ದೇಶಾದ್ಯಂತ ‘ದಿಶಾ ಮಸೂದೆ’ ಜಾರಿಗೆ ತರಬೇಕು : ಸ್ವಾತಿ ಮಾಲಿವಾಲ್

Delhi Commission for Women-DCW-chief Swati Maliwal, in a letter to Prime Minister Narendra Modi

ದೆಹಲಿ : ದೇಶಾದ್ಯಂತ ‘ದಿಶಾ ಮಸೂದೆ’ ಜಾರಿಗೆ ತರಬೇಕೆಂದು ಒತ್ತಾಯಿಸಿ, ದೆಹಲಿ ಮಹಿಳಾ ಆಯೋಗದ ಮುಖ್ಯಸ್ಥೆ ಸ್ವಾತಿ ಮಾಲಿವಾಲ್ ಅವರು ಪ್ರಧಾನಿ ಮೋದಿಗೆ ಶನಿವಾರ ಪತ್ರ ಬರೆದಿದ್ದಾರೆ. ಅತ್ಯಾಚಾರ ಪ್ರಕರಣವನ್ನು ತನಿಖೆ ಮಾಡಿ, 14 ದಿನಗಳಲ್ಲಿ ಪೂರ್ಣಗೊಳಿಸಬೇಕು ಮತ್ತು ಸರಿಯಾದ ಸಾಕ್ಷಿ ಆಧಾರ ಸಿಕ್ಕರೆ ತಕ್ಷಣ ಶಿಕ್ಷೆ ಪ್ರಕಟಿಸಬೇಕು, ಆ ಮೂಲಕ ಪ್ರಕರಣ ಪೂರ್ಣಗೊಳಿಸಬೇಕು ಎಂದು ಅವರು ತಮ್ಮ ಪತ್ರದಲ್ಲಿ ಕೋರಿದ್ದಾರೆ.

ಮಹಿಳೆಯರ ಸುರಕ್ಷತೆಯ ಬಗ್ಗೆ ಕೇಂದ್ರ ಸರ್ಕಾರದ ನಿರಾಸಕ್ತಿಯನ್ನೂ ಅವರು ಪ್ರಶ್ನಿಸಿದ್ದಾರೆ. ಮತ್ತೊಂದೆಡೆ, ಅತ್ಯಾಚಾರಿಗಳಿಗೆ ಮರಣದಂಡನೆ ವಿಧಿಸಬೇಕೆಂದು ಒತ್ತಾಯಿಸಿ ಹತ್ತು ದಿನಗಳಿಂದ ಉಪವಾಸ ಮಾಡುತ್ತಿದ್ದಾರೆ. ದೇಶಾದ್ಯಂತ ದಿಶಾ ಮಸೂದೆ ಜಾರಿಗೆ ಬರುವವರೆಗೂ ಇದು ಮುಂದುವರಿಯುತ್ತದೆ ಎಂದು ಸ್ವಾತಿ ತಿಳಿಸಿದ್ದಾರೆ.

ಪ್ರಧಾನಿ ಮೋದಿ ಅವರಿಗೆ ಬರೆದ ಪತ್ರದಲ್ಲಿ ಸ್ವಾತಿ ಮಾಲಿವಾಲ್ ಅವರು, “ಅತ್ಯಾಚಾರಿಗಳಿಗೆ ಶಿಕ್ಷೆ ವಿಧಿಸಲು ನಿಶ್ಚಿತ ಚೌಕಟ್ಟನ್ನು ಕೋರಿ ನಾನು ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಮಾಡುತ್ತಿದ್ದೇನೆ … ಕೆಲವು ನಿರ್ದಿಷ್ಟ ಬೇಡಿಕೆಗಳ ತ್ವರಿತ ಕ್ರಮವನ್ನು ಕೋರಿ ನನ್ನ ಉಪವಾಸದ ಮೊದಲ ದಿನ ನಾನು ನಿಮಗೆ ಪತ್ರ ಬರೆದಿದ್ದೇನೆ. “

“ಕೇಂದ್ರ ಸರ್ಕಾರದ ಈ ಕತ್ತಲೆ ಮತ್ತು ಆಘಾತಕಾರಿ ಉದಾಸೀನತೆಯ ಮಧ್ಯೆ, ಆಂಧ್ರಪ್ರದೇಶ ಸರ್ಕಾರವು ಭರವಸೆಯ ದಾರಿದೀಪವನ್ನು ತೋರಿಸಿದೆ. ದಿಶಾ ಮಸೂದೆಯನ್ನು ಎಪಿ ಅಸೆಂಬ್ಲಿಯಲ್ಲಿ ಅಂಗೀಕರಿಸಲಾಗಿದೆ ಎಂದಿದ್ದಾರೆ.

ಎಪಿ ಅಸೆಂಬ್ಲಿ ಮಸೂದೆಯನ್ನು ಅಂಗೀಕರಿಸುವ ನಿರ್ಧಾರವನ್ನು ಸ್ವಾತಿ ಮಾಲಿವಾಲ್ ಶ್ಲಾಘಿಸಿದರು, ಆದರೆ ಕೇಂದ್ರವು “ಇಲ್ಲಿಯವರೆಗೆ ನಿರ್ಣಾಯಕ ನಿರ್ಧಾರಗಳನ್ನು” ತೆಗೆದುಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಖಂಡಿಸಿದ್ದಾರೆ.