ಸರ್ಕಾರ ಮತ್ತು ರೈತರ ನಡುವೆ ಇಂದು ಒಂಬತ್ತನೇ ಸುತ್ತಿನ ಮಾತುಕತೆ

ಸರ್ಕಾರ ಮತ್ತು ರೈತರ ನಡುವೆ ಒಂಬತ್ತನೇ ಸುತ್ತಿನ ಮಾತುಕತೆ ಇಂದು (ಶುಕ್ರವಾರ) ನಡೆಯಲಿದೆ.

ಸರ್ಕಾರ ಮತ್ತು ರೈತರ ನಡುವೆ ಒಂಬತ್ತನೇ ಸುತ್ತಿನ ಮಾತುಕತೆ
ಇಂದು (ಶುಕ್ರವಾರ) ನಡೆಯಲಿದೆ.

ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಚರ್ಚೆಗಳು ಸಕಾರಾತ್ಮಕವಾಗಲಿದೆ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ. “ಬಿಕ್ಕಟ್ಟನ್ನು ಪರಿಹರಿಸಲು ಸುಪ್ರೀಂ ಕೋರ್ಟ್ ನಾಲ್ಕು ಸದಸ್ಯರ ಸಮಿತಿಯನ್ನು ನೇಮಿಸಿದ ಹಿನ್ನೆಲೆಯಲ್ಲಿ, ಮುಂದಿನ ಸುತ್ತಿನ ಮಾತುಕತೆಯ ಭವಿಷ್ಯದ ಬಗ್ಗೆ ಗೊಂದಲಗಳ ಮಧ್ಯೆ, ರೈತ ಮುಖಂಡರೊಂದಿಗೆ ಮುಕ್ತ ಮನಸ್ಸಿನಿಂದ ಮಾತುಕತೆ ನಡೆಸಲು ಸರ್ಕಾರ ಸಿದ್ಧವಾಗಿದೆ” ಎಂದು ತೋಮರ್ ಹೇಳಿದರು.

ಗುರುವಾರ, ಪ್ರತಿಭಟನಾ ನಿರತ ರೈತ ಮುಖಂಡರು ಸರ್ಕಾರದೊಂದಿಗೆ ಒಂಬತ್ತನೇ ಸುತ್ತಿನ ಮಾತುಕತೆಗೆ ಹಾಜರಾಗುವುದಾಗಿ ಹೇಳಿದರು, ಇದು ಕೇಂದ್ರದೊಂದಿಗಿನ ಕೊನೆಯ ಸಭೆಯಾಗಬಹುದು ಎಂಬ ಸೂಚನೆ ಇದೆ.

ಕೃಷಿ ಕಾನೂನುಗಳ ಕುರಿತು ಸುಪ್ರೀಂ ಕೋರ್ಟ್ ನೇಮಕ ಮಾಡಿದ ಸಮಿತಿಯು ಜನವರಿ 19 ರಂದು ತನ್ನ ಮೊದಲ ಸಭೆಯನ್ನು ನಡೆಸುವ ಸಾಧ್ಯತೆ ಇರುವುದರಿಂದ, ಶುಕ್ರವಾರ ಸರ್ಕಾರ ಮತ್ತು
ರೈತರ ನಡುವಿನ ಸಭೆ ಕೊನೆಯದಾಗಿರಬಹುದು.