Dead man found alive, ಶವಾಗಾರದಲ್ಲಿ ಇಟ್ಟಿದ್ದ ಮೃತ ವ್ಯಕ್ತಿ ಜೀವಂತ

Dead man found alive : ಆಸ್ಪತ್ರೆ ಸಿಬ್ಬಂದಿ ಶವಾಗಾರದಲ್ಲಿ ಇಟ್ಟಿದ್ದ ಮೃತ ವ್ಯಕ್ತಿ ದಿಡೀರ್ ಉಸಿರಾಟ ಪ್ರಾರಂಭಿಸಿದ ಶಾಕಿಂಗ್ ಸುದ್ದಿ ಇದು, ಮರಣೋತ್ತರ ಪರೀಕ್ಷೆ ನಡೆಸುವ ಮುನ್ನ ವ್ಯಕ್ತಿಯನ್ನು ಫ್ರೀಜರ್ ಬಾಕ್ಸ್ ನಲ್ಲಿ ಇರಿಸಲಾಗಿತ್ತು. ಕೊನೆಗೆ ಆತ ಬದುಕಿ ಉಳಿದಿದ್ದ.

🌐 Kannada News :

Dead man found alive : ಆಸ್ಪತ್ರೆ ಸಿಬ್ಬಂದಿ ಶವಾಗಾರದಲ್ಲಿ ಇಟ್ಟಿದ್ದ ಮೃತ ವ್ಯಕ್ತಿ ದಿಡೀರ್ ಉಸಿರಾಟ ಪ್ರಾರಂಭಿಸಿದ ಶಾಕಿಂಗ್ ಸುದ್ದಿ ಇದು, ಮರಣೋತ್ತರ ಪರೀಕ್ಷೆ ನಡೆಸುವ ಮುನ್ನ ವ್ಯಕ್ತಿಯನ್ನು ಫ್ರೀಜರ್ ಬಾಕ್ಸ್ ನಲ್ಲಿ ಇರಿಸಲಾಗಿತ್ತು. ಕೊನೆಗೆ ಆತ ಬದುಕಿ ಉಳಿದಿದ್ದ.

ಉತ್ತರ ಪ್ರದೇಶದ ಮೊರಾದಾಬಾದ್‌ನಲ್ಲಿ ಈ ಶಾಕಿಂಗ್ ಘಟನೆ ನಡೆದಿದೆ. ಆಸ್ಪತ್ರೆ ಸಿಬ್ಬಂದಿ ಮತ್ತು ಪೊಲೀಸರ ಪ್ರಕಾರ, ಮೊರಾದಾಬಾದ್ ಜಿಲ್ಲೆಯ ಹಳ್ಳಿಯೊಂದರಲ್ಲಿ ಎಲೆಕ್ಟ್ರಿಷಿಯನ್ ಆಗಿ ಕೆಲಸ ಮಾಡುತ್ತಿರುವ ಶ್ರೀಕೇಶ್ ಕುಮಾರ್ ಗುರುವಾರ ರಾತ್ರಿ ಬೈಕ್ ನಲ್ಲಿ ಹೋಗುತ್ತಿದ್ದಾಗ ಅಪಘಾತಕ್ಕೀಡಾಗಿದ್ದರು.

ಕೂಡಲೇ ಅವರನ್ನು ಮೊರಾದಾಬಾದ್‌ನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಸ್ಪತ್ರೆಗೆ ಕರೆತರುವಷ್ಟರಲ್ಲಿ ಅವರು ಮೃತಪಟ್ಟಿರುವುದಾಗಿ ವೈದ್ಯರು ದೃಢಪಡಿಸಿದ್ದಾರೆ. ಮಧ್ಯರಾತ್ರಿಯ ನಂತರ ಅವರ ದೇಹವನ್ನು ಆಸ್ಪತ್ರೆಯ ಶವಾಗಾರಕ್ಕೆ ಕೊಂಡೊಯ್ಯಲಾಯಿತು. ನಂತರ ಫ್ರೀಜರ್‌ನಲ್ಲಿ ಇರಿಸಲಾಗಿದೆ.

ವಿಚಿತ್ರ ಎಂದರೆ ಸುಮಾರು ಏಳು ಗಂಟೆಗಳ ಕಾಲ ಆತ ಫ್ರೀಜರ್‌ನಲ್ಲಿಯೇ ಇದ್ದ. ನಂತರ ಕುಟುಂಬ ಸದಸ್ಯರಿಗೆ ಮಾಹಿತಿ ನೀಡಲಾಯಿತು. ಪಂಚನಾಮವನ್ನು ನಡೆಸುವಾಗ ಕುಟುಂಬದ ಸದಸ್ಯರ ಸಹಿಯ ಅಗತ್ಯತೆಯಿಂದಾಗಿ ಅವರನ್ನು ಕರೆಯಿಸಲಾಯಿತು.

ಕುಟುಂಬವನ್ನು ಶವಾಗಾರಕ್ಕೆ ಕರೆದೊಯ್ಯಲಾಯಿತು. ಆ ವೇಳೆ.. ಫ್ರೀಜರ್ ನಲ್ಲಿದ್ದ ಶ್ರೀಕೇಶ್ ಕುಮಾರ್ ದೇಹದಲ್ಲಿ ಚಾಲನೆ ಕಂಡುಬಂದಿದೆ, ನೋಡ ನೋಡುತ್ತಿದ್ದಂತೆ ಎಲ್ಲರೂ ಬೆಚ್ಚಿಬಿದ್ದರು. ಕೂಡಲೇ ಕುಟುಂಬಸ್ಥರು ಆತ ಸತ್ತಿಲ್ಲ ಎಂದು ವೈದ್ಯರಿಗೆ ತಿಳಿಸಿದ್ದಾರೆ.

ಅವರನ್ನು ಪರೀಕ್ಷಿಸಿದ ವೈದ್ಯಾಧಿಕಾರಿಗಳು ತಕ್ಷಣ ಚಿಕಿತ್ಸೆ ಆರಂಭಿಸಿದರು. ಕುಮಾರ್ ಪ್ರಸ್ತುತ ಮೀರತ್‌ನ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಅವರ ಸ್ಥಿತಿ ಸುಧಾರಿಸಿದೆ ಎಂದು ಮೊರಾದಾಬಾದ್ ಮುಖ್ಯ ವೈದ್ಯಕೀಯ ಅಧೀಕ್ಷಕ ಡಾ.ಶಿವ ಸಿಂಗ್ ತಿಳಿಸಿದ್ದಾರೆ.

ಆಸ್ಪತ್ರೆ ಸಿಬ್ಬಂದಿಯ ನಿರ್ಲಕ್ಷ್ಯಕ್ಕೆ ಸಂತ್ರಸ್ತ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

➟ ☞ Kannada News Today ಸುದ್ದಿಗಾಗಿ FacebookTwitter ಅನುಸರಿಸಿ. Google News | News App ಡೌನ್ಲೋಡ್ ಮಾಡಿಕೊಳ್ಳಿ.
Scroll Down To More News Today