ಓಮಿಕ್ರಾನ್ ಎದುರಿಸಲು ಸಿದ್ಧವಾಗಿದ್ದೇವೆ : ಕೇಜ್ರಿವಾಲ್

ಕರೋನಾ ಓಮಿಕ್ರಾನ್‌ನ ಹೊಸ ರೂಪಾಂತರವನ್ನು ಎದುರಿಸಲು ನಾವು ಸಿದ್ಧರಿದ್ದೇವೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ. 

ಹೊಸದಿಲ್ಲಿ: ಕರೋನಾ ಓಮಿಕ್ರಾನ್‌ನ ಹೊಸ ರೂಪಾಂತರವನ್ನು ಎದುರಿಸಲು ನಾವು ಸಿದ್ಧರಿದ್ದೇವೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.

ಇಂದು ಬೆಳಗ್ಗೆ ‘ದೆಹಲಿ ಕೀ ಯೋಗಶಾಲಾ’ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಸಂದರ್ಭದಲ್ಲಿ ಕೇಜ್ರಿವಾಲ್ ಮಾಧ್ಯಮಗಳೊಂದಿಗೆ ಮಾತನಾಡಿದರು. ‘ಒಮಿಕ್ರಾನ್ ರೂಪಾಂತರವನ್ನು ಎದುರಿಸಲು ನಾವು ಸಿದ್ಧರಿದ್ದೇವೆ. ಅಗತ್ಯವಿದ್ದರೆ ನಾವು ನಿರ್ಬಂಧಗಳನ್ನು ವಿಧಿಸುತ್ತೇವೆ. ಪ್ರಸ್ತುತ ನಿರ್ಬಂಧಗಳನ್ನು ವಿಧಿಸುವ ಅಗತ್ಯವಿಲ್ಲ ಎಂದು ಕೇಜ್ರಿವಾಲ್ ಹೇಳಿದ್ದಾರೆ.

ಅದೇ ರೀತಿ ದೆಹಲಿಯಲ್ಲಿ ಶಾಲೆಗಳು ಪುನರಾರಂಭವಾಗುವುದೇ? ಎಂಬ ಮಾಧ್ಯಮದವರ ಪ್ರಶ್ನೆಗೆ.. ‘ಸದ್ಯ ದೆಹಲಿಯಲ್ಲಿ ಶಾಲೆಗಳಿಗೆ ಚಳಿಗಾಲದ ರಜೆ ಮುಂದುವರಿದಿದೆ. ಚಳಿಗಾಲದ ರಜೆ ಮುಗಿದ ನಂತರ ಶಾಲೆಗಳನ್ನು ತೆರೆಯುವ ಬಗ್ಗೆ ನಾವು ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದು ಅವರು ಹೇಳಿದರು.

Stay updated with us for all News in Kannada at Facebook | Twitter
Scroll Down To More News Today