Video, ಸರಿಯಾದ ಬೆಲೆ ಸಿಗಲಿಲ್ಲ.. 160 ಕೆಜಿ ಬೆಳ್ಳುಳ್ಳಿಗೆ ಬೆಂಕಿ ಹಚ್ಚಿದ ರೈತ..!
ರೈತನಿಗೆ ಫಸಲು ಬಂದರೆ ಖುಷಿಯಾಗುತ್ತದೆ. ಆದರೆ ಅದೇ ಫಸಲಿಗೆ ಸರಿಯಾದ ಬೆಲೆ ಸಿಗದಿದ್ದಾಗ ಕುಗ್ಗಿಹೋಗುತ್ತಾನೆ... ಬೆಳೆಗೆ ಸರಿಯಾದ ಬೆಲೆ ಸಿಗದಾಗ ಕಂಗಾಲಾಗುವ ರೈತ ತೀವ್ರ ಮಾನಸಿಕ ಯಾತನೆ ಅನುಭವಿಸುವಂತಾಗುತ್ತದೆ.
ಭೋಪಾಲ್: ರೈತನಿಗೆ ಫಸಲು ಬಂದರೆ ಖುಷಿಯಾಗುತ್ತದೆ. ಆದರೆ ಅದೇ ಫಸಲಿಗೆ ಸರಿಯಾದ ಬೆಲೆ ಸಿಗದಿದ್ದಾಗ ಕುಗ್ಗಿಹೋಗುತ್ತಾನೆ… ಬೆಳೆಗೆ ಸರಿಯಾದ ಬೆಲೆ ಸಿಗದಾಗ ಕಂಗಾಲಾಗುವ ರೈತ ತೀವ್ರ ಮಾನಸಿಕ ಯಾತನೆ ಅನುಭವಿಸುವಂತಾಗುತ್ತದೆ. ಕಷ್ಟಪಟ್ಟು ಕಟಾವು ಮಾಡಿದ ಬೆಳ್ಳುಳ್ಳಿಗೆ ಸರಿಯಾದ ಬೆಲೆ ಸಿಗಲಿಲ್ಲ ಎಂದು ತೀವ್ರ ನೊಂದಿದ್ದ ರೈತ ಮಾರುಕಟ್ಟೆಯಲ್ಲಿ ಬೆಂಕಿ ಹಚ್ಚಿದ್ದಾನೆ. ಮಧ್ಯಪ್ರದೇಶದ ಮಂದಸೌರ್ ಮಂಡಿಯಲ್ಲಿ ಈ ಘಟನೆ ನಡೆದಿದೆ.
ಶಂಕರ್ ಎಂಬ ರೈತ ತಾನು ಕಟಾವು ಮಾಡಿದ್ದ 160 ಕೆಜಿ ಬೆಳ್ಳುಳ್ಳಿಯನ್ನು ಮಂದಸೌರ್ ನ ಸಗಟು ಮಾರುಕಟ್ಟೆಗೆ ತಂದಿದ್ದ. ಬಹಿರಂಗ ಹರಾಜಿನಲ್ಲಿ ಬೆಳ್ಳುಳ್ಳಿಗೆ ಸೂಕ್ತ ಬೆಲೆ ಸಿಗಲಿಲ್ಲ. ರೂ. 5,000 ಖರ್ಚು ಮಾಡಿ ಮಾರುಕಟ್ಟೆಗೆ ಬೆಳ್ಳುಳ್ಳಿ ತಂದರೆ ಬಹಿರಂಗ ಹರಾಜಿನಲ್ಲಿ ಅದರ ಮೌಲ್ಯ ಕೇವಲ ರೂ. 1100 ಮಾತ್ರ ಆಗಿತ್ತು. ಇದರಿಂದ ತೀವ್ರ ನೊಂದಿದ್ದ ರೈತ ಬೆಳ್ಳುಳ್ಳಿ ಮಾರಾಟ ಮಾಡದೆ ಬೆಂಕಿ ಹಚ್ಚಿದ್ದಾನೆ. ಈ ಮನಕಲುಕುವ ಘಟನೆ ಎಲ್ಲರನ್ನು ನೋಯಿಸುವ ಪ್ರಸಂಗವಾಗಿದೆ.
A young #Farmers Shankar Sirfira set ablaze around 160 kg garlic produce on not getting adequate price from traders during open auction in the Mandsaur Mandi @ndtv @ndtvindia pic.twitter.com/90wdDA7OR8
— Anurag Dwary (@Anurag_Dwary) December 19, 2021
Follow Us on : Google News | Facebook | Twitter | YouTube