22 YouTube ಚಾನೆಲ್ಗಳು ನಿಷೇಧ
ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯವು 22 Youtube ಚಾನೆಲ್ ಗಳನ್ನು ಸುಳ್ಳು ಸುದ್ದಿಗಳನ್ನು ಹಬ್ಬಿಸಿದ್ದಕ್ಕಾಗಿ ನಿರ್ಬಂಧಿಸಿದೆ. ಇವರಲ್ಲಿ 18 ಮಂದಿ ಭಾರತ ಹಾಗೂ 4 ಮಂದಿ ಪಾಕಿಸ್ತಾನದವರು.
ನವದೆಹಲಿ : ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯವು 22 Youtube ಚಾನೆಲ್ ಗಳನ್ನು ಸುಳ್ಳು ಸುದ್ದಿಗಳನ್ನು ಹಬ್ಬಿಸಿದ್ದಕ್ಕಾಗಿ ನಿರ್ಬಂಧಿಸಿದೆ. ಇವರಲ್ಲಿ 18 ಮಂದಿ ಭಾರತ ಹಾಗೂ 4 ಮಂದಿ ಪಾಕಿಸ್ತಾನದವರು.
ಇವು ರಾಷ್ಟ್ರೀಯ ಭದ್ರತೆ, ವಿದೇಶಿ ಸಂಬಂಧ ಮತ್ತು ಶಾಂತಿಗೆ ಭಂಗ ತರುವಂತಹ ಸುಳ್ಳು ಮಾಹಿತಿಗಳನ್ನು ಪ್ರಸಾರ ಮಾಡುತ್ತಿವೆ ಎಂದು ಕೇಂದ್ರ ಹೇಳಿದೆ.
ಇನ್ನು Youtube ಚಾನೆಲ್ಗಳ ಜೊತೆಗೆ ಮೂರು ಟ್ವಿಟರ್ ಖಾತೆಗಳು, ಫೇಸ್ಬುಕ್ ಖಾತೆ ಮತ್ತು ಸುದ್ದಿ ವೆಬ್ಸೈಟ್ ಅನ್ನು ಸಹ ನಿರ್ಬಂಧಿಸಿದೆ. ಹೊಸ ಐಟಿ ನಿಯಮಗಳು 2021 ಜಾರಿಗೆ ಬಂದ ನಂತರ ಭಾರತೀಯ Youtube ಚಾನೆಲ್ಗಳನ್ನು ನಿರ್ಬಂಧಿಸಿರುವುದು ಇದೇ ಮೊದಲು.
Follow Us on : Google News | Facebook | Twitter | YouTube