Welcome To Kannada News Today

Amazon poor service: ಅಮೇಜಾನ್ ನ ಕಳಪೆ ಸೇವೆಗೆ ಇಲ್ಲಿದೆ ನಿದರ್ಶನ

Amazon poor service: ಈ ಸುದ್ದಿಯ ನಿದರ್ಶನಕ್ಕೆ ಅಮೇಜಾನ್ ಡೆಲಿವೆರಿ ಬಾಯ್ ಮತ್ತು ಇನ್ನಷ್ಟು ಆಡಿಯೋ ತುಣುಕುಗಳು ಮತ್ತು ಕಾಲ್ ರೆಕಾರ್ಡಿಂಗ್ಸ್ ಸಹ ಇದ್ದು ಶೀಘ್ರದಲ್ಲೇ Youtube ನಲ್ಲಿ ಅಪ್ಲೋಡ್ ಮಾಡಲಾಗುತ್ತದೆ.

(Kannada News) : Amazon poor service: ಆನ್ಲೈನ್ ಶಾಪಿಂಗ್ ನ ದೈತ್ಯ ಕಂಪನಿ “ಅಮೇಜಾನ್” ಉತ್ತಮ ಸೇವೆ ನೀಡಿದ್ದಕ್ಕಿಂತ ಕಳಪೆ ಸೇವೆ ನೀಡಿರುವ ನಿದರ್ಶನಗಳೇ ಹೆಚ್ಚು, ಇದಕ್ಕೆ Flipkart ನಂತಹ ಪರ್ಯಾಯ ಶಾಪಿಂಗ್ ತಾಣ ಇದೆ ಎನ್ನುವುದು ಸಂತೋಷದ ವಿಚಾರ.

ಇತ್ತೀಚಿನ ದಿನಗಳಲ್ಲಿ Amazon ನ ವಿಶ್ವಾಸ ಕಡಿಮೆಯಾಗಲು ಮುಖ್ಯ ಕಾರಣ, ಡೆಲಿವರಿ ಬಾಯ್ ಗಳು, ಹೌದು ಬೃಹದಾಕಾರದಲ್ಲಿ ಕಂಪನಿ ಬೆಳೆಯಿತೇ ಹೊರತು ಡೆಲಿವೆರಿ ಬಾಯ್ಗಳು ಹಾಗೂ ವಸ್ತುಗಳನ್ನು ಗ್ರಾಹಕರಿಗೆ ಸರಿಯಾಗಿ ತಲುಪಿಸುವಲ್ಲಿ ಅದು ಸೋತಿದೆ.

ನಾವು Online ನಲ್ಲಿ ಬುಕ್ ಮಾಡಿದ ವಸ್ತುಗಳು ಅಲ್ಲಿಂದ ಹೊರಡುವುದು ನಿಜ, ಆದರೆ ಅದೆಷ್ಟೋ ವಸ್ತುಗಳನ್ನು ಡೆಲಿವೆರಿ ಬಾಯ್ ಗಳು ಗ್ರಾಹಕರಿಗೆ ತಲುಪಿಸದೆ, ತಮ್ಮ ಕೆಲಸದ ಹೊರೆ ಕಡಿಮೆ ಮಾಡಿಕೊಳ್ಳಲು ಮುಂದಾಗುತ್ತಾರೆ.

ಗ್ರಾಹಕರನ್ನು ಸಂಪರ್ಕಿಸದೆ, ಕರೆ ಮಾಡಲಾಗಿತ್ತು ಗ್ರಾಹಕರು ಸಿಗಲಿಲ್ಲ ಎಂದು ಅಪ್ಡೇಟ್ ಮಾಡಿ ಬಿಡುತ್ತಾರೆ, ಇದು ದಿನ ನಿತ್ಯ ಅದೆಷ್ಟೋ ಸಾವಿರಾರು ಪ್ರಕರಣಗಳು ನಡೆಯುವ ನಿದರ್ಶನ.

