ತಾತನಿಂದಲೇ ಮೊಮ್ಮಗಳ ಮೇಲೆ ಅತ್ಯಾಚಾರ

Grand Father Rape on Granddaughter in Andrapradesh

ತಾತನಿಂದಲೇ ಮೊಮ್ಮಗಳ ಮೇಲೆ ಅತ್ಯಾಚಾರ – Grand Father Rape on Granddaughter in Andrapradesh

ತಾತನಿಂದಲೇ ಮೊಮ್ಮಗಳ ಮೇಲೆ ಅತ್ಯಾಚಾರ

ಕನ್ನಡ ನ್ಯೂಸ್ ಟುಡೇ : ಅದೇನೇ ಕಾನೂನು ಕಟ್ಟಲೆಗಳು ಹುಟ್ಟಿಕೊಂಡರೂ ಕಾಮಾಂಧರ ನೀಚ ಕೃತ್ಯಗಳು ನಿಲ್ಲುತ್ತಲೇ ಇಲ್ಲ. ಮೊದಲೆಲ್ಲಾ  ಮಕ್ಕಳು ಹೊರಗಡೆ ಹೋದರೆ ಭಯ ಪಡುತ್ತಿದ್ದ ಜನ, ಕ್ರಮೇಣ ಅಕ್ಕ ಪಕ್ಕದ ಮನೆಗೂ ಹೋಗದಂತೆ ತಡೆಯಬೇಕಾಗಿ ಬಂತು. ಇದೀಗ ಆಂದ್ರಪ್ರದೇಶದಲ್ಲಿ ನಡೆದ ಘೋರ ಘಟನೆ ಮತ್ತೊಮ್ಮೆ ಅಸಹ್ಯ ಹುಟ್ಟಿಸಿದೆ.

ಹತ್ತನೇ ತರಗತಿ ಓದುತ್ತಿದ್ದ ಅಪ್ರಾಪ್ತ ಬಾಲಕಿಯ ಮೇಲೆ ಸ್ವಂತ ತಾತನ ತಮ್ಮನೇ ಅತ್ಯಾಚಾರ ವೆಸಗಿದ್ದಾನೆ. ಜಗಿತ್ಯಾಲ ಜಿಲ್ಲೆಯ ಪುರಾನಿ ಪೇಟೆಯಲ್ಲಿ ಈ ಒಂದು ಘಟನೆ ನಡೆದಿದ್ದು, ಆರೋಪಿ ಕಾಮುಕ ತಾತ ಸಧ್ಯ ಪರಾರಿಯಾಗಿದ್ದಾನೆ.

ಸ್ವಂತ ತಾತನ ತಮ್ಮನೇ ಆದ ಆ ಮುದಿಯ ಬಾಲಕಿಯ ಮೇಲೆ ನಿರಂತರ ಮೂರು ತಿಂಗಳು ಅತ್ಯಾಚಾರ ಮಾಡಿದ್ದಾನೆ, ಈ ವಿಷಯವನ್ನು ಯಾರಿಗಾದರೂ ಹೇಳಿದರೆ, ನಿನ್ನನ್ನು ಕೊಂದೇ ಬಿಡುವುದಾಗಿ ಎದರಿಸಿದ್ದಾನೆ.

ವಿಷಯ ಬೆಳಕಿಗೆ ಬಂದದ್ದು ಹೇಗೆ ?

ಅತ್ಯಾಚಾರಕ್ಕೆ ಒಳಗಾದ ಸಂತ್ರಸ್ತೆ ಅಲ್ಲಿನ ಕಸ್ತೂರಬಾ ವಿದ್ಯಾಲಯದಲ್ಲಿ ಹತ್ತನೇ ತರಗತಿ ಓದುತ್ತಿದ್ದಳು, ಶಾಲೆಯಲ್ಲಿ ತೀವ್ರವಾಗಿ ಅಸ್ವಸ್ಥಗೊಂಡು ಬಿದ್ದ, ಆಕೆಯನ್ನು ಶಾಲಾ ಸಿಬ್ಬಂದಿ ಚಿಕಿತ್ಸೆಗೆ ಆಸ್ಪತ್ರೆಗೆ ಕರೆದೊಯ್ದಿದ್ದಾರೆ, ಪರಿಶೀಲಿಸಿದ ವೈದ್ಯರು ನೀಡಿದ ವರದಿ ನೋಡಿ ಶಾಲಾ ಸಿಬ್ಬಂದಿ ಶಾಕ್ ಆಗಿದ್ದರು. ಕಾರಣ ಆಕೆ ಗರ್ಭವತಿಯಾಗಿದ್ದಳು. ಕೂಡಲೇ ವಿಷಯ ಪೋಷಕರಿಗೆ ತಿಳಿಸಿದ್ದರಾದರೂ ವಿಷಯ ತಿಳಿಯುತ್ತಿದ್ದಂತೆ ಕಾಮುಕ ತಾತ ಅಲ್ಲಿಂದ ಪರಾರಿಯಾಗಿದ್ದಾನೆ.

ಪ್ರಕರಣ ದಾಖಲಿಸಿರುವ ಪೊಲೀಸರು, ಮುದಿಯ ಕಾಮದಲ್ಲಿ ಇನ್ನೊಂದು ತೋಟಕ್ಕೆ ನುಗ್ಗುವ ಮೊದಲು ಮೂಗುದಾರ ಏರಿಸಲು ಹುಡುಕಾಟ ನಡೆಸಿದ್ದಾರೆ. ನೀಚ ತಾತ ಸಾಯೋ ವಯಸ್ಸಿನಲ್ಲಿ, ಬದುಕಿ ಬಾಳ ಬೇಕಿದ್ದ ಮೊಮ್ಮಗಳ ಜೀವನ ಹಾಳು ಮಾಡಿದ್ದಾನೆ. ///