ಮಹಾರಾಷ್ಟ್ರದ ಥಾನೆಯಲ್ಲಿ ಭೀಕರ ರಸ್ತೆ ಅಪಘಾತ, ಇಬ್ಬರ ಸ್ಥಿತಿ ಗಂಭೀರ
ಕೆಲವು ಗಂಟೆಗಳ ಕಾಲ ಸಂಚಾರ ಸ್ಥಗಿತ, ಭೀಕರ ರಸ್ತೆ ಅಪಘಾತಕ್ಕೆ ಇಬ್ಬರು ಗಂಭೀರ ಗಾಯಗೊಂಡಿದ್ದಾರೆ.
ಸೇತುವೆಯ ಕೆಳಗೆ ಹೋಗುತ್ತಿದ್ದ ಕಾರಿನ ಮೇಲೆ ಟ್ರಕ್ ನಲ್ಲಿದ್ದ ವಸ್ತುಗಳು ಬಿದ್ದ ಕಾರಣ, ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಇಬ್ಬರು ಗಂಭೀರ ಗಾಯಗೊಂಡಿದ್ದಾರೆ. ಗಾಯಗೊಂಡ ಅವರನ್ನು ಆಸ್ಪತ್ರೆಗೆ ಸಾಗಿಸಲಾಗಿದೆ. ಈ ಘಟನೆಯಿಂದ ಫ್ಲೈಓವರ್ನ ಮೇಲೆ ಮತ್ತು ಕೆಳಗೆ ಕೆಲವು ಗಂಟೆಗಳ ಕಾಲ ಸಂಚಾರ ಸ್ಥಗಿತಗೊಂಡಿತು. ಪೊಲೀಸರು ಪ್ರಕರಣ ದಾಖಲಿಸಿದ್ದು ತನಿಖೆ ನಡೆಸುತ್ತಿದ್ದಾರೆ.
( Kannada News ) ಮಹಾರಾಷ್ಟ್ರದ ಥಾನೆಯಲ್ಲಿ ದುರಂತ ಅಪಘಾತ ಸಂಭವಿಸಿದೆ. ಭಾರೀ ಲೋಡ್ ಹೊತ್ತ ಟ್ರಕ್ ವಾಘಾಬಿಲ್ ಫ್ಲೈಓವರ್ನಿಂದ ತಿರುವು ಪಡೆಯುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ಟ್ರಕ್ ನಲ್ಲಿದ್ದ ವಸ್ತುಗಳು ಬ್ರಿಡ್ಜ್ ನಿಂದ ಕೆಳಗೆ ಚಲಿಸುತ್ತಿದ್ದ ಕಾರಿನ ಮೇಲೆ ಬಿದ್ದಿದೆ.
ಇದನ್ನೂ ಓದಿ : ಹತ್ರಾಸ್ ಪ್ರಕರಣ : ಸಿಬಿಐ ತನಿಖೆಗೆ ಆದೇಶಿಸಿದ ಯುಪಿ ಸಿಎಂ ಯೋಗಿ