ಕಾಲೇಜಿಗೆ ಅಂತ ಹೋರಟ ಯುವತಿಯರು ಶವವಾಗಿ ಪತ್ತೆ, ಆಗಿದ್ದೇನು ಗೊತ್ತಾ ?

ಸ್ನೇಹಿತೆಯರು ಕೇರಳದ ವೈಕೋಮ್ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಕಾಲೇಜಿಗೆ ಅಂತ ಹೋರಟ ಯುವತಿಯರು ಶವವಾಗಿ ಪತ್ತೆ, ಆಗಿದ್ದೇನು ಗೊತ್ತಾ ?

( Kannada News Today ) : ಆ ಯುವತಿಯರಿಬ್ಬರು ಜಿಗರಿ ದೋಸ್ತ್, ಎಷ್ಟರ ಮಟ್ಟಿಗೆ ಅಂದ್ರೆ ಮನೆಯಿಂದ ಒಂದು ಹೆಜ್ಜೆ ಆಚೆ ಇಡಬೇಕು ಅಂದ್ರೂ ಒಬ್ಬರಿಗೊಬ್ಬರು ಜೊತೆ ಇರಬೇಕು.

ಅಂತಹ ಸ್ನೇಹಿತೆಯರು ಕೇರಳದ ವೈಕೋಮ್ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಯುವತಿಯರಿಬ್ಬರು ಪದವಿ ಪ್ರಮಾಣಪತ್ರ ತರಲೆಂದು ಮನೆಯಿಂದ ಕಾಲೇಜಿನ ಕಡೆ ಹೊರಟವರು, ಕೊನೆಗೆ ಕಂಡದ್ದು ಶವವಾಗಿ.

ಕೊಲ್ಲಂನ ಅಂಚಲ್ ಮೂಲದ ಅಮೃತ ಮತ್ತು ಕಡಮಕುಲಂ ಮೂಲದ ಆರ್ಯ ಎಂಬುವವರೇ ಆತ್ಮಹತ್ಯೆ ಮಾಡಿಕೊಂಡ ಸ್ನೇಹಿತೆಯರು, ನವೆಂಬರ್ 13 ರಂದು ಮನೆ ತೊರೆದ ಅವರು ಶನಿವಾರ ರಾತ್ರಿ ಕೊಲ್ಲಂನಿಂದ ವೈಕೋಮ್ ತಲುಪಿ ಮುರಿಂದಪುಳ ಸೇತುವೆಯಿಂದ ನದಿಗೆ ಹಾರಿದ್ದಾರೆ.

ಇಬ್ಬರು ನದಿಗೆ ಹಾರಿದ್ದನ್ನು ನೋಡಿದ ನೆರೆಹೊರೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಶನಿವಾರ ರಾತ್ರಿ ಮತ್ತು ಭಾನುವಾರ ಮಧ್ಯಾಹ್ನ ಹುಡುಕಿದರೂ ಯಾವುದೇ ಶವ ಪತ್ತೆಯಾಗಲಿಲ.

ನಂತರ ಸೋಮವಾರ ಬೆಳಿಗ್ಗೆ ಒಂದು ಶವ ಪತ್ತೆಯಾಗಿದೆ. ಕೆಲವೇ ಗಂಟೆಗಳಲ್ಲಿ ಪೆರುಂಬಲಂನಲ್ಲಿ ಎರಡನೇ ಶವ ಪತ್ತೆಯಾಗಿದೆ.

ಸಾವಿನ ಕಾರಣ ಏನಿರಬಹುದು ?

ಆ ಯುವತಿಯರಿಬ್ಬರು ಅಂಚಲ್‌ನ ಖಾಸಗಿ ಶಿಕ್ಷಣ ಸಂಸ್ಥೆಯ ಅಂತಿಮ ವರ್ಷದ ಪದವೀಧರರಾಗಿದ್ದರು. ಇಬ್ಬರೂ ಒಬ್ಬರನ್ನೊಬ್ಬರು ಬಿಟ್ಟಿರಲಾರದಷ್ಟು ನಿಕಟ ಸ್ನೇಹದಲ್ಲಿದ್ದರು ಮತ್ತು ಓದಿನಲ್ಲಿ, ಆಟದಲ್ಲಿ, ಪಾಠದಲ್ಲಿ ಒಟ್ಟಿಗೆ ಇದ್ದರು.

ವಿದೇಶದಲ್ಲಿ ಕೆಲಸ ಮಾಡುತ್ತಿರುವ ಅಮೃತಾ ತಂದೆ ಇತ್ತೀಚೆಗೆ ಮನೆಗೆ ಬಂದಿದ್ದು ಅಮೃತಳ ಮದುವೆ ಮಾಡಲು ಯೋಜಿಸಿದ್ದರು.

ಮದುವೆಯ ನಂತರ ತಮ್ಮ ಗೆಳತಿಯಿಂದ ತಾನು ಬೇರ್ಪಡಬೇಕಾಗಬಹುದು ಎಂಬ ಆತಂಕದಿಂದ ಬಾಲಕಿಯರು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ತೀರ್ಮಾನಿಸಿದ್ದಾರೆ.

Web Title : girls committed suicide by jumping into the Vaikom river