ಸ್ವಪ್ನಾ ಸುರೇಶ್ಗೆ ಇಡಿ ಸಮನ್ಸ್
ಕೇರಳ ಚಿನ್ನ ಕಳ್ಳಸಾಗಣೆ ಪ್ರಕರಣ: ಜೂನ್ 22 ರಂದು ಸ್ವಪ್ನಾ ಸುರೇಶ್ಗೆ ಹಾಜರಾಗುವಂತೆ ಇಡಿ ಸಮನ್ಸ್
ನವದೆಹಲಿ: ಕೇರಳ ಚಿನ್ನ ಕಳ್ಳಸಾಗಣೆ ಪ್ರಕರಣದ (Kerala gold smuggling case) ಪ್ರಮುಖ ಆರೋಪಿ ಸ್ವಪ್ನಾ ಸುರೇಶ್ಗೆ ಜಾರಿ ನಿರ್ದೇಶನಾಲಯ (ಇಡಿ) ಶನಿವಾರ ಸಮನ್ಸ್ ಜಾರಿ ಮಾಡಿದೆ (ED summons Swapna Suresh). ಸುರೇಶ್ ಅವರಿಗೆ ಜೂನ್ 22ರಂದು ಹಾಜರಾಗುವಂತೆ ಇಡಿ ಕೇಂದ್ರ ಸಂಸ್ಥೆ ತಿಳಿಸಿದೆ.
ಇದಕ್ಕೂ ಮುನ್ನ ಕೇರಳದ ಮಾಜಿ ಶಾಸಕ ಪಿಸಿ ಜಾರ್ಜ್ ಗುರುವಾರ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ವಿರುದ್ಧ ಸುರೇಶ್ ಆರೋಪದ ಮೇಲೆ ವಾಗ್ದಾಳಿ ನಡೆಸಿದ್ದಾರೆ. ಸಿಪಿಐ(ಎಂ) ಮುಖಂಡರನ್ನು 14 ದಿನಗಳ ಕಾಲ ಜೈಲಿನಲ್ಲಿ ನೋಡಬೇಕು ಎಂದು ಅವರು ಹೇಳಿದ್ದಾರೆ. ಮಾಜಿ ಶಾಸಕ ಜಾರ್ಜ್ ಅವರು ಆಡಳಿತಾರೂಢ ಕೇರಳ ಸರ್ಕಾರವು ರಾಜ್ಯವನ್ನು ಆಳಿದ “ಅತ್ಯಂತ ಭ್ರಷ್ಟ” ಸರ್ಕಾರ ಎಂದು ಬಣ್ಣಿಸಿದರು.
ಇದು ಕೇರಳವನ್ನು ಆಳಿದ ಅತ್ಯಂತ ಭ್ರಷ್ಟ ಸರ್ಕಾರವಾಗಿದೆ ಎಂದು ಅವರು ಹೇಳಿದರು. ಸ್ವಪ್ನಾ ಸುರೇಶ್ ಬಹಿರಂಗ ಪಡಿಸಿದ ಬೆನ್ನಲ್ಲೇ ಭಾರೀ ಗೊಂದಲ ಸೃಷ್ಟಿಯಾಗಿದೆ. ಎಲ್ಲರೂ ಇದನ್ನು ಬಹಳ ಆಘಾತದಿಂದ ನೋಡುತ್ತಿದ್ದಾರೆ. ಸ್ವಪ್ನಾ ಪ್ರಕಾರ, ಚಿನ್ನ ಕಳ್ಳಸಾಗಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಮತ್ತು ಅವರ ಪತ್ನಿ, ಮಗ ಮತ್ತು ಮಗಳು ಚರ್ಚೆಯಲ್ಲಿ ತೊಡಗಿದ್ದರು. ಚಿನ್ನ ಕಳ್ಳಸಾಗಣೆ 21 ಬಾರಿ ಸಿಕ್ಕಿಬಿದ್ದಿಲ್ಲ. ಒಮ್ಮೆ ಮಾತ್ರ ಸಿಕ್ಕಿಬಿದ್ದಿತ್ತು.
ಈ ಪ್ರಕರಣದಲ್ಲಿ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಅವರ ಪತ್ನಿ ಮತ್ತು ಮಗಳು ಭಾಗಿಯಾಗಿರುವುದನ್ನು ಆರೋಪಿ ಸ್ವಪ್ನಾ ಸುರೇಶ್ ನ್ಯಾಯಾಲಯದಲ್ಲಿ ಬಹಿರಂಗಪಡಿಸಿದ್ದಾರೆ.
ಏತನ್ಮಧ್ಯೆ, ಕೇರಳದ ಚಿನ್ನದ ಕಳ್ಳಸಾಗಣೆ ಪ್ರಕರಣದ ಪ್ರಮುಖ ಆರೋಪಿ ಸ್ವಪ್ನಾ ಸುರೇಶ್ ಅವರ ಆರೋಪಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಇದು “ರಾಜಕೀಯ ಅಜೆಂಡಾದ ಭಾಗ” ಎಂದು ಬಣ್ಣಿಸಿದರು. ಆರೋಪಿಗಳ ಈ ಹೇಳಿಕೆಗಳು ರಾಜಕೀಯ ಅಜೆಂಡಾದ ಭಾಗವಾಗಿದೆ ಎಂದು ಸಿಎಂ ಹೇಳಿದರು. ಈ ಆರೋಪದಲ್ಲಿ ಒಂದು ಅಂಶವೂ ಸತ್ಯ ಇಲ್ಲ. ಈ ಸುಳ್ಳುಗಳನ್ನು ಹರಡುವ ಮೂಲಕ ನೀವು ಸರ್ಕಾರದ ಮತ್ತು ರಾಜಕೀಯ ನಾಯಕತ್ವದ ನಿರ್ಣಯವನ್ನು ನಾಶಪಡಿಸಬಹುದು ಎಂದು ನೀವು ಭಾವಿಸಿದರೆ, ಇದು ವ್ಯರ್ಥ ಕಸರತ್ತು ಎಂದರು.
ED summons Swapna Suresh to appear on June 22 in Kerala gold smuggling case
Follow Us on : Google News | Facebook | Twitter | YouTube