ಮದ್ರಾಸ್ ಐಐಟಿಯಲ್ಲಿ ನಾಲ್ಕು ಜಿಂಕೆಗಳು ಸಾವು
ತಮಿಳುನಾಡಿನ ಮದ್ರಾಸ್ ಐಐಟಿ ಕ್ಯಾಂಪಸ್ ನಲ್ಲಿ ಇಂದು ನಾಲ್ಕು ಜಿಂಕೆಗಳು ಸಾವನ್ನಪ್ಪಿವೆ. ವೈದ್ಯಕೀಯ ಪರೀಕ್ಷೆಗಳ ಪ್ರಕಾರ ಹೆಚ್ಚು ಸಾಂಕ್ರಾಮಿಕ ಆಂಥ್ರಾಕ್ಸ್ನಿಂದ ಒಂದು ಜಿಂಕೆ ಸಾವನ್ನಪ್ಪಿದೆ.
ತಮಿಳುನಾಡಿನ ಮದ್ರಾಸ್ ಐಐಟಿ ಕ್ಯಾಂಪಸ್ ನಲ್ಲಿ ಇಂದು ನಾಲ್ಕು ಜಿಂಕೆಗಳು ಸಾವನ್ನಪ್ಪಿವೆ. ವೈದ್ಯಕೀಯ ಪರೀಕ್ಷೆಗಳ ಪ್ರಕಾರ ಹೆಚ್ಚು ಸಾಂಕ್ರಾಮಿಕ ಆಂಥ್ರಾಕ್ಸ್ನಿಂದ ಒಂದು ಜಿಂಕೆ ಸಾವನ್ನಪ್ಪಿದೆ. ಉಳಿದ ಮೂರು ಜಿಂಕೆಗಳ ಪರೀಕ್ಷೆಗಳು ಇನ್ನೂ ಬಂದಿಲ್ಲ. ಐಐಟಿ ಮದ್ರಾಸ್ ಶುಕ್ರವಾರ ಹೇಳಿಕೆಯಲ್ಲಿ ತಿಳಿಸಿದೆ.
ಜಿಂಕೆ ಮೃತದೇಹ ಪತ್ತೆಯಾದ ಪ್ರದೇಶವನ್ನು ಅಧಿಕಾರಿಗಳು ಸಂಪೂರ್ಣವಾಗಿ ಶುಚಿಗೊಳಿಸಿದ್ದಾರೆ. ವನ್ಯಜೀವಿ ವಾರ್ಡನ್ ಸಲ್ಹಾ ಮೇರಾ ಅವರು ಇಡೀ ಕ್ಯಾಂಪಸ್ ಅನ್ನು ತೆರವುಗೊಳಿಸುತ್ತಿದ್ದಾರೆ. ಆಂಥ್ರಾಕ್ಸ್ ಒಂದು ಝೂನೋಟಿಕ್ ಕಾಯಿಲೆಯಾಗಿದೆ.
ಅಂದರೆ ಪ್ರಾಣಿಗಳಿಂದ ಮನುಷ್ಯರಿಗೆ ಹರಡುತ್ತದೆ. ಐಐಟಿ ಮದ್ರಾಸ್ ಅಧಿಕಾರಿಗಳ ಪ್ರಕಾರ, ಚೆನ್ನೈ ಕಾರ್ಪೊರೇಷನ್ ಜೊತೆಗೆ ವನ್ಯಜೀವಿ ಮತ್ತು ಪಶುಸಂಗೋಪನೆ ಇಲಾಖೆಯು ಭದ್ರತಾ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ.
Follow Us on : Google News | Facebook | Twitter | YouTube