ಯುಪಿಯಲ್ಲಿ ಚಳಿಯಿಂದ ಕಾಗೆಗಳು ಸಾವು, ಪರೀಕ್ಷೆಗೆ ರವಾನೆ

ಹಕ್ಕಿ ಜ್ವರ ದೇಶದ ಹಲವು ರಾಜ್ಯಗಳ ಮೇಲೆ ಪರಿಣಾಮ ಬೀರುತ್ತಿದೆ. ಈ ವೇಳೆ ಉತ್ತರ ಪ್ರದೇಶದ ಜಾನ್ಸಿ ಜಿಲ್ಲೆಯ ಶಾಲೆಯಲ್ಲಿ ನಾಲ್ಕು ಕಾಗೆಗಳು ಸಾವನ್ನಪ್ಪಿವೆ. 

ಯುಪಿಯಲ್ಲಿ ಚಳಿಯಿಂದ ಕಾಗೆಗಳು ಸಾವು, ಪರೀಕ್ಷೆಗೆ ರವಾನೆ

(Kannada News) : ಜಾನ್ಸಿ (ಉತ್ತರ ಪ್ರದೇಶ): ಹಕ್ಕಿ ಜ್ವರ ದೇಶದ ಹಲವು ರಾಜ್ಯಗಳ ಮೇಲೆ ಪರಿಣಾಮ ಬೀರುತ್ತಿದೆ. ಈ ವೇಳೆ ಉತ್ತರ ಪ್ರದೇಶದ ಜಾನ್ಸಿ ಜಿಲ್ಲೆಯ ಶಾಲೆಯಲ್ಲಿ ನಾಲ್ಕು ಕಾಗೆಗಳು ಸಾವನ್ನಪ್ಪಿವೆ.

ಹಕ್ಕಿ ಜ್ವರ ಹರಡಿರುವ ಈ ವೇಳೆ ಯುಪಿಯಲ್ಲಿ ಕಾಗೆಗಳ ಸಾವು ಭಯಕ್ಕೆ ಕಾರಣವಾಗಿದೆ. ಆದರೆ ಚಳಿಯಿಂದಾಗಿ ಕಾಗೆಗಳು ಸತ್ತಿವೆ ಎಂದು ಪಶುವೈದ್ಯಾಧಿಕಾರಿಗಳು ಹೇಳಿದ್ದಾರೆ.

ಸತ್ತ ಕಾಗೆಗಳ ಮಾದರಿಗಳನ್ನು ಪರೀಕ್ಷೆಗೆ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.

ಜಿಲ್ಲಾ ಮ್ಯಾಜಿಸ್ಟ್ರೇಟ್ ಆಂಡ್ರಾ ವಂಶಿ ಮಾತನಾಡಿ, ಚಳಿಯಿಂದಾಗಿ ಪಕ್ಷಿಗಳು ಸತ್ತಿರಬಹುದು ಮತ್ತು ಜಾನ್ಸಿ ಜಿಲ್ಲೆಯಲ್ಲಿ ಹಕ್ಕಿ ಜ್ವರ ಇಲ್ಲ ಎಂದಿದ್ದಾರೆ.

ಹಕ್ಕಿ ಜ್ವರ ಈಗಾಗಲೇ ಕೇರಳ, ರಾಜಸ್ಥಾನ, ಮಧ್ಯಪ್ರದೇಶ, ಹಿಮಾಚಲ ಪ್ರದೇಶ ಮತ್ತು ಹರಿಯಾಣದ ಮೇಲೆ ಪರಿಣಾಮ ಬೀರಿದೆ.

Web Title : Four crows have died in Jhansi district of UP

Scroll Down To More News Today