪೋಷಕರು ಒಮ್ಮೆಲೇ ಬೆಚ್ಚಿಬಿದ್ದಿದ್ದಾರೆ. 

ಆಕೆಯ ಹೊಟ್ಟೆಯಲ್ಲಿ ಬೆಳೆದದ್ದು ಗಡ್ಡೆ ಅಲ್ಲ.ತಲೆ,ಕಣ್ಣು,ಕೈ,ಕಾಲುಗಳೊಂದಿಗೆ ಸತ್ತ ಮಗು ಎಂದು ತಿಳಿದುಬಂದಿದೆ. ಹುಟ್ಟಿನಿಂದಲೇ ತೀವ್ರ ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಮಗು ಹೊಟ್ಟೆಯಲ್ಲೂ ಸಹ ಮಗು ಬೆಳೆಯುತ್ತಿದೆ ಎಂದು ವೈದ್ಯರು ತಿಳಿಸಿದ್ದಾರೆ.

ರೋಶ್ನಿ ಹೊಟ್ಟೆ ನೋವಿನಿಂದ ಬಳಲುತ್ತಿದ್ದಾಗ, ಆಕೆಯ ಪೋಷಕರು ಅವಳನ್ನು ಆಸ್ಪತ್ರೆಗಳು ಮತ್ತು ನಾನಾ ಚಿಕಿತ್ಸೆಗಳಿಗೆ ತೋರಿಸುತ್ತಿದ್ದರು. ಅಂತಿಮವಾಗಿ ನೋವು ಕಡಿಮೆಯಾಯಿತು ಮತ್ತು ಆಕೆಯನ್ನು ಮುಂಬೈನ ಸಿಯಾನ್ ಆಸ್ಪತ್ರೆಗೆ ಕರೆದೊಯ್ಯಲಾಯಿತು.

ಬಾಲಕಿಯ ಸ್ಥಿತಿಯನ್ನು ಕೂಲಂಕಷವಾಗಿ ಅಧ್ಯಯನ ಮಾಡಿದ ವೈದ್ಯರು ಶಸ್ತ್ರಚಿಕಿತ್ಸೆ ಮಾಡಲು ಮುಂದಾದರು. ಶಾಸ್ತ್ರಚಿಕಿತ್ಸೆ ಯಶಸ್ವಿಯಾಯಿತು. ಕೊನೆಗೆ ಹೊಟ್ಟೆಯಲ್ಲಿದ್ದ ಮಗುವನ್ನು ಹೊರತೆಗೆಯಲಾಯಿತು.

Stay updated with us for all News in Kannada at Facebook | Twitter
Scroll Down To More News Today