ಯುಪಿಯಲ್ಲಿ ಆರು ವರ್ಷದ ಬಾಲಕಿಯ ಮೇಲೆ ಗ್ಯಾಂಗ್ರೇಪ್ ಮಾಡಿ ಆಮೇಲೆ ಏನ್ ಮಾಡಿದ್ರೂ ಗೊತ್ತಾ ?

ಕಾನ್ಪುರ ಜಿಲ್ಲೆಯ ಘಟಂಪುರದಲ್ಲಿ ಆರು ವರ್ಷದ ಬಾಲಕಿಯನ್ನು ಸಾಮೂಹಿಕ ಅತ್ಯಾಚಾರ ಮಾಡಿನಂತರ ಕಾಮುಕ ಮೃಗಗಳು ಕೊಲೆ ಮಾಡಿದ್ದಾರೆ.

ಯುಪಿಯಲ್ಲಿ ಆರು ವರ್ಷದ ಬಾಲಕಿಯ ಮೇಲೆ ಗ್ಯಾಂಗ್ರೇಪ್

( Kannada News Today ) : ನವದೆಹಲಿ : ಕಾನ್ಪುರ ಜಿಲ್ಲೆಯ ಘಟಂಪುರದಲ್ಲಿ ಆರು ವರ್ಷದ ಬಾಲಕಿಯನ್ನು ಸಾಮೂಹಿಕ ಅತ್ಯಾಚಾರ ಮಾಡಿನಂತರ ಕಾಮುಕ ಮೃಗಗಳು ಕೊಲೆ ಮಾಡಿದ್ದಾರೆ.

ಬಾಲಕಿಯ ಕೊಲೆಯ ನಂತರ ವಾಮಾಚಾರಕ್ಕಾಗಿ ಶ್ವಾಸಕೋಶವನ್ನು ಮಗುವಿನ ದೇಹದಿಂದ ಕಿತ್ತು ಕೊಂಡೊಯ್ದಿದ್ದಾರೆ.

ಘಟನೆಯಲ್ಲಿ ಆರೋಪಿ ಅಂಕಲ್ ಕುರಿಲ್ (20) ಮತ್ತು ಬೀರನ್ (31) ರನ್ನು ಪೊಲೀಸರು ಬಂಧಿಸಿದ್ದಾರೆ.

ಮುಖ್ಯ ಆರೋಪಿ ಪರಶುರಾಮ್ ಕುರಿಲ್ ಮತ್ತು ಅವರ ಪತ್ನಿಯನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ.

ಮಗುವಿನ ಶ್ವಾಸಕೋಶವನ್ನು ತೆಗೆದುಕೊಂಡು ಬರಲು ಆರೋಪಿ ಪರಶುರಾಮ್ ಹಣ ಕೊಟ್ಟಿದ್ದನು. ಪರಶುರಾಮ್‌ಗೆ ಮಕ್ಕಳಿಲ್ಲ. ಯಾವುದಾದರೂ ಮಗುವನ್ನು ಕೊಂದು ಆ ಮಗುವಿನ ಶ್ವಾಸಕೋಶ ತಿಂದರೆ ಮಗು ಆಗುತ್ತೆ ಅಂತ ಯಾರೋ ಹೇಳಿದ್ರಂತೆ…. ( ತನಿಖೆಯಿಂದ ನಿಜಾಂಶ ತಿಳಿಯಬೇಕಾಗಿದೆ )

ಈ ಸುದ್ದಿ ಓದಿ : 50 ಮಕ್ಕಳನ್ನು ಲೈಂಗಿಕ ಕೃತ್ಯಕ್ಕೆ ಬಳಸಿಕೊಂಡ ಎಂಜಿನಿಯರ್ ಬಂಧನ

ಪರಶುರಾಮ್ ತನ್ನ ಸೋದರಳಿಯ ಅಂಕಲ್ ಕುರಿಲ್ ಮತ್ತು ಅವನ ಸ್ನೇಹಿತ ಬೀರನ್ ಗೆ ಬಾಲಕಿಯ ಶ್ವಾಸಕೋಶವನ್ನು ವಾಮಾಚಾರಕ್ಕಾಗಿ ತರಲು ಮನವೊಲಿಸಿದ್ದನು.

ದೀಪಾವಳಿಯ ರಾತ್ರಿ ಅಂಕಲ್ ಮತ್ತು ಬೀರನ್ ಕುಡಿದು ಬಾಲಕಿಯನ್ನು ಹೊತ್ತೊಯ್ದು ಅತ್ಯಾಚಾರ ಮಾಡಿ, ದೇಹ ಸೀಳಿ ಅಂಗಾಂಗ ಬೇರ್ಪಡಿಸಿದ್ದರು. ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.

Web Title : Gangrape on a six-year-old girl in UP

Scroll Down To More News Today