ನಿರ್ಭಯಾ ಅಪರಾಧಿಗಳನ್ನು ಭೇಟಿ ಮಾಡಲು ಕುಟುಂಬಗಳಿಗೆ ಕೊನೆಯ ಅವಕಾಶ

Families allowed to meet the Nirbhaya convicts for the last time

ಕನ್ನಡ ನ್ಯೂಸ್ ಟುಡೇ – 

ನವದೆಹಲಿ : ನಿರ್ಭಯಾ ಪ್ರಕರಣದಲ್ಲಿ ನಾಲ್ವರು ಆರೋಪಿಗಳನ್ನು ಈ ತಿಂಗಳ 22 ರಂದು ಗಲ್ಲಿಗೇರಿಸುವ ಸಿದ್ಧತೆ ನಡೆದಿದೆ , ಈ ನಡುವೆ ಆರೋಪಿಗಳನ್ನು ಉನ್ನತ ಭದ್ರತಾ ಕಾರಾಗೃಹಗಳಿಗೆ ಸ್ಥಳಾಂತರಿಸಲಾಗಿದೆ. ಪವನ್ ಗುಪ್ತಾ, ಅಕ್ಷಯ್, ವಿನಯ್ ಶರ್ಮಾ ಮತ್ತು ಮುಖೇಶ್ ಸಿಂಗ್ ಅವರನ್ನು ಮೂವರು ಜೈಲು ಕಾವಲುಗಾರರ ಮೇಲ್ವಿಚಾರಣೆಯಲ್ಲಿ 24 ಗಂಟೆಗಳ ಕಾಲ ಕಣ್ಗಾವಲಿನ ನಡುವೆ ಜೈಲು ಕೋಣೆಗಳಲ್ಲಿ ಇರಿಸಲಾಗಿದೆ.

ಇತರ ಕೈದಿಗಳು ವಾರಕ್ಕೆ ಎರಡು ಬಾರಿ ತಮ್ಮ ಕುಟುಂಬ ಸದಸ್ಯರನ್ನು ಭೇಟಿ ನೀಡುವುದು ವಾಡಿಕೆ. ಆದರೆ ನಿರ್ಭಯಾ ಅಪರಾಧಿಗಳಿಗೆ ನ್ಯಾಯಾಲಯ ಡೆತ್ ವಾರಂಟ್ ಹೊರಡಿಸಿ, ತಿಹಾರ್ ಜೈಲು ಅಧಿಕಾರಿಗಳಿಗೆ ಕುಟುಂಬ ಸದಸ್ಯರನ್ನು ಕೊನೆಯ ಬಾರಿಗೆ ಭೇಟಿಯಾಗಲು ಅವಕಾಶ ನೀಡಲು ಸೂಚಿಸಿದೆ.

ನಿರ್ಭಯಾ ಪ್ರಕರಣದಲ್ಲಿ ನಾಲ್ವರು ಕೈದಿಗಳು ಎಂದಿನಂತೆ ವರ್ತಿಸುತ್ತಿದ್ದಾರೆ ಎಂದು ಜೈಲಿನ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ನಿರ್ಭಯಾ ಪ್ರಕರಣ ಗಲ್ಲಿಗೇರಿಸುವುದರ ಮೂಲಕ ಕೊನೆಗೊಳ್ಳಲಿದೆ ಎಂಬ ಭರವಸೆ ಇದೆ ಎಂದು ಹೆಸರು ಹೇಳಲು ಇಷ್ಟಪಡದ ತಿಹಾರ್ ಜೈಲಿನ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.