ದೆಹಲಿ ವಿಧಾನಸಭಾ ಚುನಾವಣೆ 2020: ಬಿಜೆಪಿ ಅಭ್ಯರ್ಥಿಗಳ ಹೆಸರನ್ನು ಇಂದು ಬಿಡುಗಡೆ ಮಾಡುವ ಸಾಧ್ಯತೆ ಇದೆ

Delhi Assembly Election 2020 - BJP Likely to Release Candidates’ Name Today - National News

ಕನ್ನಡ ನ್ಯೂಸ್ ಟುಡೇIndia News

ದೆಹಲಿ ವಿಧಾನಸಭಾ ಚುನಾವಣೆ 2020: ಬಿಜೆಪಿ ಅಭ್ಯರ್ಥಿಗಳ ಹೆಸರನ್ನು ಇಂದು ಬಿಡುಗಡೆ ಮಾಡುವ ಸಾಧ್ಯತೆ ಇದೆ.

ನವದೆಹಲಿ : ದೆಹಲಿ ವಿಧಾನಸಭಾ ಚುನಾವಣೆ 2020 ಕ್ಕೆ ಕೆಲವೇ ದಿನಗಳು ಬಾಕಿ ಇದೆ , ದೆಹಲಿ ವಿಧಾನಸಭಾ ಚುನಾವಣೆಗೆ ಪಕ್ಷದ ಅಭ್ಯರ್ಥಿಗಳನ್ನು ಅಂತಿಮಗೊಳಿಸಲು ಬಿಜೆಪಿಯ ಕೇಂದ್ರ ಚುನಾವಣಾ ಸಮಿತಿ ಗುರುವಾರ ಸಭೆ ಸೇರಲಿದೆ.

ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ಅಧ್ಯಕ್ಷ ಅಮಿತ್ ಶಾ ಮತ್ತು ಇತರ ಹಿರಿಯ ಮುಖಂಡರನ್ನು ಒಳಗೊಂಡ ಸಮಿತಿಯ ಸಭೆಯನ್ನು ಬಿಜೆಪಿ ನಡೆಸಲಿದೆ. ಸಭೆಯಲ್ಲಿ ದೆಹಲಿ ಘಟಕದ ನಾಯಕತ್ವವೂ ಭಾಗವಹಿಸಲಿದೆ. ಮುಂಬರುವ ದೆಹಲಿ ವಿಧಾನಸಭಾ ಚುನಾವಣೆ 2020 ಕ್ಕೆ  ಆಮ್ ಆದ್ಮಿ ಪಕ್ಷ ಮತ್ತು ಎಲ್ಜೆಪಿ ತಮ್ಮ ಅಭ್ಯರ್ಥಿಗಳ ಹೆಸರನ್ನು ಘೋಷಿಸಿದ ನಂತರ ಬಿಜೆಪಿಯ ಸಭೆ ನಡೆಯುತ್ತಿದೆ.

70 ಸದಸ್ಯರ ದೆಹಲಿ ವಿಧಾನಸಭಾ ಚುನಾವಣೆಗೆ ಎಎಪಿ ತನ್ನ ಎಲ್ಲ ಅಭ್ಯರ್ಥಿಗಳ ಹೆಸರನ್ನು ಮಂಗಳವಾರ ಪ್ರಕಟಿಸಿದೆ.

ಇಸಿ ಪ್ರಕಟಣೆಯಂತೆ ದೆಹಲಿ ವಿಧಾನಸಭಾ ಚುನಾವಣೆ 2020 ಫೆಬ್ರವರಿ 8 ರಂದು ನಡೆಯಲಿದ್ದು, ಫೆಬ್ರವರಿ 11 ರಂದು ಮತ ಎಣಿಕೆ ನಡೆಯಲಿದೆ.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಕೇವಲ ಮೂರು ವಿಧಾನಸಭಾ ಸ್ಥಾನಗಳನ್ನು ಗೆದ್ದಿದ್ದರೆ, ಎಎಪಿ 67 ರಲ್ಲಿ ಜಯಗಳಿಸಿತ್ತು, ಹಾಗೂ ಐದು ವರ್ಷಗಳ ಕಾಲ ಸರ್ಕಾರ ನಡೆಸಿತ್ತು. ದೆಹಲಿ ವಿಧಾನಸಭಾ ಚುನಾವಣೆ 2020 ಕಾಂಗ್ರೆಸ್ ಸೇರಿ ತ್ರಿಕೋನ ಸ್ಪರ್ಧೆಗೆ ಸಾಕ್ಷಿಯಾಗಲಿದೆ.

ಎಎಪಿಯ ಕೇಜ್ರಿವಾಲ್ ಸರ್ಕಾರದಿಂದ ಮಹಿಳೆಯರಿಗೆ ಉಚಿತ ಬಸ್ ಜೊತೆಗೆ ಉಚಿತ ವಿದ್ಯುತ್ ಮತ್ತು ನೀರಿನಂತಹ ಜನಪ್ರಿಯ ಯೋಜನೆಗಳನ್ನು ಹೊರಡಿಸಿದ್ದಾರೆ.////

Quick Links : India News Kannada | National News Kannada