ಅಮೇಜಾನ್ ಡೆಲಿವೆರಿ ಬಾಯ್ (ಪ್ರಾತಿನಿಧ್ಯ ಚಿತ್ರ)
ಅಮೇಜಾನ್ ಡೆಲಿವೆರಿ ಬಾಯ್ (ಪ್ರಾತಿನಿಧ್ಯ ಚಿತ್ರ)

ಖುದ್ದಾಗಿ ನನಗೆ ಆದ ಅನುಭವ :

ನಮ್ಮ ಮನೆಯಲ್ಲಿ ಪ್ರೀತಿಯಿಂದ ಸಾಕಿದ ಬೆಕ್ಕಿಗೆ ನಾನು ಯಾವಾಗಲೂ ಆಹಾರವನ್ನು ಅಮೇಜಾನ್ ನಿಂದಲೇ ತರಿಸುತ್ತೇನೆ, ಅದೇ ರೀತಿ ಈ ತಿಂಗಳ ಹನ್ನೊಂದನೇ ತಾರೀಖಿನಿಂದು ಆಹಾರವನ್ನು ಬುಕ್ ಮಾಡಿದೆ, ದಿನಾಂಕ ಹದಿನೈದರನ್ನು ಅದು ಡೆಲಿವೆರಿ ಪಾಯಿಂಟ್ ನ ಕೊನೆಯ ಸ್ಥಳಕ್ಕೆ ಬಂದು ತಲುಪಿತು.

ಆದರೆ ಡೆಲಿವೆರಿ ಬಾಯ್ ಅದನ್ನು ತಲುಪಿಸದೆ, ಸುಳ್ಳು ಮಾಹಿತಿ ಅಪ್ಡೇಟ್ ಮಾಡಿ, ಕಸ್ಟಮರ್ ಅನ್ನು ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿ ವಾಪಸ್ ಹೋಗಿದ್ದಾನೆ.

ಮಾರನೇ ದಿನ ಅದೇ ಪ್ಯಾಕೇಜ್ ಕೊಂಡು ಬಂದ ಇನ್ನೊಬ್ಬ ಡೆಲಿವೆರಿ ಬಾಯ್, ಮರು ದಿನ ರಾತ್ರಿ ಕಾಲ್ ಮಾಡಿ ” ಸಾರ್, ತುಂಬಾ ಲೇಟ್ ಆಗೋಗಿದೆ, ಬೆಳಿಗ್ಗೆ ತಪ್ಪದೆ ನಿಮಗೆ ನಿಮ್ಮ ವಸ್ತು ತಲುಪಿಸುತ್ತೇನೆ, ಮಿಸ್ ಮಾಡೋದೇ ಇಲ್ಲ, ಅದು ಇದು ಅಂತ ಗೋಗೇರಿದ, ಮಾನವೀಯತೆ ದೃಷ್ಟಿಯಿಂದ ಹೋಗಲಿ ಇಷ್ಟೆಲ್ಲಾ ಹೇಳ್ತಾಯಿದ್ದಾನಲ್ಲ ಅಂತ ನಾನು ಸಹ ಓಕೇ ಅಂದೇ…

ನನ್ನ ಮೇಲೆ ನಂಭಿಕೆ ಇಲ್ಲಾ ಅಂದರೆ ನನ್ನ ಮೊಬೈಲ್ ನಂಬರ್ ತಗೊಳ್ಳಿ ಅಂತ ಈ ನಂಬರ್ ಸಹ ಕೊಟ್ಟ > 8197912313

ಇದಾಗಲೇ ಎರಡು ಬಾರಿ ಪ್ಯಾಕೇಜ್ ಬರಲಿಲ್ಲ, ಇತ್ತ ಬೆಕ್ಕಿಗೆ ಊಟವಿಲ್ಲ, ಹೋಗ್ಲಿ ಅವನು ಹೇಳಿದಂತೆ ಆರನೇ ದಿನ ಕರೆ ಮಾಡಿದರೆ, ಕಥೆನೇ ಬದಲಾಯಿಸಿದ, ಕೊಟ್ಟ ನಂಬರ್ ಗೆ ಕರೆ ಮಾಡಿದರೆ ನಿರಂತರ ಡಿಸ್ ಕನೆಕ್ಟ್ ಮಾಡಲಾರಂಭಿಸಿದ, ಕೊನೆಗೆ ಬೇರೊಂದು ನಂಬರ್ ನಿಂದ ಕಾಲ್ ಮಾಡಿದಾಗ ಮತ್ತೆ ತಗಲಾಕ್ಕೊಂಡ….

