ಮೇಕೆ ಹಾಲು (Goat milk): ಪ್ರತಿ ಲೀಟರ್ ಮೇಕೆ ಹಾಲಿಗೆ 400 ರೂ.!

Goat milk: ಇತ್ತೀಚೆಗೆ ಮಧ್ಯಪ್ರದೇಶ ಚತುರ್ ಪುರ್ ಜಿಲ್ಲೆಯಲ್ಲಿ ಮೇಕೆ ಹಾಲಿಗೆ ಬೇಡಿಕೆ ಗಗನಕ್ಕೇರಿದೆ. ಸಾಮಾನ್ಯವಾಗಿ ರೂ. 30 ರಿಂದ 40 ರೂ.ವರೆಗೆ ಲಭ್ಯವಿರುವ ಒಂದು ಲೀಟರ್ ಹಾಲು ಈಗ 300 ರಿಂದ 400 ರೂ.ಗೆ ಏರಿದೆ.

Goat milk: ಇತ್ತೀಚೆಗೆ ಮಧ್ಯಪ್ರದೇಶ ಚತುರ್ ಪುರ್ ಜಿಲ್ಲೆಯಲ್ಲಿ ಮೇಕೆ ಹಾಲಿಗೆ ಬೇಡಿಕೆ ಗಗನಕ್ಕೇರಿದೆ. ಸಾಮಾನ್ಯವಾಗಿ ರೂ. 30 ರಿಂದ 40 ರೂ.ವರೆಗೆ ಲಭ್ಯವಿರುವ ಒಂದು ಲೀಟರ್ ಹಾಲು ಈಗ 300 ರಿಂದ 400 ರೂ.ಗೆ ಏರಿದೆ.

ಈ ಮಟ್ಟದಲ್ಲಿ ಬೆಲೆ ಏರಿಕೆಗೆ ಕಾರಣವೇನು ?

ರಾಜ್ಯದಲ್ಲಿ ಡೆಂಗ್ಯೂ ಪ್ರಕರಣಗಳು ಗಣನೀಯವಾಗಿ ಹೆಚ್ಚುತ್ತಿವೆ. ಚತುರ್ ಪುರ್ ಸೇರಿದಂತೆ ಸಮೀಪದ ಜಿಲ್ಲೆಗಳಲ್ಲಿ ಈ ರೋಗ ಹೆಚ್ಚು ಹರಡಿದೆ. ಮೇಕೆ ಹಾಲು ಕುಡಿದರೆ ಡೆಂಗ್ಯೂ ಗುಣವಾಗುತ್ತದೆ ಎಂದು ಸ್ಥಳೀಯರು ನಂಬಿದ್ದಾರೆ. ಈ ಹಿನ್ನೆಲೆಯಲ್ಲಿ ಹಾಲಿಗೆ ಬೇಡಿಕೆ ಹೆಚ್ಚಿದೆ.

ಸ್ಥಳೀಯ ವೈದ್ಯರು ಪರಿಸ್ಥಿತಿಗೆ ಸ್ಪಂದಿಸಿದರು. ಡೆಂಗ್ಯೂ ರೋಗಿಗಳಿಗೆ ಮೇಕೆ ಹಾಲು ಕುಡಿಯುವುದು ಒಳ್ಳೆಯದು ಆದರೆ ಇದು ಪರಿಹಾರವಲ್ಲ, ಎಂದಿದ್ದಾರೆ