ಇಡ್ಲಿಯಲ್ಲಿ ಸತ್ತ ಕಪ್ಪೆ, ಹೋಟೆಲ್ ಮಾಲೀಕ ಪರಾರಿ

ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ರೋಗಿಯೊಬ್ಬರ ಸಂಬಂಧಿಕರೊಬ್ಬರು ಕ್ಯಾಂಟೀನ್ ನಿಂದ ತಂದ ಇಡ್ಲಿಯಲ್ಲಿ ಸತ್ತ ಕಪ್ಪೆ ಶವ ಕಂಡು ಬೆಚ್ಚಿಬಿದ್ದಿದ್ದಾರೆ.

ಚೆನ್ನೈ : ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ರೋಗಿಯೊಬ್ಬರ ಸಂಬಂಧಿಕರೊಬ್ಬರು ಕ್ಯಾಂಟೀನ್ ನಿಂದ ತಂದ ಇಡ್ಲಿಯಲ್ಲಿ ಸತ್ತ ಕಪ್ಪೆ ಶವ ಕಂಡು ಬೆಚ್ಚಿಬಿದ್ದಿದ್ದಾರೆ. ತಂಜಾವೂರು ಜಿಲ್ಲೆಯ ಪ್ರಭುತ್ವಪತಿ ರಸ್ತೆಯಲ್ಲಿನ ಕ್ಯಾಂಟೀನ್ ನಿಂದ ಇಡ್ಲಿ ತರಲಾಗಿತ್ತು.

ಮುರುಗೇಶನ್ ಆಸ್ಪತ್ರೆಯ ಹೃದ್ರೋಗ ವಿಭಾಗದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮುರುಗೇಶನ್ ಅವರ ಸಂಬಂಧಿಕರು ಶನಿವಾರ ಕ್ಯಾಂಟೀನ್‌ನಲ್ಲಿ ನಾಲ್ಕು ಇಡ್ಲಿಗಳ ಪಾರ್ಸೆಲ್ ತಂದರು. ಮುರುಗೇಶನ್ ಪಾರ್ಸೆಲ್ ತೆರೆದಾಗ ಇಡ್ಲಿಯಲ್ಲಿ ಕಪ್ಪೆ ಶವ ಪತ್ತೆಯಾಗಿದೆ.

ಕೂಡಲೇ ಸಂಬಂಧಿಕರು ಕ್ಯಾಂಟೀನ್ ಮಾಲೀಕರ ಗಮನಕ್ಕೆ ತಂದಿದ್ದಾರೆ, ಆ ವೇಳೆ ಕ್ಯಾಂಟೀನ್ ನಲ್ಲಿ ಊಟ ಮಾಡುತ್ತಿದ್ದ ಹಲವರು ಕ್ಯಾಂಟೀನ್ ಮಾಲೀಕನ ಮೇಲೆ ವಾಗ್ವಾದ ನಡೆಸಿದರು. ತಕ್ಷಣ ಕ್ಯಾಂಟೀನ್ ಮುಚ್ಚಿ ಮಾಲೀಕ ಸ್ಥಳದಿಂದ ಪರಾರಿಯಾಗಿದ್ದಾನೆ. ದೂರಿನ ಮೇರೆಗೆ ಆರೋಗ್ಯಾಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.

Stay updated with us for all News in Kannada at Facebook | Twitter
Scroll Down To More News Today