ದೆಹಲಿ ಅಸೆಂಬ್ಲಿ ಆವರಣದಲ್ಲಿ ಬ್ರಿಟಿಷರ ಕಾಲದ ಸುರಂಗ ಪತ್ತೆ

ದೆಹಲಿ ವಿಧಾನಸಭೆ ಆವರಣದಲ್ಲಿ ಬ್ರಿಟಿಷರ ಕಾಲದ ಸುರಂಗವೊಂದು ಪತ್ತೆಯಾಗಿದೆ. ಜತೆಗೆ ಅಪರಾಧಿಗಳನ್ನು ಗಲ್ಲಿಗೇರಿಸಿಸುವ ಸ್ಥಳವೂ ಪತ್ತೆಯಾಗಿದೆ.

ದೆಹಲಿ ವಿಧಾನಸಭೆ ಆವರಣದಲ್ಲಿ ಬ್ರಿಟಿಷರ ಕಾಲದ ಸುರಂಗವೊಂದು ಪತ್ತೆಯಾಗಿದೆ. ಜತೆಗೆ ಅಪರಾಧಿಗಳನ್ನು ಗಲ್ಲಿಗೇರಿಸಿಸುವ ಸ್ಥಳವೂ ಪತ್ತೆಯಾಗಿದೆ. ಕೋಲ್ಕತ್ತಾದಿಂದ ದೆಹಲಿಗೆ ರಾಜಧಾನಿ ಸ್ಥಳಾಂತರದ ಸಮಯದಲ್ಲಿ 1912 ರಲ್ಲಿ ಈ ಕಟ್ಟಡವನ್ನು ನಿರ್ಮಿಸಲಾಯಿತು. 1913 ಮತ್ತು 1926 ರ ನಡುವೆ ಬಳಕೆಯಲ್ಲಿದೆ.

1926ರ ನಂತರ ಅದು ನಿಷ್ಪ್ರಯೋಜಕವಾಗಿದೆ ಎಂದು ದೆಹಲಿ ವಿಧಾನಸಭೆ ಸ್ಪೀಕರ್ ರಾಮ್ ನಿವಾಸ್ ಗೋಯೆಲ್ ಹೇಳಿದ್ದಾರೆ. ಆ ಸಮಯದಲ್ಲಿ, ಬ್ರಿಟಿಷ್ ಆಡಳಿತಗಾರರು ಕಟ್ಟಡವನ್ನು ನ್ಯಾಯಾಲಯವಾಗಿ ಪರಿವರ್ತಿಸಿದರು. ‘ಬಂಡುಕೋರರನ್ನು ಕೆಂಪು ಕೋಟೆಯಿಂದ ಸುರಂಗದ ಮೂಲಕ ಇಲ್ಲಿಗೆ ಸ್ಥಳಾಂತರಿಸಲಾಯಿತು’ ಎಂದು ಗೋಯೆಲ್ ಹೇಳಿದರು. ಕೈದಿಗಳನ್ನು ಸಭಾಂಗಣದಲ್ಲಿ ಇರಿಸಲಾಯಿತು ಮತ್ತು ಅಪರಾಧಿಗಳನ್ನು ಗಲ್ಲಿಗೇರಿಸಲಾಯಿತು.

ಅಲ್ಲಿ ಕೆಲಸ ಮಾಡುತ್ತಿದ್ದ ಕೆಲಸಗಾರ ಹೇಳುವಂತೆ ಹೊಸದಾಗಿ ಗೋಚರಿಸುವ ಗೋಡೆಯೊಳಗೆ ಟೊಳ್ಳಾದ ಶಬ್ದ ಕೇಳಿಸಿದ್ದರಿಂದ ಅದನ್ನು ಪರೀಕ್ಷಿಸಿದಾಗ ಈ ಸ್ಥಳ ಪತ್ತೆಯಾಗಿದೆ ಹಾಗೂ ಈ ಬಗ್ಗೆ ಪುರಾತತ್ವ ಇಲಾಖೆ ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ.. ಕಟ್ಟಡ ದುರಸ್ತಿಗೊಳಿಸಿ ಪ್ರವಾಸಿಗರಿಗೆ ಅನುಕೂಲ ಮಾಡಿಕೊಡಲಾಗುವುದು ಎಂದು ತಿಳಿದು ಬಂದಿದೆ.

Stay updated with us for all News in Kannada at Facebook | Twitter
Scroll Down To More News Today