TV Actor Murdered, ಟಿವಿ ನಟಿಯ ಕೊಲೆ, ಪತಿಯ ಬಂಧನ

Extra Marital Affair, Punjabi TV Actor Murdered By Husband

ಕನ್ನಡ ನ್ಯೂಸ್ ಟುಡೇIndia News

ಪಂಜಾಬ್ :  ಅಕ್ರಮ ಸಂಬಂಧವಿದೆ ಎಂಬ ಅನುಮಾನದ ಮೇಲೆ ಪಂಜಾಬ್‌ನ TV ನಟಿಯನ್ನು ಆಕೆಯ ಪತಿ ಮತ್ತು ಆತನ ಸಹಚರರು ಉತ್ತರಾಖಂಡದ ನೈನಿತಾಲ್ ಜಿಲ್ಲೆಯಲ್ಲಿ ಹತ್ಯೆ ಮಾಡಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಶುಕ್ರವಾರ ತಿಳಿಸಿದ್ದಾರೆ.

ಪತಿ ರವೀಂದರ್ ಪಾಲ್ ಸಿಂಗ್ ಅವರು ತಮ್ಮ ಹೆಂಡತಿಗೆ ಬೇರೊಬ್ಬರೊಂದಿಗೆ ಅಕ್ರಮ ಸಂಬಂಧವಿದೆ ಎಂದು ಶಂಕಿಸಿದ್ದಾರೆ ಮತ್ತು ಆಕೆಯನ್ನು ಕೊಲ್ಲಲು ತನ್ನ ಸ್ನೇಹಿತನೊಂದಿಗೆ ಸಂಚು ರೂಪಿಸಿದ್ದಾರೆ ಎಂದು ನೈನಿತಾಲ್ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ.

ಪಂಜಾಬ್‌ನ ಫಿರೋಜ್‌ಪುರ ನಿವಾಸಿ ರವೀಂದರ್ ಪಾಲ್ ಸಿಂಗ್ ತನ್ನ ಹೆಂಡತಿಯನ್ನು ನಂಬಿಸಿ, ತನ್ನ ಸ್ನೇಹಿತ ಕುಲದೀಪ್‌ಗೆ ಚಲನಚಿತ್ರ ಜಗತ್ತಿನಲ್ಲಿ ಸಂಪರ್ಕಗಳಿವೆ ಮತ್ತು ಬಾಲಿವುಡ್‌ನಲ್ಲಿ ನಿನಗೆ ಉತ್ತಮ ಅವಕಾಶಕ್ಕೆ ಸಹಾಯ ಮಾಡುತ್ತಾನೆಂದು ಹೇಳಿ ಸ್ನೇಹಿತನನ್ನು ಭೇಟಿಯಾಗಲು ಕರೆತಂದಿದ್ದಾನೆ..

ನಂತರ ಆಕೆಗೆ ಪಾನೀಯದಲ್ಲಿ ನಿದ್ರೆ ಮಾತ್ರೆ ನೀಡಿ, ಆಕೆಯ ಪ್ರಜ್ಞೆ ತಪ್ಪಿಸಿದ್ದಾರೆ. ಆಕೆ ಪ್ರಜ್ಞೆ ಕಳೆದುಕೊಳ್ಳುತ್ತಿದ್ದಂತೆ, ಆಕೆಯ ಕತ್ತು ಹಿಸುಕಿ ಗುರುತಿಸಲು ಕಷ್ಟವಾಗುವಂತೆ ಅವಳ ದೇಹವನ್ನು ಸುಟ್ಟುಹಾಕಿದ್ದಾರೆ, ಮೃತ TV ನಟಿ ಪಂಜಾಬ್‌ನ 29 ವರ್ಷದ ಅನಿತಾ ಸಿಂಗ್ ಎಂದು ತಿಳಿದುಬಂದಿದೆ.

ಕಲದುಂಗಿ ಎಂಬ ಅರಣ್ಯ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಅಲ್ಲಿಗೆ ಹೋಗುವ ಮಾರ್ಗದ ಸಿಸಿಟಿವಿ ಕ್ಯಾಮೆರಾ ತುಣುಕನ್ನು ಪೊಲೀಸರು ಪರಿಶೀಲಿಸಿ, ಅಪರಾಧಿಗಳನ್ನು ಜೈಲಿಗೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ವಿಚಾರಣೆಯ ವೇಳೆ ಕುಲದೀಪ್  ಅಪರಾಧವನ್ನು ಒಪ್ಪಿಕೊಂಡಿದ್ದಾನೆ ಮತ್ತು ಶವವು TV ನಟಿ ಅನಿತಾ ಸಿಂಗ್ ಅವರ ಶವ ಎಂದು ತಿಳಿಸಿದ್ದಾನೆ, ಆಕೆಯ ಪತಿ ಕೊಲೆಗೆ ಸಂಚು ರೂಪಿಸಿದ್ದು, ಆಕೆ ಅಕ್ರಮ ಸಂಬಂಧ ಹೊಂದಿದ್ದಳು, ಆದ್ದರಿಂದ ಕೊಲೆ ಮಾಡಲಾಯಿತು ಎಂದಿದ್ದಾರೆ.

Web Title : Extra Marital Affair, Punjabi TV Actor Murdered Husband
ಕನ್ನಡ ನ್ಯೂಸ್ ನವೀಕರಣಗಳಿಗಾಗಿ ನಮ್ಮ  Facebook  | Twitter । YouTube News Channel ಅನುಸರಿಸಿ. Latest News ಜೊತೆಗೆ Breaking News ನೀವಿರುವಲ್ಲಿಯೇ ಪಡೆಯಿರಿ.