ಶಾಲೆ ಆರಂಭಕ್ಕೆ ಕೇಂದ್ರದ ಹೊಸ ಮಾರ್ಗಸೂಚಿ

ಶಾಲಾ ಹಾಗೂ ಕಾಲೇಜುಗಳು ಅಕ್ಟೋಬರ್ 15 ರಿಂದ ಪುನರಾರಂಭ

ಐದನೇ ಹಂತದ ಲಾಕ್ ಡೌನ್ ಗೆ ಕೇಂದ್ರ ಗೃಹ ಸಚಿವಾಲಯ ಮಾರ್ಗ ಸೂಚಿಯನ್ನು ಬಿಡುಗಡೆಗೊಳಿಸಿದೆ. ಸಿನೆಮಾ ಹಾಲ್ ಗಳು, ಮಲ್ಟಿಪ್ಲೆಕ್ಸ್ ಗಳು, ಎಕ್ಸಿಬಿಶನ್ ಹಾಲ್ ಗಳು ಹಾಗೂ ಮನರಂಜನಾ ಉದ್ಯಾನವನಗಳನ್ನು ಮತ್ತೆ ತೆರೆಯಲು ಅವಕಾಶ ನೀಡಲಾಗುವುದು.
ಆದರೆ ಸಂಖ್ಯೆಗಳ ಮೇಲೆ ನಿರ್ಬಂಧ ಇದೆ. ಸಿನೆಮಾ ಹಾಲ್ ಗಳು, ಮಲ್ಟಿಪ್ಲೆಕ್ಸ್ ಗಳು, ಶೇ.50ರಷ್ಟು ಆಸನ ಸಾಮರ್ಥ್ಯ ದೊಂದಿಗೆ ಕಾರ್ಯಾಚರಿಸಬಹುದು. ಇದಕ್ಕೆ ಪ್ರತ್ಯೇಕ ಮಾರ್ಗಸೂಚಿಯನ್ನು ಬಿಡುಗಡೆ ಮಾಡಲಾಗುವುದು ಎಂದು ಕೇಂದ್ರ ತಿಳಿಸಿದೆ.

( Kannada News ) ಅನ್ಲಾಕ್ 5.0 : ಕೇಂದ್ರ ಶಿಕ್ಷಣ ಸಚಿವಾಲಯವು ಶನಿವಾರ (ಅಕ್ಟೋಬರ್ 3) ಶಾಲೆಗಳು ಮತ್ತು ಕಾಲೇಜುಗಳನ್ನು ಪುನಃ ತೆರೆಯುವ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿತು. ಕೇಂದ್ರವು ಬಿಡುಗಡೆ ಮಾಡಿದ ಇತ್ತೀಚಿನ ಮಾರ್ಗಸೂಚಿಗಳ ಪ್ರಕಾರ ಅಕ್ಟೋಬರ್ 15 ರ ನಂತರ ಶಾಲೆಗಳು, ಕಾಲೇಜುಗಳು ಮತ್ತು ಇತರ ಶಿಕ್ಷಣ ಸಂಸ್ಥೆಗಳು ತೆರೆಯಬಹುದು.

ದೇಶಾದ್ಯಂತ ಮಾರ್ಚ್ ನಲ್ಲಿ ಲಾಕ್ ಡೌನ್ ಘೋಷಣೆಯಾದಾಗ ಮುಚ್ಚಲ್ಪಟ್ಟಿರುವ ಶಾಲಾ ಹಾಗೂ ಕಾಲೇಜುಗಳನ್ನು ಅಕ್ಟೋಬರ್ 15 ರಿಂದ ಪುನರಾರಂಭಿಸಲು ಕೇಂದ್ರ ಸರಕಾರವು ಅವಕಾಶ ನೀಡಿದ್ದು, ಈ ಕುರಿತು ಅಂತಿಮ ನಿರ್ಧಾರ ಕೈಗೊಳ್ಳುವುದು ಆಯಾ ರಾಜ್ಯಗಳು ಹಾಗೂ ಒಳಗೊಂಡಿರುವ ಸಂಸ್ಥೆಗಳಿಗೆ ಬಿಟ್ಟ ವಿಚಾರವಾಗಿದೆ ಎಂದು ಹೇಳಿದೆ.

