Delhi Heavy Rains: ದೆಹಲಿಯಲ್ಲಿ ಭಾರೀ ಮಳೆ, ಹಲವೆಡೆ ವಿದ್ಯುತ್ ಸಂಪರ್ಕ ಕಡಿತ

Delhi Heavy Rains: ಧಾರಾಕಾರ ಮಳೆಗೆ ರಾಷ್ಟ್ರ ರಾಜಧಾನಿ ದೆಹಲಿ ಜಲಾವೃತಗೊಂಡಿದೆ. ಸೋಮವಾರ ಮುಂಜಾನೆಯಿಂದಲೇ ದೆಹಲಿ ಹಾಗೂ ಸುತ್ತಮುತ್ತ ಧಾರಾಕಾರ ಮಳೆ ಸುರಿಯುತ್ತಿದೆ.

Delhi Heavy Rains: ನವದೆಹಲಿ: ಧಾರಾಕಾರ ಮಳೆಗೆ ರಾಷ್ಟ್ರ ರಾಜಧಾನಿ ದೆಹಲಿ ಜಲಾವೃತಗೊಂಡಿದೆ. ಸೋಮವಾರ ಮುಂಜಾನೆಯಿಂದಲೇ ದೆಹಲಿ ಹಾಗೂ ಸುತ್ತಮುತ್ತ ಧಾರಾಕಾರ ಮಳೆ ಸುರಿಯುತ್ತಿದೆ. ರಭಸವಾಗಿ ಬೀಸಿದ ಗಾಳಿಗೆ ರಸ್ತೆಯ ಮರಗಳು ಮುರಿದು ಬಿದ್ದಿವೆ. ಹಲವೆಡೆ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಅಂತೆಯೇ ವಿಮಾನ ಸಂಚಾರ ಅಸ್ತವ್ಯಸ್ತಗೊಂಡಿದೆ.

ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಅಧಿಕಾರಿಗಳು ಪ್ರಯಾಣಿಕರಿಗೆ ತಮ್ಮ ವಿಮಾನಗಳ ಬಗ್ಗೆ ಮಾಹಿತಿ ಮತ್ತು ಸಂಬಂಧಿತ ಏಜೆನ್ಸಿಗಳ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿರಲು ಸಲಹೆ ನೀಡಿದರು. ಬಲವಾದ ಗಾಳಿ ಮತ್ತು ಮಳೆಯಿಂದಾಗಿ ವಿಮಾನಗಳು ವಿಳಂಬವಾಗುತ್ತವೆ ಎಂದು ಜೆಟ್ ಏರ್ವೇಸ್ ಹೇಳಿದೆ.

ಭಾರತೀಯ ಹವಾಮಾನ ಇಲಾಖೆ (IMD) ದೆಹಲಿ, NCR, Dehat, Hindon AF ನಿಲ್ದಾಣ, ಬಹದ್ದೂರ್‌ಗಢ್, ಗಾಜಿಯಾಬಾದ್, ಇಂದಿರಾಪುರಂ, ಚಪ್ರೌಲಾ, ನೋಯ್ಡಾ, ದಾದ್ರಿ ಮತ್ತು ಗ್ರೇಟರ್ ನೋಯ್ಡಾ ಗುರುಗ್ರಾಮ್‌ನಲ್ಲಿ ಗಂಟೆಗೆ 60 ರಿಂದ 90 ಕಿಮೀ ವೇಗದಲ್ಲಿ ಗಾಳಿ ಬೀಸಲಿದೆ ಎಂದು ಮುನ್ಸೂಚನೆ ನೀಡಿದೆ. ಇನ್ನೂ ಎರಡು ಗಂಟೆಗಳ ಕಾಲ ಇದೇ ವಾತಾವರಣ ಇರಲಿದೆ ಎಂದು ಬಹಿರಂಗಪಡಿಸಿದ್ದಾರೆ.

Delhi Heavy Rains Power Blackout In Parts Of The National Capital

Follow us On

FaceBook Google News