ಗುಜರಾತ್ನಲ್ಲಿ ಮೊದಲ Corona XE ವೇರಿಯಂಟ್ ಪ್ರಕರಣ!
Corona XE : ಓಮಿಕ್ರಾನ್ಗಿಂತಲೂ ವೇಗವಾಗಿ ಹರಡುತ್ತಿರುವ Corona XE ರೂಪಾಂತರ ಗುಜರಾತ್ನಲ್ಲಿ ಬೆಳಕಿಗೆ ಬಂದಿದೆ. ಇತ್ತೀಚಿನ ರೂಪಾಂತರವು ಬರೋಡದ 60 ವರ್ಷದ ವ್ಯಕ್ತಿಯಲ್ಲಿ ಕಂಡುಬಂದಿದೆ. ಸದ್ಯ ಅವರು ಆರೋಗ್ಯವಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಗಾಂಧಿನಗರ: ಓಮಿಕ್ರಾನ್ಗಿಂತಲೂ ವೇಗವಾಗಿ ಹರಡುತ್ತಿರುವ Corona XE ರೂಪಾಂತರ ಗುಜರಾತ್ನಲ್ಲಿ ಬೆಳಕಿಗೆ ಬಂದಿದೆ. ಇತ್ತೀಚಿನ ರೂಪಾಂತರವು ಬರೋಡದ 60 ವರ್ಷದ ವ್ಯಕ್ತಿಯಲ್ಲಿ ಕಂಡುಬಂದಿದೆ. ಸದ್ಯ ಅವರು ಆರೋಗ್ಯವಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅವರಿಗೆ ಮಾರ್ಚ್ 13 ರಂದು ಕೊರೊನಾ ಪಾಸಿಟಿವ್ ಕಂಡುಬಂದಿತ್ತು ಮತ್ತು ಅವರು ಒಂದು ವಾರದೊಳಗೆ ಚೇತರಿಸಿಕೊಂಡಿದ್ದಾರೆ ಎಂದು ತಿಳಿಸಲಾಯಿತು. ಇದೀಗ ಹೋಮ್ ಐಸೋಲೇಶನ್ನಲ್ಲಿರುವುದಾಗಿ ತಿಳಿದುಬಂದಿದೆ.
One recombinant that health authorities are tracking closely is a BA.1-BA.2 hybrid called XE, which was first detected in the United Kingdom in January.https://t.co/9KnUCm5aFU
— Mint (@livemint) April 9, 2022
ಕರೋನಾ XE ಯ ಹೊಸ ರೂಪವನ್ನು ಯುನೈಟೆಡ್ ಕಿಂಗ್ಡಂನಲ್ಲಿ ಮೊದಲು ಕಂಡುಹಿಡಿಯಲಾಯಿತು. ಇದು ಓಮಿಕ್ರಾನ್ಗಿಂತ ವೇಗವಾಗಿ ಹರಡುತ್ತಿದೆ ಎಂದು WTO ಹೇಳುತ್ತದೆ. ದೇಶದ ಮೊದಲ XE ಪ್ರಕರಣ ಮುಂಬೈನಲ್ಲಿ ದಾಖಲಾಗಿದೆ. ಫೆಬ್ರವರಿಯಲ್ಲಿ ದಕ್ಷಿಣ ಆಫ್ರಿಕಾದ ಮಹಿಳೆಯಲ್ಲಿ ಈ ರೂಪಾಂತರವು ಕಂಡುಬಂದಿದೆ. ಆದರೆ, ಈ ಸುದ್ದಿಯನ್ನು ಕೇಂದ್ರ ಆರೋಗ್ಯ ಇಲಾಖೆ ನಿರಾಕರಿಸಿದೆ.
Gujarat Reports First Case Of Corona Xe Variant
Follow Us on : Google News | Facebook | Twitter | YouTube