ಮದುವೆ ಮಂಟಪದಲ್ಲಿ ಅಗ್ನಿ ಅವಘಡ, ವಿಡಿಯೋ ವೈರಲ್

ಮದುವೆ ಮಂಟಪದಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡು ಕೆಲಕಾಲ ನೆರೆದಿದ್ದ ಬಂಧು ಬಳಗ ಕಕ್ಕಾಬಿಕ್ಕಿಯಾದರು. ಅವರಲ್ಲಿ ಕೆಲವರು ವಧುವರರನ್ನು ರಕ್ಷಿಸಿದರು. ಇಷ್ಟೆಲ್ಲ ಆದರೂ ಕೆಲವರು ಕೊಂಚಿತ್ತೂ ಕದಲದೆ ವಿವಾಹ ಭೋಜನ ಸವಿದರು.

ಮದುವೆ ಮಂಟಪದಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡು ಕೆಲಕಾಲ ನೆರೆದಿದ್ದ ಬಂಧು ಬಳಗ ಕಕ್ಕಾಬಿಕ್ಕಿಯಾದರು. ಅವರಲ್ಲಿ ಕೆಲವರು ವಧುವರರನ್ನು ರಕ್ಷಿಸಿದರು. ಇಷ್ಟೆಲ್ಲ ಆದರೂ ಕೆಲವರು ಕೊಂಚಿತ್ತೂ ಕದಲದೆ ವಿವಾಹ ಭೋಜನ ಸವಿದರು. ವ್ಯಕ್ತಿಯೊಬ್ಬ ಇಷ್ಟೆಲ್ಲಾ ಅವಘಡ ಸಂಭವಿಸಿದರೂ ಊಟ ಮಾಡುತ್ತಿರುವ ವಿಡಿಯೋ ವೈರಲ್ ಆಗಿದೆ.

ಥಾಣೆಯ ಅನ್ಸಾರಿ ಮ್ಯಾರೇಜ್ ಹಾಲ್ ನಲ್ಲಿ ಭಾನುವಾರ ಮದುವೆ ಸಮಾರಂಭ ನಡೆದಿದ್ದು, ರಾತ್ರಿ 8 ಗಂಟೆ ಸುಮಾರಿಗೆ ಮದುವೆ ಮಂಟಪದಲ್ಲಿ ಅಗ್ನಿ ಅವಘಡ ಸಂಭವಿಸಿದ್ದರಿಂದ ಭಾರಿ ಬೆಂಕಿ ಕಾಣಿಸಿಕೊಂಡಿದೆ.

ಆದರೆ.. ಕೆಲವರು ಏನೂ ನಡೆದೇ ಇಲ್ಲವೆಂಬಂತೆ ಸ್ವಲ್ಪವೂ ಕದಲದೆ ಊಟವನ್ನು ಸೇವಿಸುತ್ತಿರುವುದು… ನೆಟ್ಟಿಗರು ಶಾಕ್ ಆಗಿದ್ದಾರೆ. ಹಿಂಬದಿಯಲ್ಲಿ ದೊಡ್ಡ ಪ್ರಮಾಣದ ಬೆಂಕಿ ಹೊತ್ತಿ ಕೊಂಡಿದ್ದರು.. ಕದಲದೆ ವಿವಾಹ ಭೋಜನ ಸವಿಯುತ್ತಿರುವುದು ವೈರಲ್ ಆಗಿದೆ. ಈ ವಿಲಕ್ಷಣ ಘಟನೆಯನ್ನು ವ್ಯಕ್ತಿಯೊಬ್ಬರು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದ್ದು ವೈರಲ್ ಆಗಿದೆ. ಬೆಂಕಿಯಲ್ಲಿ ಜನ ಸತ್ತರೂ ಊಟ ಮಾಡಲೇಬೇಕು ಎಂದು ನೆಟ್ಟಿಗರು ಟೀಕಿಸಿದ್ದಾರೆ.

Stay updated with us for all News in Kannada at Facebook | Twitter
Scroll Down To More News Today