ಕೇಂದ್ರವು ಶನಿವಾರ ಹೊರಡಿಸಿದ ಮಾರ್ಗಸೂಚಿಗಳಲ್ಲಿ ವಿದ್ಯಾರ್ಥಿ‌ಗಳು ಶಾಲೆಗೆ ಬರಬಹುದು ಆದರೆ ಅವರಿಗೆ ಅವರ ಪೋಷಕರು ಅಥವಾ ಪಾಲಕರ ಲಿಖಿತ ಅನುಮತಿ ಬೇಕಾಗುತ್ತದೆ. ಕರೋನವೈರಸ್ COVID-19 ಸಾಂಕ್ರಾಮಿಕ ರೋಗದಿಂದಾಗಿ ವಿದ್ಯಾರ್ಥಿಗಳು ಶಾಲೆಗಳಿಗೆ ಬರದಂತೆ ನಿರ್ಧರಿಸಿದರೆ ಶಾಲೆಗಳು ಮತ್ತು ತರಬೇತಿ ಕೇಂದ್ರಗಳು ಆನ್‌ಲೈನ್ ಕಲಿಕೆಗೆ ಉತ್ತೇಜನ ನೀಡಬೇಕು ಎಂದು ಸಚಿವಾಲಯ ಹೇಳಿದೆ.

ಆದಾಗ್ಯೂ ಆನ್ ಲೈನ್ ಹಾಗೂ ದೂರ ಶಿಕ್ಷಣವು ಆದ್ಯತೆಯ ಬೋಧನಾ ವಿಧಾನವಾಗಿ ಮುಂದುವರಿಯುತ್ತದೆ ಹಾಗೂ ಪ್ರೋತ್ಸಾಹಿಸಲ್ಪಡುತ್ತದೆ ಎಂದು ಕೇಂದ್ರ ತಿಳಿಸಿದೆ. ಈ ಮೂಲಕ ಕೊರೋನವೈರಸ್ ಗೆ ಸಂಬಂಧಿಸಿದ ನಿರ್ಬಂಧವನ್ನು ತೆಗೆದುಹಾಕುವ ಕುರಿತು ಮುಂದಿನ ಹೆಜ್ಜೆಗಳನ್ನುಇಟ್ಟಿದೆ.

ಐದನೇ ಹಂತದ ಲಾಕ್ ಡೌನ್ ಗೆ ಕೇಂದ್ರ ಗೃಹ ಸಚಿವಾಲಯ ಮಾರ್ಗ ಸೂಚಿಯನ್ನು ಬಿಡುಗಡೆಗೊಳಿಸಿದೆ. ಸಿನೆಮಾ ಹಾಲ್ ಗಳು, ಮಲ್ಟಿಪ್ಲೆಕ್ಸ್ ಗಳು, ಎಕ್ಸಿಬಿಶನ್ ಹಾಲ್ ಗಳು ಹಾಗೂ ಮನರಂಜನಾ ಉದ್ಯಾನವನಗಳನ್ನು ಮತ್ತೆ ತೆರೆಯಲು ಅವಕಾಶ ನೀಡಲಾಗುವುದು.
ಆದರೆ ಸಂಖ್ಯೆಗಳ ಮೇಲೆ ನಿರ್ಬಂಧ ಇದೆ. ಸಿನೆಮಾ ಹಾಲ್ ಗಳು, ಮಲ್ಟಿಪ್ಲೆಕ್ಸ್ ಗಳು, ಶೇ.50ರಷ್ಟು ಆಸನ ಸಾಮರ್ಥ್ಯ ದೊಂದಿಗೆ ಕಾರ್ಯಾಚರಿಸಬಹುದು. ಇದಕ್ಕೆ ಪ್ರತ್ಯೇಕ ಮಾರ್ಗಸೂಚಿಯನ್ನು ಬಿಡುಗಡೆ ಮಾಡಲಾಗುವುದು ಎಂದು ಕೇಂದ್ರ ತಿಳಿಸಿದೆ.

Scroll Down To More News Today