ಸೇನಾ ಹೆಲಿಕಾಪ್ಟರ್ ಪತನ: ಬಿಪಿನ್ ರಾವತ್ ಹೊರತುಪಡಿಸಿ, ಹೆಲಿಕಾಪ್ಟರ್‌ನಲ್ಲಿದ್ದ ಎಲ್ಲರೂ ಸಾವು

ತಮಿಳುನಾಡಿನ ಕುನ್ನೂರು ಬಳಿ ಬುಧವಾರ ಮಧ್ಯಾಹ್ನ ಭಾರತೀಯ ವಾಯುಪಡೆಯ ಎಂಐ-17ವಿ5 ಹೆಲಿಕಾಪ್ಟರ್ ಪತನಗೊಂಡಿದ್ದು, ಮೃತರ ಸಂಖ್ಯೆ 13ಕ್ಕೆ ಏರಿದೆ. 

ಸೇನಾ ಹೆಲಿಕಾಪ್ಟರ್ ಪತನ : ತಮಿಳುನಾಡಿನ ಕುನ್ನೂರು ಬಳಿ ಬುಧವಾರ ಮಧ್ಯಾಹ್ನ ಭಾರತೀಯ ವಾಯುಪಡೆಯ ಎಂಐ-17ವಿ5 ಹೆಲಿಕಾಪ್ಟರ್ ಪತನಗೊಂಡಿದ್ದು, ಮೃತರ ಸಂಖ್ಯೆ 13ಕ್ಕೆ ಏರಿದೆ. ಟ್ರಿಪಲ್ ಕಮಾಂಡರ್ ಬಿಪಿನ್ ರಾವತ್ ಅವರ ಪತ್ನಿ ಮಧುಲಿಕಾ ಅವರು ಗಂಭೀರವಾಗಿ ಗಾಯಗೊಂಡು ವೆಲ್ಲಿಂಗ್ಟನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ಇತ್ತೀಚೆಗೆ ಖಚಿತಪಡಿಸಿದ್ದಾರೆ.

ಅಪಘಾತದ ವೇಳೆ ಬಿಪಿನ್ ರಾವತ್ ಮತ್ತು ಅವರ ಪತ್ನಿ ಸೇರಿದಂತೆ ಒಟ್ಟು 14 ಜನರು ಹೆಲಿಕಾಪ್ಟರ್‌ನಲ್ಲಿದ್ದರು, ಬಿಪಿನ್ ರಾವತ್ ಹೊರತುಪಡಿಸಿ ಎಲ್ಲರೂ ಸಾವನ್ನಪ್ಪಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ತೀವ್ರವಾಗಿ ಗಾಯಗೊಂಡಿರುವ ಬಿಪಿನ್ ರಾವತ್ ಸದ್ಯ ವೆಲ್ಲಿಂಗ್ಟನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ, ಅವರ ಸ್ಥಿತಿ ಚಿಂತಾಜನಕವಾಗಿದೆ ಎಂದು ವರದಿಯಾಗಿದೆ.

Stay updated with us for all News in Kannada at Facebook | Twitter
Scroll Down To More News Today