ದೀಪಾವಳಿಗೆ ಅಕ್ಕಿ ಮತ್ತು ಸಕ್ಕರೆ ಉಚಿತ ! ಯಾವ ಊರಲ್ಲಿ..

ದೀಪಾವಳಿ ಸಂದರ್ಭದಲ್ಲಿ ಎಲ್ಲಾ ಪಡಿತರ ಚೀಟಿದಾರರಿಗೆ 2 ಕೆಜಿ ಸಕ್ಕರೆ ಮತ್ತು 10 ಕೆಜಿ ಅಕ್ಕಿಯನ್ನು ಉಚಿತವಾಗಿ ನೀಡಲು ಪುದುಚೇರಿ ಮುಖ್ಯಮಂತ್ರಿ ರಂಗಸ್ವಾಮಿ ನಿರ್ಧರಿಸಿದ್ದಾರೆ. 

🌐 Kannada News :

ಪುದುಚೇರಿ (ಚೆನ್ನೈ): ದೀಪಾವಳಿ ಸಂದರ್ಭದಲ್ಲಿ ಎಲ್ಲಾ ಪಡಿತರ ಚೀಟಿದಾರರಿಗೆ 2 ಕೆಜಿ ಸಕ್ಕರೆ ಮತ್ತು 10 ಕೆಜಿ ಅಕ್ಕಿಯನ್ನು ಉಚಿತವಾಗಿ ನೀಡಲು ಪುದುಚೇರಿ ಮುಖ್ಯಮಂತ್ರಿ ರಂಗಸ್ವಾಮಿ ನಿರ್ಧರಿಸಿದ್ದಾರೆ.

ಈ ಮೂಲಕ ಪಡಿತರ ಚೀಟಿ ಹೊಂದಿರುವವರಿಗೆ ಹಬ್ಬದ ಉಡುಗೊರೆಯಾಗಿ 2 ಕೆಜಿ ಸಕ್ಕರೆ ಮತ್ತು 10 ಕೆಜಿ ಅಕ್ಕಿ ಸಿಗಲಿದೆ, ಇದರ ಮೂಲಕ ಆರ್ಥಿಕ ಸಂಕಷ್ಟದಲ್ಲಿರುವ ಕುಟುಂಬಗಳಿಗೆ ಕೊಂಚಿತ್ತಾದ್ರು ಸಹಾಯ ಆಗುವುದು ಸತ್ಯ.

ಈ ನಿಟ್ಟಿನಲ್ಲಿ ಪುದುಚೇರಿ ಸರ್ಕಾರ ಕಾರ್ಯದರ್ಶಿ ಉದಯಕುಮಾರ್ ಅವರು ಸಹಕಾರ ಸಂಘಗಳ ನಿಬಂಧಕರಿಗೆ ಸುತ್ತೋಲೆಯಲ್ಲಿ ಪಡಿತರ ಚೀಟಿದಾರರಿಗೆ ದೀಪಾವಳಿಗೆ ಸಕ್ಕರೆ ಮತ್ತು ಅಕ್ಕಿಯನ್ನು ಉಚಿತವಾಗಿ ನೀಡಲು ನಿರ್ಧರಿಸಿದ್ದು, ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಪಡಿತರ ಅಂಗಡಿಗಳ ವಿವರ ಕಳುಹಿಸುವಂತೆ ಸೂಚಿಸಿದ್ದಾರೆ.

ಹಾಗೂ ಎಲ್ಲಾ ವಿವರಗಳನ್ನು ಎರಡು ದಿನದಲ್ಲಿ ನೀಡಬೇಕಾಗಿ ತಿಳಿಸಲಾಗಿದೆ.

➟ ☞ Kannada News Today ಸುದ್ದಿಗಾಗಿ FacebookTwitter ಅನುಸರಿಸಿ. Google News | News App ಡೌನ್ಲೋಡ್ ಮಾಡಿಕೊಳ್ಳಿ.
Scroll Down To More News Today