Corona Cases: ಭಾರತದಲ್ಲಿ 15,940 ಮಂದಿಗೆ ಕೊರೊನಾ ಸೋಂಕು ದೃಢ
Corona Cases in India: ನಿನ್ನೆಗೆ ಹೋಲಿಸಿದರೆ ಇಂದಿನ ಕೊರೊನಾ ಪ್ರಭಾವ ಭಾರತದಲ್ಲಿ ಕೊಂಚ ಕಡಿಮೆಯಾಗಿದೆ, ಕಳೆದ 24 ಗಂಟೆಗಳಲ್ಲಿ 15,940 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿದೆ
Corona Updates in India: ನಿನ್ನೆಗೆ ಹೋಲಿಸಿದರೆ ಇಂದಿನ ಕೊರೊನಾ ಪ್ರಭಾವ (Covid-19) ಭಾರತದಲ್ಲಿ ಕೊಂಚ ಕಡಿಮೆಯಾಗಿದೆ, ಕಳೆದ 24 ಗಂಟೆಗಳಲ್ಲಿ 15,940 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿದೆ.
ಇಂದು ಬೆಳಗ್ಗೆ ಕೇಂದ್ರ ಆರೋಗ್ಯ ಸಚಿವಾಲಯವು ಭಾರತದಲ್ಲಿ ದಿನನಿತ್ಯದ ಕೊರೊನಾ ಸೋಂಕಿಗೆ ಸಂಬಂಧಿಸಿದ ವರದಿಯನ್ನು ಬಿಡುಗಡೆ ಮಾಡಿದೆ.
ದೇಶದಲ್ಲಿ 15,940 ಹೊಸ ಕೊರೊನಾ ಪ್ರಕರಣಗಳು ದೃಢ
ಅದರಂತೆ ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ 15,940 ಮಂದಿಗೆ ಕೊರೊನಾ ಸೋಂಕು (Corona Virus) ತಗುಲಿರುವುದು ದೃಢಪಟ್ಟಿದೆ (India Reports 15,940 New Corona Cases in 24 Hours). ನಿನ್ನೆ 17 ಸಾವಿರದ 336 ಪ್ರಕರಣಗಳು ವರದಿಯಾಗಿತ್ತು, ನಿನ್ನೆಗೆ ಹೋಲಿಸಿದರೆ ಕೊರೊನಾ ಪ್ರಮಾಣ ಕೊಂಚ ತಗ್ಗಿದೆ.
ಹೀಗಾಗಿ ದೇಶದಲ್ಲಿ ಇದುವರೆಗೆ ಕೊರೊನಾ ಸೋಂಕಿತರ ಸಂಖ್ಯೆ (Corona Cases) 4 ಕೋಟಿ 33 ಲಕ್ಷ 78 ಸಾವಿರದ 234ಕ್ಕೆ ಏರಿಕೆಯಾಗಿದೆ.
ಕಳೆದ 24 ಗಂಟೆಗಳಲ್ಲಿ 12 ಸಾವಿರದ 425 ಮಂದಿ ಕೊರೊನಾ ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ. ಹೀಗಾಗಿ ಭಾರತದಲ್ಲಿ ಕೊರೊನಾದಿಂದ ಚೇತರಿಸಿಕೊಂಡವರ ಸಂಖ್ಯೆ 4 ಕೋಟಿ 27 ಲಕ್ಷ 61 ಸಾವಿರದ 481ಕ್ಕೆ ಏರಿಕೆಯಾಗಿದೆ.
ದೇಶಾದ್ಯಂತ 91 ಸಾವಿರದ 779 ಜನರು ವೈರಸ್ಗೆ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕೊರೊನಾ ಸೋಂಕಿನಿಂದ ಕಳೆದ 24 ಗಂಟೆಗಳಲ್ಲಿ ಕನಿಷ್ಠ 20 ಜನರು ಸಾವನ್ನಪ್ಪಿದ್ದಾರೆ (Corona Death). ಇದರ ಪರಿಣಾಮವಾಗಿ ಭಾರತದಲ್ಲಿ ಒಟ್ಟು ಕೊರೊನಾ ಸಾವಿನ ಸಂಖ್ಯೆ 5 ಲಕ್ಷ 24 ಸಾವಿರ 974 ಕ್ಕೆ ಏರಿದೆ.
ಏತನ್ಮಧ್ಯೆ, ದೇಶಾದ್ಯಂತ ಇದುವರೆಗೆ 196 ಕೋಟಿ 94 ಲಕ್ಷದ 40 ಸಾವಿರದ 932 ಲಸಿಕೆಗಳನ್ನು (Corona Vaccine) ನೀಡಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.
India Reports 15,940 New Corona Cases in 24 Hours
#COVID19 | India reports 15,940 fresh cases and 20 deaths in the last 24 hours.
Active cases 91,779
Daily positivity rate 4.39% pic.twitter.com/EjMC4GKIZv— ANI (@ANI) June 25, 2022
Follow Us on : Google News | Facebook | Twitter | YouTube