Viral News, ಒಂಟೆ ಸವಾರಿ ಮೂಲಕ ಜನರಿಗೆ ಲಸಿಕೆ ಹಾಕುವ ಆರೋಗ್ಯ ಕಾರ್ಯಕರ್ತೆ
ಮಹಿಳಾ ಆರೋಗ್ಯ ಕಾರ್ಯಕರ್ತೆ ಲಸಿಕೆ ಅಭಿಯಾನಕ್ಕಾಗಿ ಒಂಟೆ ಸವಾರಿ ಮೂಲಕ ಶ್ರಮ ಪಡುತ್ತಿರುವುದು ಇದೀಗ ವೈರಲ್ ಆಗಿದೆ, ರಾಜಸ್ಥಾನವು ಮರುಭೂಮಿ ರಾಜ್ಯ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ....
ಮಹಿಳಾ ಆರೋಗ್ಯ ಕಾರ್ಯಕರ್ತೆ ಲಸಿಕೆ ಅಭಿಯಾನಕ್ಕಾಗಿ ಒಂಟೆ ಸವಾರಿ ಮೂಲಕ ಶ್ರಮ ಪಡುತ್ತಿರುವುದು ಇದೀಗ ವೈರಲ್ ಆಗಿದೆ, ರಾಜಸ್ಥಾನವು ಮರುಭೂಮಿ ರಾಜ್ಯ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಆ ಹಳ್ಳಿಗಳನ್ನು ತಲುಪಲು, ಉರಿಯುತ್ತಿರುವ ಮರಳು ಮರುಭೂಮಿಯ ಮೂಲಕ ಮೈಲುಗಟ್ಟಲೆ ನಡೆದುಕೊಂಡು ಹೋಗಬೇಕು. ಇಂತಹ ದೂರದ ಹಳ್ಳಿಯ ಜನರಿಗೆ ಲಸಿಕೆ ಹಾಕುವುದು ಶ್ರಮದ ಕೆಲಸ.
ಆದರೆ ಅವರಿಗೆ ಲಸಿಕೆ ಹಾಕುವ ಉತ್ತಮ ಮನಸ್ಸಿನಿಂದ ಆರೋಗ್ಯ ಕಾರ್ಯಕರ್ತರೊಬ್ಬರು ಮರಳುಗಾಡಿನಲ್ಲಿ ಒಂಟೆ ಸವಾರಿ ಮಾಡಿ ಗ್ರಾಮಸ್ಥರಿಗೆ ಲಸಿಕೆ ಹಾಕಿದರು. ಆಕೆಯ ಸಮರ್ಪಣಾ ಭಾವಕ್ಕೆ ಪ್ರಶಂಸೆ ವ್ಯಕ್ತವಾಗುತ್ತಿದೆ. ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಅವರು ಮಾಡಿರುವ ಈ ಮಹತ್ತರ ಕಾರ್ಯದ ಬಗ್ಗೆ ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಫೋಟೋ ಆಕೆಯ ಕರ್ತವ್ಯದ ಬದ್ಧತೆಯನ್ನು ತೋರಿಸುತ್ತದೆ.
ರಾಜಸ್ಥಾನದಲ್ಲಿ, ಮಹಿಳಾ ಆರೋಗ್ಯ ಕಾರ್ಯಕರ್ತೆಯೊಬ್ಬರು ಸಣ್ಣ ಹಳ್ಳಿಯೊಂದರಲ್ಲಿ ಜನರಿಗೆ ಲಸಿಕೆ ಹಾಕಲು ಈ ಧೈರ್ಯ ಮಾಡಿದ್ದಾರೆ. ಬ್ಯಾಡ್ಮರ್ ಜಿಲ್ಲೆಯ ಮರುಭೂಮಿಯಲ್ಲಿ ಮಹಿಳೆಯೊಬ್ಬರು ಒಂಟೆ ಸವಾರಿ ಮಾಡಿ ಲಸಿಕೆ ಹಾಕುವ ಕಾರ್ಯದ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಆರೋಗ್ಯ ಕಾರ್ಯಕರ್ತೆಯ ಈ ಬದ್ಧತೆಗೆ ಜನರೂ ಹ್ಯಾಟ್ಸಾಫ್ ಹೇಳುತ್ತಿದ್ದಾರೆ.
Follow Us on : Google News | Facebook | Twitter | YouTube