ದೇಶದಲ್ಲಿ ಮತ್ತೆ ಹೆಚ್ಚಿದ ಕೊರೊನಾ ಪ್ರಕರಣಗಳು, ಕಳೆದ 24 ಗಂಟೆಗಳಲ್ಲಿ 8,439 ಸೋಂಕಿತರು

ದೇಶದಲ್ಲಿ ನಿನ್ನೆ ತೀವ್ರ ಇಳಿಕೆ ಕಂಡಿದ್ದ ಕೊರೊನಾ ಪ್ರಕರಣಗಳು ಇಂದು ಮತ್ತೆ ಏರಿಕೆಯಾಗಿದೆ. ಕೇಂದ್ರ ಕುಟುಂಬ ಮತ್ತು ಆರೋಗ್ಯ ಸಚಿವಾಲಯದ ಪ್ರಕಾರ, ಕಳೆದ 24 ಗಂಟೆಗಳಲ್ಲಿ 8,439 ಹೊಸ ಪ್ರಕರಣಗಳು ದಾಖಲಾಗಿವೆ.

ನವದೆಹಲಿ : ದೇಶದಲ್ಲಿ ನಿನ್ನೆ ತೀವ್ರ ಇಳಿಕೆ ಕಂಡಿದ್ದ ಕೊರೊನಾ ಪ್ರಕರಣಗಳು ಇಂದು ಮತ್ತೆ ಏರಿಕೆಯಾಗಿದೆ. ಕೇಂದ್ರ ಕುಟುಂಬ ಮತ್ತು ಆರೋಗ್ಯ ಸಚಿವಾಲಯದ ಪ್ರಕಾರ, ಕಳೆದ 24 ಗಂಟೆಗಳಲ್ಲಿ 8,439 ಹೊಸ ಪ್ರಕರಣಗಳು ದಾಖಲಾಗಿವೆ. ನಿನ್ನೆಗಿಂತ 23 ಶೇಕಡಾ ಹೆಚ್ಚು. 9,525 ಮಂದಿ ಹೊಸದಾಗಿ ಚೇತರಿಸಿಕೊಂಡಿದ್ದಾರೆ. ಸಾಂಕ್ರಾಮಿಕ ರೋಗವು 195 ಜನರನ್ನು ಬಲಿ ಪಡೆದಿದೆ.

ದೇಶದಲ್ಲಿ ಪ್ರಸ್ತುತ 93,733 ಸಕ್ರಿಯ ಪ್ರಕರಣಗಳಿವೆ. ಇತ್ತೀಚಿನ ಪ್ರಕರಣಗಳೊಂದಿಗೆ, ದೇಶದಲ್ಲಿ ಒಟ್ಟು ಪ್ರಕರಣಗಳ ಸಂಖ್ಯೆ 3,46,56,822 ಕ್ಕೆ ತಲುಪಿದೆ. ಇವರಲ್ಲಿ 3,40,89,137 ಸಂತ್ರಸ್ತರು ಚೇತರಿಸಿಕೊಂಡಿದ್ದಾರೆ. ಈ ಸಾಂಕ್ರಾಮಿಕ ರೋಗವು ಇಲ್ಲಿಯವರೆಗೆ 4,73,952 ಜೀವಗಳನ್ನು ಬಲಿ ತೆಗೆದುಕೊಂಡಿದೆ. ಲಸಿಕೆ ಅಭಿಯಾನದ ಭಾಗವಾಗಿ 129.5 ಕೋಟಿ ಡೋಸ್‌ಗಳನ್ನು ನೀಡಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

Stay updated with us for all News in Kannada at Facebook | Twitter
Scroll Down To More News Today