Welcome To Kannada News Today

ಬೆಣ್ಣೆನಗರಿ ದಾವಣಗೆರೆಯಲ್ಲಿ ಕರೋನಾ ತಾಂಡವ, ರಾಜ್ಯದಲ್ಲಿ ಇಂದು 22 ಮಂದಿಗೆ ಕರೋನ

ದಾವಣಗೆರೆಯಲ್ಲಿ ಕರೋನಾ ಅಟ್ಟಹಾಸ ಮುಂದುವರೆದಿದ್ದು, ಸೋಂಕಿತರ ಸಂಖ್ಯೆ 44 ಕ್ಕೆ ಏರಿದೆ

🌐 Kannada News :

ಬೆಂಗಳೂರು: ರಾಜ್ಯದಲ್ಲಿ ಹೊಸದಾಗಿ 22 ಜನರಿಗೆ ಕೊರೊನಾ ವೈರಸ್ ವಕ್ಕರಿಸದ್ದು, ಕರ್ನಾಟಕದಲ್ಲಿ ಕೊರೊನಾ ಅಟ್ಟಹಾಸ ಮುಂದುವರೆದಿದೆ. ಕರ್ನಾಟಕದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 673ಕ್ಕೆ ಏರಿಕೆಯಾಗಿದೆ.

ದಾವಣಗೆರೆಯಲ್ಲಿ ಇಂದು ಒಂದೇ ದಿನಕ್ಕೆ 12 ಜನರಿಗೆ ಸೋಂಕು ತಗುಲಿದ್ದು, ಬೆಂಗಳೂರು 3, ಬಾಗಲಕೋಟೆ 2, ಬಳ್ಳಾರಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಹಾವೇರಿ, ಧಾರವಾಡ ಜಿಲ್ಲೆಯಲ್ಲಿ ತಲಾ ಒಬ್ಬರಿಗೆ ಸೋಂಕು ದೃಢಪಟ್ಟಿದೆ.

ಹಾಗೂ ಮಹಾಮಾರಿ ಕೊರೊನಾಗೆ ಇಂದು ಮತ್ತೆ ಇಬ್ಬರು ಬಲಿಯಾಗಿದ್ದಾರೆ, ದಾವಣಗೆರೆ, ವಿಜಯಪುರದಲ್ಲಿ ತಲಾ ಒಬ್ಬರು ಮೃತಪಟ್ಟಿದ್ದಾರೆ. ವಿಜಯಪುರ ಜಿಲ್ಲೆಯ 640ನೇ ಸೋಂಕಿತ ವ್ಯಕ್ತಿ ಹಾಗೂ ದಾವಣಗೆರೆ ಜಿಲ್ಲೆಯ 662ನೇ ಸೋಂಕಿತ ವ್ಯಕ್ತಿ ಸಾವಿಗೀಡಾಗಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಕೊರೊನಾ ಸೋಂಕಿಗೆ ಈವರೆಗೆ 29 ಜನರು ಬಲಿಯಾಗಿದ್ದಾರೆ.

ಇನ್ನೊಂದೆಡೆ, ದಾವಣಗೆರೆಯಲ್ಲಿ ಕರೋನಾ ಅಟ್ಟಹಾಸ ತೀವ್ರವಾಗಿದ್ದು ಸೋಂಕಿತರ ಸಂಖ್ಯೆ 44 ಕ್ಕೆ ಏರಿದೆ, ಗ್ರೀನ್ ಜೋನ್ ನಲ್ಲಿದ್ದ ಬೆಣ್ಣೆ ನಗರಿ ದಾವಣಗೆರೆಯಲ್ಲಿ ಒಂದೇ ದಿನಕ್ಕೆ 12 ಹೊಸ ಪ್ರಕರಣಗಳು ಪತ್ತೆಯಾಗಿದ್ದು ಬೆಚ್ಚಿಬೀಳುವಂತಾಗಿದೆ.

ಇನ್ನು ಧಾರವಾಡದಲ್ಲಿ ಒಬ್ಬ ವ್ಯಕ್ತಿ ಸೋಂಕಿಗೆ ಒಳಗಾಗಿದ್ದು, ಈ ವ್ಯಕ್ತಿಗೆ ಮುಂಬೈ ನಂಟಿರುವುದು ಗೊತ್ತಾಗಿದೆ. ಧಾರವಾಡದ ೨೬ ವರ್ಷದ ವ್ಯಕ್ತಿಗೆ ಸೋಂಕು ದೃಢಪಟ್ಟಿದೆ.

Web Title :

Get Latest Kannada News an up-to-date news coverage

ಕ್ಷಣ ಕ್ಷಣದ ಕನ್ನಡ ಸುದ್ದಿಗಳಿಗಾಗಿ FacebookTwitterYouTube ಅನುಸರಿಸಿ.