India Corona: ದೇಶದಲ್ಲಿ 15,981 ಹೊಸ ಪಾಸಿಟಿವ್ ಪ್ರಕರಣಗಳು

ದೇಶದಲ್ಲಿ (India) ಕೊರೊನಾ ವೈರಸ್ (Corona Virus) ಅಟ್ಟಹಾಸ ಮುಂದುವರಿದಿದೆ. ಕಳೆದ 24 ಗಂಟೆಗಳಲ್ಲಿ, 15,981 ಹೊಸ ಪಾಸಿಟಿವ್ ಪ್ರಕರಣಗಳು (Positive Cases) ದಾಖಲಾಗಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ (Union Health Ministry) ತಿಳಿಸಿದೆ.

ನವದೆಹಲಿ: ದೇಶದಲ್ಲಿ (India) ಕೊರೊನಾ ವೈರಸ್ (Corona Virus) ಅಟ್ಟಹಾಸ ಮುಂದುವರಿದಿದೆ. ಕಳೆದ 24 ಗಂಟೆಗಳಲ್ಲಿ, 15,981 ಹೊಸ ಪಾಸಿಟಿವ್ ಪ್ರಕರಣಗಳು (Positive Cases) ದಾಖಲಾಗಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ (Union Health Ministry) ತಿಳಿಸಿದೆ.

ನಿನ್ನೆ 17,861 ಜನರು ಕೊರೊನಾದಿಂದ ಚೇತರಿಸಿಕೊಂಡಿದ್ದಾರೆ ಮತ್ತು 166 ಜನರು ಪ್ರಾಣ ಕಳೆದುಕೊಂಡಿದ್ದಾರೆ. ದೇಶಾದ್ಯಂತ ಇದುವರೆಗೆ 3,40,53,573 ಸಕಾರಾತ್ಮಕ ಪ್ರಕರಣಗಳು ದಾಖಲಾಗಿದ್ದರೆ, ಪ್ರಸ್ತುತ 2,01,632 ಪ್ರಕರಣಗಳು ಸಕ್ರಿಯವಾಗಿವೆ.

ಈ ವರ್ಷ ಇಲ್ಲಿಯವರೆಗೆ ಕೊರೊನಾದಿಂದ ಚೇತರಿಸಿಕೊಂಡವರ ಸಂಖ್ಯೆ 3,33,99,961. ಕೋವಿಡ್ ಸಾವಿನ ಸಂಖ್ಯೆ 4,51,980 ಕ್ಕೆ ತಲುಪಿದೆ.

ಕೇರಳದಲ್ಲಿ ನಿನ್ನೆ ಒಂದೇ ದಿನ 8,867 ಹೊಸ ಪಾಸಿಟಿವ್ ಪ್ರಕರಣಗಳು ದಾಖಲಾಗಿದ್ದು, 67 ಮಂದಿ ಸಾವನ್ನಪ್ಪಿದ್ದಾರೆ. ಕಳೆದ 24 ಗಂಟೆಗಳಲ್ಲಿ 8,36,118 ಜನರಿಗೆ ಲಸಿಕೆ ಹಾಕಲಾಗಿದೆ. ಇಲ್ಲಿಯವರೆಗೆ 97,23,77,045 ಜನರಿಗೆ ಲಸಿಕೆ ಹಾಕಲಾಗಿದೆ.