Welcome To Kannada News Today

ಲಾಕ್‌ಡೌನ್ : ನಿರುದ್ಯೋಗಿಗಳಲ್ಲಿ ಆತಂಕ, ವಯೋಮಿತಿ ವಿಸ್ತರಿಸುವುದೇ ಸರ್ಕಾರ?

Does government expand age limit among the unemployed?

🌐 Kannada News :

ಕೊರೋನಾ ಮಹಾಮಾರಿಯ ವಿಷಯವಾಗಿ ದೇಶ ಸಂಪೂರ್ಣ ಸ್ತಬ್ಧವಾಗಿದೆ, ಕೇಂದ್ರ ಸರ್ಕಾರ ದೇಶದ ತುಂಬಾ ೨೧ ದಿನಗಳ ಕಾಲ ಲಾಕ್‌ಡೌನ್ ಘೋಷಿಸಿದೆ, ದೇಶದ ಜನತೆಯ ಆರೋಗ್ಯದ ಹಿತ ದೃಷ್ಟಿಯಿಂದ ಪ್ರಧಾನಮಂತ್ರಿಗಳ ಕರೆಗೆ ದೇಶದ ಜನತೆ ಉತ್ತಮ ಸ್ಪಂದನೆ ನೀಡುತ್ತಿದ್ದಾರೆ, ಕೇಂದ್ರ ಸರ್ಕಾರವೂ ಲಾಕ್ ಡೌನ್‌ನಿಂದ ಜನರ ಮೇಲೆ ಆಗುವ ದುಷ್ಪರಿಣಾಮಗಳನ್ನು ಆಲೋಚಿಸಿ, ಅವರ ಕುಂದು ಕೊರತೆ ನೀಗಿಸಲು ೧.೭೦ ಲಕ್ಷ ಕೋಟಿ ರೂ. ಸ್ಪೆಷಲ್ ಪ್ಯಾಕೇಜ್ ಘೋಷಣೆ ಮಾಡಿದ್ದಾರೆ.

ಕೂಲಿ ಕಾರ್ಮಿಕರಿಗೆ, ಕಾರ್ಮಿಕ ವರ್ಗದವರಿಗೆ, ಹಾಗೂ ಇನ್ನಿತರ ತೊಂದರೆಯಲ್ಲಿ ಸಿಲುಕಿಕೊಂಡ ಎಲ್ಲರ ಬಗ್ಗೆಯೂ ಕಾಳಜಿ ವಹಿಸಿ ಅತ್ಯುತ್ತಮ ಕೆಲಸ ಮಾಡಿದೆ. ಬ್ಯಾಂಕ್ ಸಾಲ ಮರು ಪಾವತಿ ಮಾಡುವವರಿಗೆ ೩ ತಿಂಗಳ ವಿಸ್ತರಣಾವಧಿ, ಉಜ್ವಲ ಯೋಜನೆಯಡಿ ಗ್ಯಾಸ್ ಪಡೆದವರಿಗೆ ೩ ತಿಂಗಳು ಉಚಿತ ಗ್ಯಾಸ್, ರೈತರಿಗೆ, ಎಲ್ಲರಿಗೂ ಸದ್ಯದ ಅನಾನುಕೂಲಗಳನ್ನು ತಡೆಯಲು ಆದಷ್ಟು ಸಹಾಯ ಮಾಡಿದೆ.

ಆದರೆ, ಎಷ್ಟೋ ಯುವಕರು ತಮ್ಮ ವಿದ್ಯಾಭ್ಯಾಸ ಮುಗಿದು ಸರ್ಕಾರಿ ಕೆಲಸಕ್ಕೆ ಸೇರಬಯಸಲು ಆಸೆ ಹೊಂದಿರುತ್ತಾರೆ, ಸರ್ಕಾರಿ ಕೆಲಸಗಳಿಗೆ ಕನಿಷ್ಠ ಮತ್ತು ಗರಿಷ್ಠ ವಯೋಮಿತಿ ಇರುತ್ತದೆ, ಸಾಮಾನ್ಯವಾಗಿ ರಾಜ್ಯ ಅಥವಾ ಕೇಂದ್ರ ಸರ್ಕಾರ ತನ್ನಲ್ಲಿರುವ ಖಾಲಿ ಇರುವ ಹುದ್ದೆಗಳನ್ನು ನೇಮಿಸಿಕೊಳ್ಳುವಾಗ ವಯೋಮಿತಿಯನ್ನು ನಿರ್ಧರಿಸಿರುತ್ತದೆ.

ಹೀಗಿರುವಾಗ ಕೊನೆ ಅವಕಾಶಕ್ಕಾಗಿ ಕಾಯುತ್ತಿರುವ ಯುವಕರಿಗೆ ಲಾಕ್‌ಡೌನ್ ವಿಸ್ತರಣೆಯಾದರೆ ಕೊನೆ ಅವಕಾಶವೂ ಕೈ ತಪ್ಪಬಹುದು, ಹಾಗೂ ಲಾಕ್ ಡೌನ್ ವಿಸ್ತರಣೆ ಆಗದಿದ್ದರೂ ಕೊರೋನಾ ಮಹಾಮಾರಿಯಿಂದ ತಪ್ಪಿಸಿಕೊಂಡು ದೇಶ ಮರಳಿ ಸಹಜ ಸ್ಥಿತಿಗೆ ತಲುಪಬೇಕಾದರೆ ಸುಮಾರು ದಿನಗಳೇ ಕಳೆಯಬಹುದು. ಅಂತಹ ಪರಿಸ್ಥಿತಿ ಏನಾದರೂ ಉಂಟಾದರೆ, ಕೊನೆ ಗಳಿಗೆಯಲ್ಲಿ ಸರ್ಕಾರ ಕೊನೆ ಅವಕಾಶಕ್ಕಾಗಿ ಕಾಯುತ್ತಿರುವ ಉದ್ಯೋಗಾಕಾಂಕ್ಷಿ ಯುವಕರಿಗೂ ವಯೋಮಿತಿ ವಿಸ್ತರಣೆ ಮಾಡುತ್ತದೆಯಾ? ಅಥವಾ ಇವರನ್ನು ಇಲ್ಲೇ ಬಿಟ್ಟು ಮುಂದಿನ ಯುವಕರನ್ನು ಗಣನೆಗೆ ತೆಗೆದುಕೊಳ್ಳುವುದೋ ಎಂಬ ಪ್ರಶ್ನೆ ನಿರುದ್ಯೋಗಿಗಳನ್ನು ಕಾಡತೊಡಗಿದೆ.

Web Title :

Get Latest Kannada News an up-to-date news coverage

ಕ್ಷಣ ಕ್ಷಣದ ಕನ್ನಡ ಸುದ್ದಿಗಳಿಗಾಗಿ FacebookTwitterYouTube ಅನುಸರಿಸಿ.