ರೈತರಿಗೆ ಬೆಂಬಲವಾಗಿ ದೆಹಲಿ ಸಿಎಂ ಕೇಜ್ರಿವಾಲ್ ಇಂದು ಉಪವಾಸ

ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರು ರೈತರಿಗೆ ಬೆಂಬಲವಾಗಿ ಏಕದಿನ ಉಪವಾಸ ನಡೆಸಲಿದ್ದಾರೆ. ಇಂದು ಬೆಳಿಗ್ಗೆ 8 ರಿಂದ ಸಂಜೆ 5 ರವರೆಗೆ ಉಪವಾಸ ದೀಕ್ಷೆ ನಡೆಯಲಿದೆ ಎಂದು ಘೋಷಿಸಲಾಗಿದೆ.

(Kannada News) : ನವದೆಹಲಿ: ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರು ರೈತರಿಗೆ ಬೆಂಬಲವಾಗಿ ಏಕದಿನ ಉಪವಾಸ ನಡೆಸಲಿದ್ದಾರೆ. ಇಂದು ಬೆಳಿಗ್ಗೆ 8 ರಿಂದ ಸಂಜೆ 5 ರವರೆಗೆ ಉಪವಾಸ ದೀಕ್ಷೆ ನಡೆಯಲಿದೆ ಎಂದು ಘೋಷಿಸಲಾಗಿದೆ.

ಕೇಜ್ರಿವಾಲ್ ಇಡೀ ದೇಶಕ್ಕೆ ರೈತರ ಪರವಾಗಿ ನಿಲ್ಲುವಂತೆ ಮನವಿ ಮಾಡಿದರು. ಕೆಲವು ಕೇಂದ್ರ ಸಚಿವರು ಮತ್ತು ಬಿಜೆಪಿ ಮುಖಂಡರು ರೈತರು ರಾಷ್ಟ್ರ ವಿರೋಧಿ ಎಂದು ಹೇಳುತ್ತಿದ್ದಾರೆ ಎಂದು ಕೇಜ್ರಿವಾಲ್ ಕಿಡಿ ಕಾರಿದರು.

ಮತ್ತೊಂದೆಡೆ ರೈತರ ಹೋರಾಟ ತೀವ್ರಗೊಂಡಿದೆ. ರೈತರು ಇಂದಿನಿಂದ ಹೆಚ್ಚಿನ ಪ್ರತಿಭಟನೆ ಯೋಚನೆ ಮಾಡುತ್ತಿದ್ದಾರೆಂದು ಈಗಾಗಲೇ ಘೋಷಿಸಿದ್ದಾರೆ.

ಈ ತಿಂಗಳ 19 ರೊಳಗೆ ಕೃಷಿ ಕಾನೂನು‌ಗಳನ್ನು ಹಿಂಪಡೆಯಲು ಗಡುವು ನೀಡಲಾಗಿದೆ. ರೈತ ಸಂಘಗಳ ಮುಖಂಡರು ಇಂದಿನಿಂದ ಉಪವಾಸ ಸತ್ಯಾಗ್ರಹ ಮಾಡುವುದಾಗಿ ಘೋಷಿಸಿದ್ದಾರೆ. ರೈತರ ಬೆಂಬಲಕ್ಕಾಗಿ ದೇಶದ ಎಲ್ಲಾ ಜಿಲ್ಲೆಗಳಲ್ಲಿ ಧರಣಿ ನಡೆಸುವುದಾಗಿ ರೈತ ಸಂಘಗಳು ಘೋಷಿಸಿವೆ.

Web Title : Delhi CM Kejriwal to fast Today in support of farmers