ಚಲಿಸುವ ರೈಲಿನಿಂದ ಹೆಂಡತಿಯನ್ನು ತಳ್ಳಿದ ಗಂಡ

ಆ ದಂಪತಿಗೆ ಮದುವೆಯಾಗಿ ಎರಡು ತಿಂಗಳು ಕೂಡ ಆಗಿರಲಿಲ್ಲ. ಚಲಿಸುವ ರೈಲಿನಿಂದ ಹೆಂಡತಿಯನ್ನು ಕೆಳಕ್ಕೆ ತಳ್ಳಿ ಕೊಲೆ ಮಾಡಿರುವ ಗಂಡ ಸದ್ಯ ಪೊಲೀಸರ ಅಥಿತಿಯಾಗಿದ್ದಾನೆ. 

ಚಲಿಸುವ ರೈಲಿನಿಂದ ಹೆಂಡತಿಯನ್ನು ತಳ್ಳಿದ ಗಂಡ

(Kannada News) : ಮುಂಬೈ: ಆ ದಂಪತಿಗೆ ಮದುವೆಯಾಗಿ ಎರಡು ತಿಂಗಳು ಕೂಡ ಆಗಿರಲಿಲ್ಲ. ಅಷ್ಟರಲ್ಲಿ ಅದೇನಾಯಿತೋ ಏನೋ ಚಲಿಸುವ ರೈಲಿನಿಂದ ಹೆಂಡತಿಯನ್ನು ಕೆಳಕ್ಕೆ ತಳ್ಳಿ ಕೊಲೆ ಮಾಡಿರುವ ಗಂಡ ಸದ್ಯ ಪೊಲೀಸರ ಅಥಿತಿಯಾಗಿದ್ದಾನೆ.

ಮಹಾರಾಷ್ಟ್ರದ ಮುಂಬೈನಲ್ಲಿ ಸೋಮವಾರ ಈ ಘಟನೆ ನಡೆದಿದೆ. ಅದೇ ರೈಲಿನಲ್ಲಿದ್ದ ಮಹಿಳಾ ಪ್ರಯಾಣಿಕರೊಬ್ಬರು ರೈಲ್ವೆ ಪೊಲೀಸರಿಗೆ ಮಾಹಿತಿ ನೀಡುವ ಮೂಲಕ ಪಾಪಿ ಗಂಡನನ್ನು ಪೊಲೀಸರು ಬಂಧಿಸಿದ್ದಾರೆ. ನಗರದ ಚೆಂಬೂರು ಮತ್ತು ಗೋವಂಡಿ ರೈಲು ನಿಲ್ದಾಣಗಳ ನಡುವೆ ಈ ಅಪಘಾತ ಸಂಭವಿಸಿದೆ.

ಸೋಮವಾರ, ದಂಪತಿಗಳು ತಮ್ಮ ಏಳು ವರ್ಷದ ಮಗುವಿನೊಂದಿಗೆ ಚೆಂಬೂರಿನಿಂದ ಗೋವಂಡಿಗೆ ಸ್ಥಳೀಯ ರೈಲಿನಲ್ಲಿ ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ.

ಗಂಭೀರ ಗಾಯಗಳೊಂದಿಗೆ ಆಕೆಯನ್ನು ಹತ್ತಿರದ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ, ಆಕೆ ಈಗಾಗಲೇ ಮೃತಪಟ್ಟಿದ್ದಾಳೆ ಎಂದು ವೈದ್ಯರು ತಿಳಿಸಿದ್ದಾರೆ. ಆ ಸಮಯದಲ್ಲಿ ಆರೋಪಿ ಗಂಡ ಮದ್ಯವನ್ನು ಸೇವಿಸಿದ್ದನೆ ಎಂದು ತನಿಖೆ ನಡೆಸುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಆದರೆ, ಅದೇ ರೈಲಿನಲ್ಲಿ ಪ್ರಯಾಣಿಕರು ಆತ ಉದ್ದೇಶಪೂರ್ವಕವಾಗಿ ತನ್ನ ಹೆಂಡತಿಯನ್ನು ಹೊರಗೆ ತಳ್ಳಿದ್ದಾನೆ ಎಂದು ಹೇಳಿಕೆ ನೀಡಿದ್ದಾರೆ.

Web Title : Husband pushed his wife down from running train

Scroll Down To More News Today