example of Amazon poor service
example of Amazon poor service

ಈಗ ಏನೂ ಗೊತ್ತಿಲ್ಲದವನಂತೆ ” ಸರ್ ನಿಮ್ಮ ಪ್ಯಾಕೇಜ್ ಇನ್ನು ಬಂದಿಲ್ವ, ಇವತ್ತು ನಂದು ಬೇರೆ ರೂಟ್ , ಅದು ಇದು ಅಂತ ಕಥೆ ಕಟ್ಟಿದ, ಕೊನೆಗೆ ಇವತ್ತು ರಾತ್ರಿ ಒಂದು ಘಂಟೆ ಆದ್ರೂ ನಿಮ್ಮ ಪ್ಯಾಕೇಜ್ ಕೊಡ್ತೀನಿ ಸಾರ್….. ಅಂದವನು ಸ್ವಿಚ್ ಆಪ್ ಮಾಡಿ ಗಡತ್ತಾಗಿ ನಿದ್ದೆ ಹೋಗಿದ್ದ……

ಸ್ನೇಹಿತರೆ, ಇದು ದಿನ ನಿತ್ಯದ ಅಮೇಜಾನ್ ಡೆಲಿವಿರಿ ಬಾಯ್ ಗಳ ಸೇವೆ, ಇದೆಷ್ಟೋ ಸಾವಿರಾರು ಪ್ರಕರಣಗಳು ಅಮೇಜಾನ್ ನ ನಕಲಿ ಸೇವೆಯನ್ನು ದೃಢಪಡಿಸಿವೆ.

ಆದರೆ ಇಂತಹ ಕಳಪೆ ಕಂಪನಿಗಳ ಪರ್ಯಾಯವಾಗಿ ಫ್ಲಿಪ್ ಕಾರ್ಟ್ ನಂತಹ ಉತ್ತಮ ಸೇವೆ ಹೊದಗಿಸುವ ಕಂಪನಿಗಳು ಇವೆ ಎನ್ನುವುದು ನಿರಾಳದ ವಿಷಯ..

ಕಾಡುಗೋಡಿ, ವೈಟ್ ಫೀಲ್ಡ್ ಭಾಗದಲ್ಲಿ ಅಮೇಜಾನ್ ಸೇವೆ ನಂಬಲಾಗದಷ್ಟು ಕಳಪೆ, ಸ್ನೇಹಿತರೆ ನಿಮಗೂ ಈ ಅನುಭವಾಗಿದ್ದರೆ ನಮ್ಮಲ್ಲಿ ಹಂಚಿಕೊಳ್ಳಿ, ಅಮೇಜಾನ್ ಗೆ ನೇರವಾಗಿ ಮನವರಿಕೆ ಆಗುವವರೆಗೆ ತಲುಪಿಸುತ್ತೇವೆ.

ಈ ಸುದ್ದಿಯ ನಿದರ್ಶನಕ್ಕೆ ಅಮೇಜಾನ್ ಡೆಲಿವೆರಿ ಬಾಯ್ ಮತ್ತು ಇನ್ನಷ್ಟು ಆಡಿಯೋ ತುಣುಕುಗಳು ಮತ್ತು ಕಾಲ್ ರೆಕಾರ್ಡಿಂಗ್ಸ್ ಸಹ ಇದ್ದು ಶೀಘ್ರದಲ್ಲೇ Youtube ನಲ್ಲಿ ಅಪ್ಲೋಡ್ ಮಾಡಲಾಗುತ್ತದೆ.

ಅಮೇಜಾನ್ ನಲ್ಲಿ ಬುಕ್ ಮಾಡಲಾಗಿದ್ದ ವಸ್ತುಗಳ ವಿವರ

Product 1 : Tracking ID: 260881883677
Product 2 : Tracking ID: 260881840359
Product 3 : Tracking ID: 260885495609

Web Title : example of Amazon poor service

Contact for web design services Mobile