Whistle, 11 ತಿಂಗಳ ಕಾಲ ಶ್ವಾಸಕೋಶದಲ್ಲಿ ‘ವಿಸಿಲ್’

11 ತಿಂಗಳಿಂದ 12 ವರ್ಷದ ಬಾಲಕನ ಶ್ವಾಸಕೋಶದಲ್ಲಿ ಸಿಲುಕಿಕೊಂಡಿದ್ದ ಸೀಟಿಯನ್ನು ಹೊರತೆಗೆಯಲಾಗಿದೆ.

ಕೋಲ್ಕತ್ತಾ : ಪಶ್ಚಿಮ ಬಂಗಾಳ ರಾಜ್ಯದ ಕೋಲ್ಕತ್ತಾದ ಎಸ್ ಎಸ್ ಕೆಎಂ ಸರಕಾರಿ ಆಸ್ಪತ್ರೆ ವೈದ್ಯರು ಅಪರೂಪದ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸಿದ್ದಾರೆ.

11 ತಿಂಗಳಿಂದ 12 ವರ್ಷದ ಬಾಲಕನ ಶ್ವಾಸಕೋಶದಲ್ಲಿ ಸಿಲುಕಿಕೊಂಡಿದ್ದ ಸೀಟಿಯನ್ನು ಹೊರತೆಗೆಯಲಾಗಿದೆ. ದಕ್ಷಿಣ 24 ಪರಗಣ ಜಿಲ್ಲೆಯ ಬರುಯಿಪುರದ ರೈಹಾನ್ ಲಸ್ಕರ್ ಎಂಬ ಬಾಲಕ ಈ ವರ್ಷದ ಜನವರಿಯಲ್ಲಿ ಚಿಪ್ಸ್ ತಿಂದ ನಂತರ ಆಕಸ್ಮಿಕವಾಗಿ ಪ್ಲಾಸ್ಟಿಕ್ ಸೀಟಿಯನ್ನು ನುಂಗಿದ.

ಬಾಯಿ ತೆರೆದಾಗಲೆಲ್ಲ ಶಿಳ್ಳೆ ಸದ್ದು ಕೇಳುತ್ತಿತ್ತು. ಅದೇ ಸಮಯದಲ್ಲಿ ಹೃದಯದ ಪ್ರದೇಶದಲ್ಲಿ ನೋವು, ಉಸಿರಾಟದ ತೊಂದರೆ ಮತ್ತು ಸೋಂಕುಗಳು ಕಾಣಿಸಿಕೊಳ್ಳಲಾರಂಭಿಸಿದವು. ವೈದ್ಯರನ್ನು ಸಂಪರ್ಕಿಸಿ ಬಾಲಕನಿಗೆ ಶಸ್ತ್ರ ಚಿಕಿತ್ಸೆ ಮಾಡಿ ವಿಸಿಲ್ ಹೊರ ತೆಗೆಯಲಾಯಿತು.

Stay updated with us for all News in Kannada at Facebook | Twitter
Scroll Down To More News Today