ನಾನು ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಲು ಸಾಧ್ಯವಾಗಲಿಲ್ಲ : ಡಾ. ನೀರಜ್ ಪಾಟೀಲ್

I Can't Maintain Social Gap says Dr Neeraj Patil

ಲಂಡನ್ನಿನಲ್ಲಿ ನೆಲೆಸಿರುವ ಭಾರತೀಯ ಮೂಲದ ವೈದ್ಯ ರಾಜಕಾರಣಿ ಬಸವ ತತ್ವ ಅನುಯಾಯಿ ಡಾಕ್ಟರ್ ನೀರಜ್ ಪಾಟೀಲ್ ಅವರಿಗೆ ಕೊರೋನಾ ಸೋಂಕು ತಗುಲಿದೆ. ಈ ಕುರಿತು ಅವರು ಸ್ವತಃ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ ಮುನ್ನೆಚ್ಚರಿಕೆ ತೆಗೆದುಕೊಳ್ಳದೆ ಇರುವುದರಿಂದ ಕರೊನಾ ತಗುಲಿದೆ ಎಂದು ಹೇಳಿಕೊಂಡಿದ್ದಾರೆ.

ನಾನು ವೈದ್ಯಕೀಯ ಸೇವೆ ಸಲ್ಲಿಸುವ ಬರದಲ್ಲಿ ಸ್ವತ: ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಸಾದ್ಯವಾಗಲಿಲ್ಲ ಆಗಾಗ ಕೈಗಳನ್ನು ತೊಳೆದುಕೊಳ್ಳಲು ಆಗಲಿಲ್ಲ, ಒಮ್ಮೆಮ್ಮೆ ವೈಯಕ್ತಿಕ ರಕ್ಷಣೆಯ ಕಿಟ್ ಕೂಡಾ ಧರಿಸಲು ಆಗುತ್ತಿರಲಿಲ್ಲ ಎಂದು ಅವರು ಹೇಳಿದ್ದಾರೆ.

ನನ್ನ ದೇಹ ಅತ್ಯಂತ ಬಲಿಷ್ಠವಾಗಿದೆ ಅದರಿಂದ ಆದಷ್ಟು ಬೇಗ ಗುಣಮುಖವಾಗುತೇನೆ . ಸದ್ಯ ನನ್ನನ್ನು ನಾನೇ ಐಸೋಲೇಟ್ ಮಾಡಿಕೊಂಡಿದ್ದೇನೆ. ಪ್ರತಿದಿನ ಜಿಮ್‌ಗೆ ಹೋಗುತ್ತೇನೆ. ನನಗೆ ಸಿಗರೇಟ್ ಸೇವನೆ ಸೇರಿದಂತೆ ಯಾವುದೇ ದುಶ್ಚಟಗಳಿಲ್ಲ ನಿರಂತರ ವ್ಯಾಯಾಮ ಮತ್ತು ಆರೋಗ್ಯಕರ ಆಹಾರವನ್ನು ಸೇವಿಸಿ ಬೇಗನೆ ಗುಣಮುಖವಾಗುತೇನೆ ಎಂದು ನೀರಜ್ ಪಾಟೀಲ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

ಡಾ ನೀರಜ್ ಪಾಟೀಲ ಅವರು ಬ್ರೀಟನ್ನ ಲ್ಯಾಂಬೆತ್ ನಗರದ ಮೇಯರ ಆಗಿದ್ದರು ಹಾಗೂ ಬ್ರಿಟನ್ ಸಂಸತ್ ಭವನದ ಎದುರಿನ ಥೇಮ್ಸ ನದಿ ದಡದಲ್ಲಿ ಜಗಜ್ಯೋತಿ ಬಸವೇಶ್ವರರ ಪುತ್ಥಳಿ ಸ್ಥಾಪನೆ ಮಾಡಿದ್ದರು. ಅವರು ರಾಜಕಾರಣಿ ಆಗಿದ್ದರಿಂದ ಭಾರತದ ರಾಜಕಾರಣಿಗಳ ನಿಕಟ ಸಂಪರ್ಕದಲ್ಲಿದ್ದಾರೆ. ಕಳೆದ ಫೆ 29 ರಂದು ಬೆಂಗಳೂರಿಗೆ ಆಗಮಿಸಿದ್ದರು ಆಗ ಮುಖ್ಯಮಂತ್ರಿ ಕಚೇರಿ ಹಾಗೂ ವಿಧಾನಸೌಧದಲ್ಲಿ ಸಹ ಕಾಣಿಸಿಕೊಂಡಿದ್ದರು.

Scroll Down To More News Today